Advertisement

ವಿನಯ್‌ ಹಾದಿ ಸುಲಭವಿಲ್ಲ

02:18 AM Apr 04, 2019 | Sriram |

ಧಾರವಾಡ: ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಧಾರವಾಡ ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ ಟಿಕೆಟ್‌ನ್ನು ಕೊನೆಗೂ ವಿನಯ ಕುಲಕರ್ಣಿ ಗುದ್ದಾಡಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಟಿಕೆಟ್‌ ನೀಡಿಕೆಯಲ್ಲಿ ಆಗಿರುವ ವಿಳಂಬವನ್ನು
ಸರಿಪಡಿಸಿಕೊಳ್ಳುವುದೇ ಪಕ್ಷ ಹಾಗೂ ಅಭ್ಯರ್ಥಿಗೆ ಸವಾಲಾಗಿ ಪರಿಣಮಿಸಿದೆ.

Advertisement

ಹೈಕಮಾಂಡ್‌ ಮಟ್ಟದವರೆಗೂ ಲಾಬಿ ಇರುವ ವಿನಯ್‌ ಅವರಿಗೆ ಟಿಕೆಟ್‌ ನೀಡಿಕೆಯಲ್ಲಿ ಕೈ ಹಿಡಿದಿದ್ದು ಗೃಹ ಸಚಿವ ಎಂ.ಬಿ.ಪಾಟೀಲ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ. ಹೀಗಾಗಿ ಕುಲಕರ್ಣಿ ಅವರು ಹರಸಾಹಸ ಪಟ್ಟು ಟಿಕೆಟ್‌ ಪಡೆದುಕೊಳ್ಳಬೇಕಾಯಿತು. ಈ ನಡುವೆ ಶಾಕೀರ್‌ ಸನದಿಗೆ ಕಣದಿಂದ ಹಿಂದೆ ಸರಿಯುವಂತೆ ಸ್ವತಃ ಅಲ್ಪಸಂಖ್ಯಾತ ಮುಖಂಡರಾದ ಸಿ.ಎಂ. ಇಬ್ರಾಹಿಂ,
ಜಮೀರ್‌ ಅಹ್ಮದ್‌ ಖಾನ್‌ ಅವರೇ ಸಲಹೆ ನೀಡಿದ್ದಲ್ಲದೇ, ರಾಜ್ಯಸಭೆ ಪ್ರವೇಶದ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಧಾರವಾಡ ಲೋಕಸಭಾ ಚುನಾವಣೆ ಕಣ ಇಬ್ಬರು ಪ್ರಬಲ ಅಭ್ಯರ್ಥಿಗಳಿಂದ ರಂಗೇರಿದ್ದಂತೂ ಸತ್ಯ.


Advertisement

Udayavani is now on Telegram. Click here to join our channel and stay updated with the latest news.

Next