Advertisement

ಆ್ಯಕ್ಷನ್‌ ಹೀರೋನಾ ಕಾಮನ್‌ಮ್ಯಾನ್‌ ಸಿನ್ಮಾ

12:31 PM Feb 05, 2021 | Team Udayavani |

“ನನ್ನ ಸಿನಿಮಾ ಅಂದ್ರೆ ಆಡಿಯನ್ಸ್‌ ಆ್ಯಕ್ಷನ್‌ ಸಿನಿಮಾ ಇರಬಹುದು ಅಂಥ ಅಂದುಕೊಂಡೇ ಸಾಮಾನ್ಯವಾಗಿ ಥಿಯೇಟರ್‌ಗೆ ಬರುತ್ತಾರೆ. ಆದ್ರೆ, ಹಾಗೇ ಬರುವ ಆಡಿಯನ್ಸ್‌ಗೆ ಥಿಯೇಟರ್‌ನಲ್ಲಿ ಒಂದು ಸರ್‌ಪ್ರೈಸ್‌ ಈ “ಶ್ಯಾಡೊ’ ಸಿನಿಮಾದಲ್ಲಿ ಇರುತ್ತೆ. ಅದು ಏನು ಅನ್ನೋದನ್ನ ಥಿಯೇಟರ್‌ನಲ್ಲೇ ನೋಡಬೇಕು…’ – ಹೀಗೆ ಹೇಳುತ್ತ ಮಾತಿಗಿಳಿದವರು ನಟ ವಿನೋದ್‌ ಪ್ರಭಾಕರ್‌. ಸುಮಾರು ಎರಡು ವರ್ಷಗಳ ನಂತರ ವಿನೋದ್‌ ಪ್ರಭಾಕರ್‌ ಅಭಿನಯದ ಚಿತ್ರ “ಶ್ಯಾಡೊ’ ಈ ವಾರ ತೆರೆಗೆ ಬರುತ್ತಿದೆ.

Advertisement

ಇದೇ ವೇಳೆ ಮಾತಿಗೆ ಸಿಕ್ಕ ವಿನೋದ್‌ ಪ್ರಭಾಕರ್‌ ತಮ್ಮ “ಶ್ಯಾಡೊ’ ಗೆಟಪ್‌ ಬಗ್ಗೆ ಒಂದಷ್ಟು ಮಾತನಾಡಿದರು.

“ಸಾಮಾನ್ಯವಾಗಿ ಯಾವುದೇ ಆ್ಯಕ್ಷನ್‌ ಸಿನಿಮಾದಲ್ಲಿ ಒಬ್ಬ ಹೀರೋ ಅಂತಿದ್ರೆ, ಅವನ ಎದುರಿಗೆ ಗುದ್ದಾಡೋಕ್ಕೆ ಅಂತ ಒಬ್ಬ ವಿಲನ್‌ ಇದ್ದೇ ಇರುತ್ತಾನೆ. ಆರಂಭದಿಂದ ಅಂತ್ಯದವರೆಗೂ ಈ ಇಬ್ಬರ ಕಾದಾಟ, ಹೇಗೆ ಕಾದಾಡುತ್ತಾರೆ ಅನ್ನೋದೇ ಸಿನಿಮಾದ ಮೇಜರ್‌ ಕಂಟೆಂಟ್‌ ಆಗಿರುತ್ತದೆ. ಆದ್ರೆ “ಶ್ಯಾಡೊ’ ಸಿನಿಮಾದಲ್ಲಿ ಹಾಗಿಲ್ಲ! ಇದು ಕೂಡ ಆ್ಯಕ್ಷನ್‌ ಜಾನರ್‌ ಸಿನಿಮಾವಾದ್ರೂ, ಇಲ್ಲಿ ಹೀರೋ ಒಬ್ಬ ಕಾಮನ್‌ಮ್ಯಾನ್‌ ಆಗಿ ಕಾಣಿಸಿಕೊಳ್ತಾನೆ. ಅವನಿಗೆ ಯಾವುದೇ ಸ್ಪೆಷಲ್‌ ಬಿಲ್ಡಪ್‌, ರಿಚ್‌ ಎಂಟ್ರಿ ಅಂತೇನೂ ಇರೋದಿಲ್ಲ. ಹೀರೋ ಯಾರು – ವಿಲನ್‌ ಯಾರು ಅಂತಾನೇ ಆಡಿಯನ್ಸ್‌ಗೆ ಗೊತ್ತಾಗೋದಿಲ್ಲ. ಅದೇ ಈ ಸಿನಿಮಾದ ಹೈಲೈಟ್‌. ಇಡೀ ಸಿನಿಮಾದಲ್ಲಿ ಇರೋದೆ ಎರಡು ಫೈಟ್ಸ್‌. ಉಳಿದದ್ದೆಲ್ಲವೂ ಸ್ಕ್ರೀನ್‌ ಪ್ಲೇ ನಲ್ಲಿಯೇ ನಡೆಯುತ್ತದೆ’ ಎನ್ನುತ್ತಾರೆ ವಿನೋದ್‌ ಪ್ರಭಾಕರ್‌.

