Advertisement

ಡಾಂಬರು ಮೇಲೆದ್ದ ರಸ್ತೆ : ನಿತ್ಯ ಸಂಕಷ್ಟ

04:02 PM Oct 12, 2020 | Suhan S |

ತಿಪಟೂರು : ನಗರದ ಹಾಸನ ರಸ್ತೆಯಿಂದ ಅನಗೊಂಡನಹಳ್ಳಿ ಮಾರ್ಗದಿಂದ ಕೆರೆಗೋಡಿ-ರಂಗಾಪುರಕ್ಕೆ ಸಂಪರ್ಕ ಕಲ್ಪಿಸುವರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ರಸ್ತೆ ದುರಸ್ತಿಗೊಳಿಸಬೇಕೆಂದು ಈ ಭಾಗದ ವಾಹನ ಸವಾರರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಹರಸಾಹಸ: ಈ ರಸ್ತೆಯು ಕೆರೆಗೋಡಿ-ರಂಗಾಪುರ ಹಾಗೂ ದಸರೀಘಟ್ಟಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವರಸ್ತೆಯಾಗಿದ್ದು, ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿಭಕ್ತರು ಈ ಕ್ಷೇತ್ರಗಳಿಗೆ ಬಂದುಹೋಗುತ್ತಾರೆ. ಆದರೆ ರಸ್ತೆ ಬಹಳಷ್ಟು ಕಡೆಗಳಲ್ಲಿ ಹಾಳಾಗಿದ್ದು, ಉದ್ದುದ್ದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಹರಸಾಹಸ ಮಾಡಿಕೊಂಡು ವಾಹನಗಳನ್ನು ಚಲಾಯಿಸಬೇಕಾಗಿದೆ. ನೂರಾರು ವಾಹನಗಳು ಇಲ್ಲಿ ಸಂಚರಿಸು ತ್ತಿರುವುದರಿಂದ ಪ್ರತಿನಿತ್ಯ ಒಂದಲ್ಲೊಂದು ಅವಘಡ, ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದರಂತೂ ಕೆಸರು ಗದ್ದೆಯಾಗುತ್ತಿವೆ.

ನಿತ್ಯ ವಾಹನ ದಟ್ಟಣೆ: ಸಾರ್ವಜನಿಕರು ಹಾಗೂ ಸವಾರರಂತೂ ಹಿಡಿ ಶಾಪ ಹಾಕಿ ಕೊಂಡೇ ಓಡಾಡುತ್ತಿದ್ದಾರೆ. ಅಲ್ಲದೆ ಈ ಕ್ಷೇತ್ರ ಗಳಿಗೆ ಗಾಂಧಿನಗರ ಕಡೆಯಿಂದ ಹೋಗುವಮುಖ್ಯ ರಸ್ತೆಯು ಯುಜಿಡಿ ಕಾಮಗಾರಿಯಿಂದಾಗಿ ಕೆಸರು ಗದ್ದೆಯಂತಾಗಿದ್ದುಗುಂಡಿಗಳು ಬಿದ್ದಿರುವ ಕಾರಣ ಓಡಾಡಲು ಸಾಧ್ಯವಾಗದೇ ವಾಹನ ಸವಾರರು ಅನಗೊಂಡನಹಳ್ಳಿ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಪ್ರತಿನಿತ್ಯ ವಾಹನಗಳದಟ್ಟಣೆ ಹೆಚ್ಚಾಗಿರುತ್ತದೆ.

ಕ್ಯಾರೆ ಎನ್ನದ ಅಧಿಕಾರಿಗಳು: ಈ ರಸ್ತೆಯಲ್ಲಿ 2-3ಕಡೆ ಸೇತುವೆ ಕುಸಿತವುಂಟಾಗಿದ್ದು ರಾತ್ರಿ ಸಮಯದಲ್ಲಿ ಓಡಾಡಲು ಕಷ್ಟಸಾಧ್ಯ. ರಸ್ತೆಯ ಎರಡೂ ಅಂಚಿನಲ್ಲಿ ಗಿಡ-ಗಂಟಿಗಳು ಬೆಳೆದು ರಸ್ತೆಯನ್ನೇ ಆಕ್ರಮಿಸಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಾತ್ರಿ ಸಂಚರಿಸುವ ಸವಾರರಂತೂ ಪ್ರಾಣಿಗಳು ಅಡ್ಡಬಂದು ಅಪಘಾತವಾಗುತ್ತದೆಯೋ ಎಂದು ತಮ್ಮ ಜೀವ ಕೈಯಲ್ಲಿಡಿದುಕೊಂಡು ಮನೆ ತಲುಪುವಂತಾಗಿದೆ. ಹತ್ತು ಹಲವು ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಕ್ಯಾರೇ ಅನ್ನುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ರಸ್ತೆ ಡಾಂಬರೀಕರಣಗೊಳಿಸಿ, ಅಕ್ಕಪಕ್ಕದ ರಾಕ್ಷಸ ಗಾತ್ರದ ಮುಳ್ಳು ಬೇಲಿ ತೆರವುಗೊಳಿಸಿ, ವಾಹನ ಅಪಘಾತಕ್ಕೆ ತುತ್ತಾಗ ದಂತೆ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸವಾರರ ಒತ್ತಾಯವಾಗಿದೆ.ಒಂದುವೇಳೆರಸ್ತೆದುರಸ್ತಿಗೊಳಿಸದಿದ್ದರೆ ಜಿಪಂ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಹಾಗೂ ವಾಹನ ಸವಾರರು ಎಚ್ಚರಿಕೆ ನೀಡಿದ್ದಾರೆ.

Advertisement

ಶ್ರೀಮಠಕ್ಕೆ ಭಕ್ತರು ಬರಲು ಹಾಗೂ ಈ ಭಾಗದ ಹತ್ತಾರು ಹಳ್ಳಿಗಳ ಜನತೆ ಓಡಾಡಲು ಈ ರಸ್ತೆಯೇ ಮುಖ್ಯವಾಗಿದೆ.ಕೂಡಲೇ ಶಾಸಕರು, ಅಧಿಕಾರಿಗಳು ಈ ರಸ್ತೆಗೆ ಡಾಂಬರೀಕರಣಮಾಡಿಸಿಕೊಡಬೇಕೆಂದುಆಗ್ರಹಿಸುತ್ತೇನೆ. – ಶ್ರೀಗುರುಪರದೇಶಿ ಕೇಂದ್ರ ಸ್ವಾಮೀಜಿ, ಕೆರೆಗೋಡಿ- ರಂಗಾಪುರ ಸುಕ್ಷೇತ

ರಸ್ತೆ ರಿಪೇರಿ ಮಾಡಿಸಿಕೊಡಲು ಶಾಸಕರು, ಅಧಿಕಾರಿಗಳು, ಜಿಪಂ ಸದಸ್ಯರಿಗೆ ಈಗಾಗಲೇ ಹತ್ತಾರು ಬಾರಿ ಮನವಿ ಮಾಡಲಾಗಿದೆ. ಆದರೆ,ಯಾವುದೇಕ್ರಮ ಕೈಗೊಂಡಿಲ್ಲ.ಕೂಡಲೇರಸ್ತೆಗೆ ಡಾಂಬರೀಕರಣ ಮಾಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ದೇವರಾಜು, ಕೆರೆಗೋಡಿ

Advertisement

Udayavani is now on Telegram. Click here to join our channel and stay updated with the latest news.

Next