Advertisement
ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ವಿನೇಶ್ ಅವರಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. 30 ರ ಹರೆಯದ ಒಲಿಂಪಿಯನ್, ಯುವ ನಾಯಕಿ ಖಾಪ್ ಪಂಚಾಯತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ಬ್ರಿಜ್ ಭೂಷಣ್ ವಿರುದ್ಧ ಕಿಡಿಬಿಜೆಪಿ ನಾಯಕ ಬ್ರಿಜ್ ಭೂಷಣ್ ಅವರ “ವಂಚನೆ” ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್ “ನಾನು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪದಕವನ್ನು ಪಡೆಯದಿರುವ ನೋವು ಕಡಿಮೆಯಾಗಿದೆ.ಬ್ರಿಜ್ ಭೂಷಣ್ ದೇಶವಲ್ಲ, ಜನರು ನನ್ನೊಂದಿಗೆ ನಿಂತಿದ್ದಾರೆ, ಅವರು ನನ್ನ ಸ್ವಂತದವರು. ಬ್ರಿಜ್ ಭೂಷಣ್ ನನಗೆ ಎಂದಿಗೂ ಅಸ್ತಿತ್ವದಲ್ಲಿಲ್ಲ” ಎಂದು ಕಿಡಿಯಾಗಿದ್ದಾರೆ. ಶುಕ್ರವಾರ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಅವರೊಂದಿಗೆ ವಿನೇಶ್ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ ಬಳಿಕ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.
ಹರಿಯಾಣದ ಜಾಟ್ ಪ್ರಾಬಲ್ಯದ ಬಂಗಾರ್ ಪ್ರದೇಶದ ಜುಲಾನಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಲೋಕದಳ (INLD) ಮತ್ತು ಜನನಾಯಕ್ ಜನತಾ ಪಾರ್ಟಿ (JJP) ಯಂತಹ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿವೆ. 2009 ಮತ್ತು 2014ರಲ್ಲಿ ಐಎನ್‌ಎಲ್‌ಡಿಯ ಪರ್ಮಿಂದರ್ ಸಿಂಗ್ ಗೆದ್ದಿದ್ದರೆ, ಜೆಜೆಪಿಯ ಅಮರ್‌ಜೀತ್ ಧಂಡಾ 2019ರಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಹರಿಯಾಣದ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ. ಜಾತಿ ಲೆಕ್ಕಾಚಾರ
ಕ್ರೀಡಾ ಲೋಕದ ತಾರೆ ಜಾಟ್ ಪ್ರತಿನಿಧಿಯಾಗಿ ವಿನೇಶ್ ಕಾಂಗ್ರೆಸ್‌ಗೆ ಪ್ರವೇಶಿಸಿದ್ದು ಜುಲಾನಾದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ವಿನೇಶ್ ಅವರ ಮಾವ(ಪತಿ ಸೋಮವೀರ್ ರಾಠಿ ತಂದೆ) ರಾಜ್‌ಪಾಲ್ ರಾಠಿ, ರಾಠಿ ಸಮುದಾಯದ ಖಾಪ್‌ನೊಂದಿಗೆ ಘರ್ವಾಲಿ, ಖೇರಾ ಬಖ್ತಾ, ಜಮೋಲಾ, ಕರೇಲಾ, ಜಯಜಯವಂತಿ ಮತ್ತು ಘೆರ್ತಿ ಎಂಬ ಆರು ಗ್ರಾಮಗಳನ್ನು ಪ್ರತಿನಿಧಿಸುವ ಚುಗಾಮಾ ಖಾಪ್ ವಿನೇಶ್ ಳನ್ನು ಸ್ವಾಗತಿಸುತ್ತಿದೆ” ಎಂದು ಹೇಳಿದ್ದಾರೆ.