ಬೈಲಹೊಂಗಲ: ಗ್ರಾಮದಲ್ಲಿನ ಸಮಸ್ಯೆಗಳನ್ನು ತಿಳಿದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಭೇಟಿ ನೀಡಲಾಗಿದ್ದು ನೇಗಿನಹಾಳ ಗ್ರಾಮದಲ್ಲಿ 30ಕ್ಕೂ ಅಧಿಕ ಮನೆಗಳು ಬಿದ್ದಿರುವುದು ಗಮನಕ್ಕೆ ಬಂದಿದೆ. ವಿಷಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸಲಾಗವುದು ಎಂದು ತಹಶೀಲ್ದಾರ್ ಬಸವರಾಜ ನಾಗರಾಳ ಹೇಳಿದರು.
ಅವರು ತಾಲೂಕಿನ ನೇಗಿನಹಾಳ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ, ಗ್ರಾಮದ ಗಂಗಾಧರ ಕೆರೆ, ಜನತಾ ಕಾಲೋನಿ ಕೆರೆಗಳ ನೀರು ಗ್ರಾಮದ ಮನೆಗಳಿಗೆ ನುಗ್ಗುತ್ತಿರುವ ಸ್ಥಳಪರಿಶೀಲಿಸಿ ಮಾತನಾಡಿ, ಅತಿವೃಷ್ಟಿಯಿಂದ ಹಳ್ಳದಬಾಂದಾರ ಹಾಳಾಗಿದ್ದು ಹಾಗೂ ಸೇತುವೆಗಳುಚಿಕ್ಕದಾಗಿದ್ದರಿಂದ ಗ್ರಾಮದಲ್ಲಿ ಬಹಳಷ್ಟುತೊಂದರೆಯಾಗುತ್ತಿದೆ. ಕೆಲವು ದಿನಗಳ ಹಿಂದೆಗ್ರಾಮದಲ್ಲಿ ಎಂದೂ ಕಂಡರಿಯದಷ್ಟು 220ಸೆ. ಮೀ. ಸುರಿದ ಭಾರೀ ಮಳೆಯಿಂದ ಕೆರೆಕಟ್ಟೆಗಳು ತುಂಬಿಕೊಂಡು ನೆರೆಹಾವಳಿ ಉಂಟಾಗಿ ಗ್ರಾಮದ ಕೆಲವು ಮನೆಗಳು ಜಲಾವೃತಗೊಂಡಿದ್ದವು.
ಇದರಿಂದ ಬಹಳಷ್ಟು ಮನೆಗಳು ಬಿದ್ದು ಜನಸಾಮಾನ್ಯರ ಸ್ಥಿತಿ ಗಂಭೀರವಾಗಿದೆ ಎಂದುಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರಿಂದ ಇಂದು ಸ್ಥಳ ಪರಿಶೀಲನೆ ಮಾಡಲಾಗಿದೆ. ಜೊತೆಗೆಗ್ರಾಮದಲ್ಲಿನ ರಸ್ತೆಗಳು, ಬಾಂದಾರಗಳು, ಚರಂಡಿಗಳು ಮಳೆಗೆ ಕೊಚ್ಚಿಕೊಂಡು ಹೋಗಿ ಜನಸಂಚಾರಕ್ಕೆ ಅಡಚಣೆಯಾಗಿದ್ದು ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಗ್ರಾಮದಲ್ಲಿ ಬೃಹತ್ ಪ್ರಮಾಣದ ನೀರು ದಾಟುವಜನತಾ ಕಾಲೋನಿ ಸೇತುವೆ ಚಿಕ್ಕದಾಗಿದ್ದರಿಂದ ನೀರು ಹೆಚ್ಚಾಗಿ ಅಲ್ಲಿನ ಬಡಜನರ ಮನೆಗಳಿಗೆನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ. ಹಿಂದಿನವರ್ಷ ಕೆರೆಯ ತಡೆಗೋಡೆ ಒಡೆದು ನಮ್ಮಜಮೀನಿನಲ್ಲಿ ನೀರು ನುಗ್ಗಿತ್ತು. ಈ ವರ್ಷ ಮತ್ತೆ ಸಮಸ್ಯೆಯಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಶಿವಾಜಿ ಮುತ್ತಗಿ ಮಾತನಾಡಿ, ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಚರಂಡಿನಿರ್ಮಾಣವಾಗದ್ದರಿಂದ ಮನೆಗಳ ಒಳಗೆ ನೀರುನುಗ್ಗುವುದು ನಿರಂತರ ಸಮಸ್ಯೆಯಾಗಿದೆ. ವಿಶೇಷ ಅನುದಾನದಡಿಯಲ್ಲಿ ಚರಂಡಿ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದರು.
ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಪಿಡಿಒ ರಾಮು ಸೊಗಲಿ, ಗ್ರಾ.ಪಂ ಸದಸ್ಯರಾದಗಂಗಪ್ಪ ತೋರಣಗಟ್ಟಿ, ಮಹಾದೇವ ಮಡಿವಾಳರ, ನಾಗಪ್ಪ ಭೋವಿ, ಮಡಿವಾಳಪ್ಪ ವನ್ನೂರ,ನಾಗರಾಜ ನರಸಣ್ಣವರ, ಸುಧಾ ಬಾಳೆಕುಂದರಿ,ಗ್ರಾಮಸ್ಥರಾದ ಶಿವಪ್ಪ ಮಡಿವಾಳರ, ವಿಠuಲಜುಂಜರಿ, ಸೋಮನಿಂಗ ಗಾಡದ, ಕಾಶಪ್ಪ ತಿಗಡಿ,ಶಿವಾನಂದ ಕುಂಕೂರ, ಬಸವರಾಜ ನರಸಣ್ಣವರ, ಹಾಗೂ ಗ್ರಾಮಸ್ಥರು ಇದ್ದರು.