Advertisement
ಗಣಪತಿಯ ಸಣ್ಣ ಕಣ್ಣು ಸೂಕ್ಷ್ಮ ದೃಷ್ಟಿಯ ಸಂಕೇತ, ಅಗಲವಾದ ಕಿವಿಗಳು ಎಲ್ಲವನ್ನೂ ತಾಳ್ಮೆಯಿಂದ ಆಲಿಸುವ ಗುಣದ ಸಂಕೇತ, ಉದ್ದವಾದ ಸೊಂಡಿಲು– ಕೇವಲ ವಾಸನೆಗಳ ಆಘ್ರಾಣಕಲ್ಲಾ. ಎಲ್ಲಾ ಬಗೆಯ ಜ್ಞಾನಗಳ ಆಘ್ರಾಣಿನಿಸಿಕೊಳ್ಳುವ ಮತ್ತು ಸುತ್ತಲಿನ ಪರಿಸರದ ಸ್ಪಂದನೆಯನ್ನು ಅರಿಯುವ ಅಗತ್ಯತೆಯ ಸೂಚಕ. ಗಣೇಶನ ದೊಡ್ಡ ಹೊಟ್ಟೆಯದ್ದು ಕೇವಲ ಹಸಿವಲ್ಲ, ಅದು ಜ್ಞಾನದ ಹಸಿವಿನ ಸೂಚಕ. ಮೋದಕಾದಿ ತಿನಿಸುಗಳು ಸಿಹಿ – ಸಂತೋಷಗಳನ್ನು ದಯಪಾಲಿಸುವ ಮಂಗಳಕರ ಮಹಾಗಣಪತಿಯ ಸೂಚಕ.
Related Articles
Advertisement
ಷೋಡಶೋಪಚಾರ: ಷೋಡಶೋಪಚಾರದ ಪೂಜೆಯು 16 ಬಗೆಯ ಪೂಜೆಯ ವಿಧಾನಗಳನ್ನು ಒಳಗೊಂಡಿರುತ್ತದೆ, ಈ 16 ಬಗೆಯ ಉಪಚಾರಗಳೆಂದರೆ… ಗಣೇಶನ ಪಾದಗಳನ್ನು ತೊಳೆದ ನಂತರ, ವಿಗ್ರಹವನ್ನು ಹಾಲು, ತುಪ್ಪ, ಜೇನುತುಪ್ಪ, ಮೊಸರು, ಸಕ್ಕರೆಯಿಂದ ಕೂಡಿದ ಪಂಚಾಮೃತ ಅಭಿಷೇಕ ನಂತರ ಪರಿಮಳಯುಕ್ತ ಎಣ್ಣೆ ಮತ್ತು ಗಂಗಾಜಲದಿಂದ ಅಭಿಷೇಕ. ನಂತರ ಹೊಸ ವಸ್ತ್ರ, ಹೂವುಗಳು, ಮುರಿಯದ ಅಕ್ಷತೆಯ ಅಕ್ಕಿ, ಹಾರ, ಸಿಂಧೂರ ಮತ್ತು ಚಂದನದ ಜೊತೆಗೆ ಗಣೇಶನನ್ನು ಅಲಂಕರಿಸಿ. ಮೋದಕ, ವೀಳ್ಯದೆಲೆ, ತೆಂಗಿನಕಾಯಿ (ನೈವೇದ್ಯ) ಧೂಪ, ದೀಪ, ಸ್ತೋತ್ರಗಳು, ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಲಾಗುತ್ತದೆ.
ಉತ್ತರಪೂಜೆ : ಈ ಆಚರಣೆಯನ್ನು ವಿಸರ್ಜನಕ್ಕೆ ಮೊದಲು ನಡೆಸಲಾಗುತ್ತದೆ. ಅತ್ಯಂತ ಸಂತೋಷ ಮತ್ತು ಭಕ್ತಿಯಿಂದ, ಎಲ್ಲಾ ವಯೋಮಾನದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ. ಜನರು ಹಾಡುತ್ತಾ, ನೃತ್ಯ ಮಾಡುತ್ತಾ… ಮಂತ್ರಗಳ ಪಠಣ, ಆರತಿ, ಹೂವುಗಳ ಜೊತೆಗೆ ವಿದಾಯ ಹೇಳುವ ವಿಶೇಷ ಆಚರಣೆ.
ಗಣಪತಿ ವಿಸರ್ಜನೆ : ಮುಂದಿನ ವರ್ಷ ಜ್ಞಾನ ರೂಪಿಯಾಗಿ ಭಗವಂತ ಹಿಂತಿರುಗಲಿ ಎಂದು ಹಾರೈಸಿ ಗಣೇಶನ ಮೂರ್ತಿಯನ್ನು ಜಲಮೂಲಗಳಲ್ಲಿ ವಿಸರ್ಜಿಸಲಾಗುತ್ತದೆ.
“ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು। ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ।। ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ। ಜಸವು ಜನಜೀವನಕೆ” – ಮಂಕುತಿಮ್ಮ
ಡಿ.ವಿ.ಜಿಯ ಈ ಕಗ್ಗದಂತೆ, ಹಿರಿಯರ ಪ್ರತಿ ಆಚರಣೆಗಳ ಹಿಂದೆ ಜೀವನ ಸಾರ ಸಾರುವ ಮತ್ತು ವೈಜ್ಞಾನಿಕ, ತಾತ್ವಿಕ ಸತ್ಯಗಳನ್ನೊಳಗೊಂಡ ದೈವಿಕ ಜ್ಞಾನದ ಸ್ಪರ್ಶವಿರುತ್ತದೆ. ಹೊಸ ತಲೆಮಾರು ಅದನ್ನರಿತು ಮೂಲ ಉದ್ದೇಶ, ಆಚರಣೆಗಳಿಗೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಆಚರಣೆಗಳನ್ನು ಆಡಂಬರದ ಡಂಬಾಚಾರಿಕೆ ಇಲ್ಲದೆ ಆಚರಿಸುವ ಕಡೆ ಗಮನಕೊಡಬೇಕಿದೆ, ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು, ಗುರುವೇ ದೇವರು.
- ದಿನೇಶ ಎಂ