Advertisement

ವಿನಯ್‌ ಗ್ರಾಮಾಯಣ ರೆಡಿ

10:53 AM May 07, 2020 | Suhan S |

ವಿನಯ್‌ ರಾಜ್‌ಕುಮಾರ್‌ ಅವರ ಅನಂತು ವರ್ಸಸ್‌ ನುಸ್ರತ್‌ ಚಿತ್ರದ ನಂತರ ಅವರ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಈ ನಡುವೆಯೇ ಅವರು ಗ್ರಾಮಾಯಣ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯನ್ನು ನೀವು ಕೇಳಿರಬಹುದು. ಆದರೆ ಆ ನಂತರ ಆ ಚಿತ್ರ ಏನಾಯಿತು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.  ಮೊದಲ ಹಂತವಾಗಿ ಚಿತ್ರದ ಟೀಸರ್‌ ಬಿಡುಗಡೆಯಾಗುತ್ತಿದೆ.

Advertisement

ಹೌದು, ಗ್ರಾಮಾಯಣ ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಪೋಸ್ಟರ್‌ ಬಿಟ್ಟಿರುವ ಚಿತ್ರತಂಡ, ವಸಿ ಲೇಟಾದ್ರು ಟಾಪಾಗೆ ಬತ್ತೀವಿ ಎಂದು ಟ್ವೀಟ್‌ ಮಾಡಿದೆ. ದೇವನೂರು ಚಂದ್ರು ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಲಾಕ್‌ ಡೌನ್‌ ಇಲ್ಲದಿದ್ದರೆ ಇಷ್ಟೊತ್ತಿಗೆ ಚಿತ್ರ ಬಿಡುಗಡೆ ಮಾಡುತ್ತಿತ್ತು. ಆದರೆ ಈಗ ಟೀಸರ್‌ ಬಿಡುಗಡೆ ಮಾಡುತ್ತಿದೆ.

ಹೆಸರಿಗೆ ತಕ್ಕಂತೆ ಗ್ರಾಮಾಯಣ ಒಂದು ಹಳ್ಳಿ ಹಿನ್ನೆಲೆಯ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳ ಜೊತೆಗೆ ಸಂದೇಶಾತ್ಮಕ ಅಂಶಗಳು ಕೂಡಾ ಇವೆಯಂತೆ. ರಾಘವೇಂದ್ರ ರಾಜ್‌ಕುಮಾರ್‌ ಕೂಡಾ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಕಥೆ ಇಷ್ಟಪಟ್ಟು ತಮ್ಮ ಮಗನಿಗಾಗಿ ಈ ಕಥೆಯನ್ನು ರಾಘಣ್ಣ ಓಕೆ ಮಾಡಿದ್ದಾರೆ. ವಿನಯ್‌ ರಾಜ್‌ಕುಮಾರ್‌ ಕೂಡಾ ಈ ಚಿತ್ರಕ್ಕಾಗಿ ತಮ್ಮ ಗೆಟಪ್‌ ಬದಲಿಸಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ವಿನಯ್‌ ಅವರಿಗೆ ಜೋಡಿಯಾಗಿ ಅಮೃತಾ ಅಯ್ಯರ್‌ ನಟಸಿದ್ದಾರೆ. ಈ ವರ್ಷ ಲವ್‌ ಮಾಕ್ಟೇಲ್‌ ಚಿತ್ರದ ಮೂಲಕ ಮೋಡಿ ಮಾಡಿದ ಅಮೃತಾ ಈಗ ಗ್ರಾಮಾಯಣ ಮೇಲೂ ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಸಂಪತ್‌, ಅಪರ್ಣಾ, ಶ್ರೀನಿವಾಸ ಪ್ರಭು, ಮಂಜುನಾಥ ಹೆಗಡೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next