Advertisement

ಮಳೆಗಾಗಿ ನಂದಿ ಬಸವಣ್ಣನಿಗೆಸಗಣಿ ಬಡಿದ ಗ್ರಾಮಸ್ಥರು!

12:51 PM Aug 06, 2018 | |

ಶಹಾಪುರ: ಬರಗಾಲದಿಂದ ತತ್ತರಿಸಿದ ರೈತರು ಕಪ್ಪೆ, ಕತ್ತೆ, ಮದುವೆ, ಗ್ರಾಮ ದೇವತೆಗೆ ನೀರು ಹಾಕುವುದು ಸೇರಿದಂತೆ ಹಲವು ಸಾಂಪ್ರದಾಯಿಕ ಪದ್ಧತಿಗಳು ಆಚರಿಸುವುದನ್ನು ನೋಡಿದ್ದೇವೆ. ಆದರೆ, ತಾಲೂಕಿನ ಸಗರ ಗ್ರಾಮದಲ್ಲಿ ಅಗಸಿ ಬಸವಣ್ಣ ಹತ್ತಿರದ ನಂದಿ ಬಸವಣ್ಣನ ಪ್ರತಿಮೆಗಳಿಗೆ ಎತ್ತು ಅಥವಾ ಗೋವಿನ ಸಗಣಿ ಬಡಿಯುವ ವಾಡಿಕೆಯಿದೆ.

Advertisement

ಎರಡು ತಿಂಗಳಾದರೂ ಸಮರ್ಪಕ ಮಳೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸವಣ್ಣನ ಪ್ರತಿಮೆಗೆ ಗ್ರಾಮದ ಮಕ್ಕಳು, ಮಹಿಳೆಯರು ಸಗಣಿ ಬಡಿಯುವ ಮೂಲಕ ಮಳೆ ಆಗಮನಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂದಿ ಬಸವಣ್ಣನಿಗೆ ಸಗಣಿ ಬಡಿದರೆ ಅದನ್ನು ಸ್ವತ್ಛಗೊಳಿಸಲು ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದು. ಈ ಹಿಂದೆ ಬರ ಎದುರಾದಾಗ ಬಸವಣ್ಣನಿಗೆ ಸಗಣಿ ಬಡಿದ 15 ದಿನಗಳಲ್ಲಿ ಮಳೆ ಬಂದ ಉದಾಹರಣೆಗಳಿವೆ.

ಸಾಂಪ್ರಾದಾಯಿಕವಾಗಿ ಅನಾದಿ ಕಾಲದಿಂದಲೂ ಮಳೆ ಬಾರದಿದ್ದಾಗ ಇಲ್ಲಿನ ಅಗಸಿ ಬಸವಣ್ಣನಿಗೆ ಗ್ರಾಮಸ್ಥರು ಮಳೆ ಕರುಣಿಸು ದೇವ ಎಂದು ಸಗಣಿ ಬಡಿಯುವ ಪದ್ಧತಿ ಜಾರಿಯಲ್ಲಿದೆ. ಅದರಂತೆ ಪ್ರಸಕ್ತ ಮಳೆ ಅಭಾವದಿಂದ ಕಂಗಾಲಾದ ರೈತರು ಕಳೆದ ವಾರದಿಂದ ಬಸವಣ್ಣನ ಪ್ರತಿಮೆಗೆ ಸಗಣಿ ಬಡಿಯುತ್ತಿದ್ದಾರೆ ಎನ್ನುತ್ತಾರೆ ಕರಿ ಬಸವೇಶ್ವರ ಮಠದ ಮರಳು ಮಹಾಂತ ಶಿವಾಚಾರ್ಯರು.

ಮಳೆ ಅಭಾವ ಉಂಟಾದಾಗ ಮೊದಲಿಂದಲೂ ಇಲ್ಲಿನ ನಂದಿ ಬಸವಣ್ಣನ ಪ್ರತಿಮೆಗೆ ಗ್ರಾಮಸ್ಥರು ಸಗಣಿ ಬಡಿಯುವ ಪದ್ಧತಿ ಆಚರಣೆಯಲ್ಲಿದೆ. ಬಸವಣ್ಣನಿಗೆ ಸಗಣಿ ಬಡಿದರೆ ಅದನ್ನು ಸ್ವತ್ಛಗೊಳಿಸಲು ವರುಣ ಕೃಪೆಯಾಗಲಿದೆ ಎಂಬುದು ಇಲ್ಲಿನ ಜನರ ನಂಬಿಕೆ ಎನ್ನುತ್ತಾರೆ ಸಾಹಿತಿ ಲಿಂಗಣ್ಣ ಪಡಶೆಟ್ಟಿ. 

Advertisement

Udayavani is now on Telegram. Click here to join our channel and stay updated with the latest news.

Next