Advertisement

ಬ್ಯಾಂಕಿಗೆ ವಂಚಿಸಿದ ವಿನ್ಸಮ್‌ ಸಂಸ್ಥೆ ನಿರ್ದೇಶಕ ಬಂಧನ

11:59 AM Mar 13, 2018 | Team Udayavani |

ನವದೆಹಲಿ: ವರ್ಷಗಳ ಹಿಂದೆ ಭಾರತದ 15 ಬ್ಯಾಂಕುಗಳಿಂದ ಸುಮಾರು 6,800 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದ ಆರೋಪ ಹೊತ್ತಿರುವ ವಿನ್ಸಮ್‌ ಗ್ರೂಪ್‌ ಸಂಸ್ಥೆಯ ಮಾಜಿ ನಿರ್ದೇಶಕ ಹನ್ಸ್‌ಮುಖ್‌ ಶಾ ಎಂಬುವರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸೋಮವಾರ ಬಂಧಿಸಿದೆ. 2013ರಲ್ಲಿ ಶಾ ಅವರು ವಿನ್ಸಮ್‌ ಗ್ರೂಪ್‌ನ ನಿರ್ದೇಶಕರಾಗಿದ್ದಾಗ ಈ ಸಾಲ ಪಡೆಯಲಾಗಿತ್ತೆಂದು ಹೇಳಲಾಗಿದೆ. 

Advertisement

ವಜ್ರ ವ್ಯಾಪಾರಿ ನೀರವ್‌ ಮೋದಿಯಿಂದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು 12,600 ಕೋಟಿ ರೂ. ವಂಚನೆಯಾದ ಬೆನ್ನಲ್ಲೇ ಸಿಬಿಐ, ಸಾವಿರಾರು ಕೋಟಿ ರೂ. ಸಾಲ ಪಡೆದು ಸಾಲ ಮರುಪಾವತಿ ಮಾಡದವರನ್ನು ಜಾಲಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next