Advertisement
ಪರಿಸರ ಪ್ರೇಮಿ: ಆರ್.ಕೆ.ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾಗಿರುವ ವಿನಯ್ ರಾಮಕೃಷ್ಣ ಅವರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುತ್ತಲೇ ಪರಿಸರ ಕುರಿತು ಜಾಗೃತಿ ಮೂಡಿಸಿಕೊಂಡು ಬಂದ ಇವರು ಅಪರೂಪದ ವ್ಯಕ್ತಿ. ಇಂದು ಪರಿಸರ ಪ್ರೇಮಿಯಾಗಿ ನಮ್ಮೊಡನಿದ್ದಾರೆ.
Related Articles
ರಾಜಕೀಯಕ್ಕೆ ಪ್ರವೇಶ ನೀಡಿಜನರ ಸೇವೆಮಾಡುವುದಕ್ಕೂ ಸೈ ಎಂದಿದ್ದಾರೆ.
Advertisement
ಇದನ್ನೂ ಓದಿ:ರಾಜ್ಯಗಳಿಗೆ ಒಬಿಸಿ ಪಟ್ಟಿ ಅಧಿಕಾರ ಮರುಸ್ಥಾಪನೆ : ಸಚಿವ ಶ್ರೀರಾಮುಲು ಧನ್ಯವಾದ
ಗ್ರಾಮೀಣ ಪ್ರತಿಭೆಗಳ ಆಶಾಕಿರಣ ಆರ್‌ಕೆ ವಿದ್ಯಾಸಂಸ್ಥೆಮಂಡ್ಯ ಜಿಲ್ಲೆಯು, ಶೈಕ್ಷಣಿಕ ಪ್ರಗತಿಯಿಂದ ದೂರ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ಹೊರಬರುತ್ತಿದೆ.ಇದಕ್ಕೆಇಲ್ಲಿನ ಶಿಕ್ಷಣ ಸಂಸ್ಥೆಗಳು ಕಾರಣ, ಜಿಲ್ಲೆಯಲ್ಲಿರುವ ಕೆಲವೇ ಪರಿಣಾಮಕಾರಿ ವಿದ್ಯಾಸಂಸ್ಥೆಗಳಲ್ಲಿ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯಲ್ಲಿರುವ ಆರ್‌ಕೆ ವಿದ್ಯಾ ಸಂಸ್ಥೆಯೂ ಒಂದು. ಆರ್‌ಕೆ ಶಿಕ್ಷಣ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಈ ಭಾಗದ ನೂರಾರು ಗ್ರಾಮಗಳ ವಿದ್ಯಾರ್ಥಿಗಳ ಭವಿಷ್ಯದ ಆಶಾದೀಪವಾಗಿ ಕಾರ್ಯ ನಿರ್ವಹಿಸುತ್ತಿರುವುದು ತಾಲೂಕಿಗೆ ಹೆಮ್ಮೆಯ ವಿಚಾರ. ಸಾವಯವ ಕೃಷಿಗೆ ಉತ್ತೇಜನ
ವಿನಯ್ ರಾಮಕೃಷ್ಣ ಅವರು, ಜನರ ಆರೋಗ್ಯವೇ ಮುಖ್ಯ ಎಂಬುದನ್ನು ಮನಗಂಡು ಪರಿಸರದಜೊತೆಗೆ ಸಾವಯವ ಕೃಷಿಗೆ ಉತ್ತೇಜನ ನೀಡಲು ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯ ಪಾಲುದಾರರಾಗಿದ್ದಾರೆ. ಅಲ್ಲದೆ, ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮದ ರೂವಾರಿಯಾಗಿದ್ದಾರೆ.
ಗ್ರಾಮೀಣ ರೈತರಿಗೆ ಸಾವಯವ ಕೃಷಿ ಬಗ್ಗೆ ತರಬೇತಿ ಆಯೋಜಿಸಿ ಕೃಷಿಕರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ, ಮದ್ದೂರು ತಾಲೂಕಿನಲ್ಲಿ ಶಿಕ್ಷಣದ ಜೊತೆಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಆರೋಗ್ಯಕರ ಬೆಳವಣಿಗೆಗೆ ಇವರು ಶ್ರಮಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಾವಿರಾರು ಗಿಡ ನೆಟ್ಟು ಪೋಷಣೆ
ಬಾಲ್ಯದಿಂದಲೇ ಗಿಡಮರಗಳ ಕುರಿತು ಆಪ್ತಸಂಬಂಧ ಹೊಂದಿದ್ದ ವಿನಯ್ ರಾಮಕೃಷ್ಣ ಬೆಳೆಯುತ್ತ ಪರಿಸರ ಪ್ರೇಮಿಯಾಗಿ, ಈಗ ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯ ಪಾಲುದಾರರಾಗಿದ್ದಾರೆ. ಜೊತೆಗೆ ಆರ್.ಕೆ.ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ತಲೆಮಾರು ಕಾಲಕಾಲಕ್ಕೆ ಮಳೆ, ಬೆಳೆಯನ್ನು ಕಾಣುವಂತಾಗ ಬೇಕೆಂದು ಪರಿಸರ ಪ್ರಜ್ಞೆ ಮೂಡಿಸಲು ಶ್ರಮಿಸುತ್ತಿದ್ದಾರೆ. ಆರ್. ಕೆ.ವಿದ್ಯಾಸಂಸ್ಥೆಯು 50 ಎಕರೆ ವಿಸ್ತೀರ್ಣದಲ್ಲಿದ್ದು, ಅಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಸ್ನೇಹಿತರ ನೆರವನ್ನು ಪಡೆದುಕೊಂಡು ಗಿಡಮರಗಳನ್ನು ಜೋಪಾನ ಮಾಡಿದ ಪರಿಣಾಮ
ಇಂದು ಆ ಗಿಡಗಳು ಮರಗಳಾಗಿ ನೆರಳು ನೀಡುತ್ತಿವೆ. ಇವರ ಪರಿಶ್ರಮವನ್ನು ಕಂಡ ಅರಣ್ಯ ಇಲಾಖೆಯು ವಿನಯ್ ರಾಮಕೃಷ್ಣ
ಅವರಿಗೆ ಬೆನ್ನುತಟ್ಟಿದ್ದಾರೆ. -ಅಣ್ಣೂರು ಸತೀಶ್