ಇದನ್ನೂ ಓದಿ:ಫ‌ಸ್ಟ್‌ ಹಾಫ್ ಒಂದ್‌ ಲೆಕ್ಕ:ಸೆಕೆಂಡ್‌ಹಾಫ್ ಇನ್ನೊಂದ್‌ ಲೆಕ್ಕ! ವರ್ಷಪೂರ್ತಿ ಫ‌ುಲ್‌ ಮೀಲ್ಸ್

ಇನ್ನು “ಶ್ಯಾಡೊ’ ಚಿತ್ರದ ಕಥಾಹಂದರ ಮತ್ತು ಪಾತ್ರದ ಬಗ್ಗೆ ಮಾತನಾಡುವ ವಿನೋದ್‌ ಪ್ರಭಾಕರ್‌, “ಇದರಲ್ಲಿ ನಾನೊಬ್ಬ ಕಾಮನ್‌ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದೇನೆ. ಇಡೀ ಸಿನಿಮಾದಲ್ಲಿ ನನಗೇ ಇರೋದು ಕೇವಲ ಮೂರು ಕಾಸ್ಟೂಮ್‌. ಕಾಮನ್‌ಮ್ಯಾನ್‌ ಒಬ್ಬ ತನ್ನ ನೆರಳು ಕಳೆದು ಹೋಗಿದೆ ಅಂಥ ಸ್ಟೇಷನ್‌ಗೆ ಹೋಗಿ ಕಂಪ್ಲೆಂಟ್‌ ಕೊಡುತ್ತಾನೆ. ಅಲ್ಲಿಂದ ಸಿನಿಮಾದ ಕಥೆಯ ಒಂದೊಂದೇ ಸಸ್ಪೆನ್ಸ್‌ ಎಳೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಾಮನ್‌ಮ್ಯಾನ್‌ ಒಬ್ಬ ತನಗಾದ ಅನ್ಯಾಯದ ವಿರುದ್ಧ ಹೇಗೆಲ್ಲ ಹೋರಾಡುತ್ತಾನೆ? ನೆರಳು ಕೂಡ ಕಳೆದು ಹೋಗೋದಕ್ಕೆ ಸಾಧ್ಯನಾ? ಅದು ಹೇಗೆ? ಅನ್ನೋದು ಸಿನಿಮಾದ ಒನ್‌ಲೈನ್‌ ಸ್ಟೋರಿ. ಸಿನಿಮಾದ ಸ್ಟೋರಿಗೆ ತಕ್ಕಂತೆ “ಶ್ಯಾಡೊ’ ಅಂಥ ಟೈಟಲ್‌ ಇಟ್ಟಿದ್ದೇವೆ. ಅದು ಹೇಗಿದೆ ಅನ್ನೋದನ್ನ ಸ್ಕ್ರೀನ್‌ ಮೇಲೆ ನೋಡ್ಬೇಕು’ ಎನ್ನುತ್ತಾರೆ.

Advertisement

“ನಮ್ಮ ಪ್ಲಾನ್‌ ಪ್ರಕಾರ ಇಷ್ಟೊತ್ತಿಗಾಗಲೇ “ಶ್ಯಾಡೊ’ ಸಿನಿಮಾ ರಿಲೀಸ್‌ ಆಗಿರಬೇಕಿತ್ತು. 2018ರಲ್ಲೇ ಶುರುವಾದ “ಶ್ಯಾಡೊ’ ಶೂಟಿಂಗ್‌ ಕೇವಲ ಮೂರೇ ತಿಂಗಳಲ್ಲಿ ಮುಕ್ತಾಯವಾಗಿತ್ತು. ಆದರೆ ಚಿತ್ರದ ಗ್ರಾμಕ್ಸ್‌, ಎನಿಮೇಶನ್‌ ಹೀಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಸಾಕಷ್ಟು ಸಮಯ ತೆಗೆದುಕೊಂಡಿತು. ಅದಾದ ಬಳಿಕ ರಿಲೀಸ್‌ ಮಾಡಬೇಕು ಅಂದುಕೊಳ್ಳುವ ಹೊತ್ತಿಗೆ ಕೋವಿಡ್‌ ಲಾಕ್‌ಡೌನ್‌ ಅನೌನ್ಸ್‌ ಆಯ್ತು. ಹೀಗಾಗಿ “ಶ್ಯಾಡೊ’ ರಿಲೀಸ್‌ ಸ್ವಲ್ಪ ತಡವಾಯ್ತು’ ಅನ್ನೋದು ವಿನೋದ್‌ ಮಾತು.

ಇದನ್ನೂ ಓದಿ:ಚಂದನ್‌ ಆಚಾರ್‌ ಕಣ್ಣಲ್ಲಿ ರಜಾದಿನ ಕನಸು

“ಶ್ಯಾಡೊ’ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ಗೆ ನಾಯಕಿಯಾಗಿ ಪಂಜಾಬಿ ಬೆಡಗಿ ಶೋಭಿತಾ ರಾಣಾ ಕಾಣಿಸಿಕೊಂಡಿ ದ್ದಾರೆ. ಈಗಾಗಲೇ ಕೆಲ ಪಂಜಾಬಿ, ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶೋಭಿತಾಗೆ ಇದು ಮೊದಲ ಕನ್ನಡದ ಚಿತ್ರ. “ಮೊದಲ ಕನ್ನಡ ಚಿತ್ರವಾದರೂ, ಶೋಭಿತಾ ತಮ್ಮ ಪಾತ್ರವನ್ನು ತುಂಬ ಚೆನ್ನಾಗಿ ನಿರ್ವಹಿಸಿದ್ದಾರೆ. ಅವರಿಗೂ ಸಿನಿಮಾದಲ್ಲಿ ಎರಡು ಡಿಫ‌ರೆಂಟ್‌ ಶೇಡ್‌ ಕ್ಯಾರೆಕ್ಟರ್‌ ಇದೆ. ಅವರ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆ ಶರತ್‌ ಲೋಹಿತಾಶ್ವ, ಗಿರಿ, ಉಮೇಶ್‌, ಲೋಕೇಶ್‌, ತೆಲುಗು ನಟ ಶ್ರವಣ್‌ ರಾಘವ್‌ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರದಲ್ಲಿ ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ವಿನೋದ್‌.

“ಶ್ರೀಕನಕದುರ್ಗ ಚಲನಚಿತ್ರ’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಶ್ಯಾಡೊ’ ಚಿತ್ರಕ್ಕೆ ತೆಲುಗು ಮೂಲದ ಚಕ್ರವರ್ತಿ ಸಿ.ಹೆಚ್‌ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ರವಿ ಗೌಡ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮನೋಹರ ಜೋಶಿ ಛಾಯಾ ಗ್ರಹಣ, ಛೋಟಾ ಕೆ. ಪ್ರಸಾದ್‌ ಸಂಕಲನವಿದೆ. ಚಿತ್ರದ ಎರಡು ಹಾಡುಗಳಿಗೆ ಅಚ್ಚು ಸಂಗೀತ ಸಂಯೋಜಿಸಿದ್ದಾರೆ. ಹೈದರಾಬಾದ್‌, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ನಡೆಸಲಾಗಿದೆ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next