Advertisement
ಪ್ರತಿಭಟನೆ ನಡೆಸಿದ ಕೋಟೆವಾಡಾದ ನಿವಾಸಿಗಳು ಅವರು ಸ್ಮಶಾನಭೂಮಿ ಸುರಕ್ಷಾ ಸಮಿತಿ ಮತ್ತು ಪುರಸಭೆ ವಿರುದ್ಧ ಧಿಕ್ಕಾರ ಕೂಗಿದರು. ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿ ಕೋರಿಕೆಯಂತೆ ಸ್ಮಶಾನ ಭೂಮಿ ಸರ್ವೇ ನಡೆಸಿದ ತಹಶೀಲ್ದಾರರು ಸ್ಮಶಾನ ಭೂಮಿ 7ಎ.2ಗು. ಪ್ರದೇಶದ ಪೈಕಿ 34 ಗುಂಟೆಯಷ್ಟು ಅತಿಕ್ರಮಣವಾಗಿರುವುದನ್ನು ದೃಢಪಡಿಸಿದ್ದರು ಹಾಗೂ ಅತಿಕ್ರಮಣ ಖುಲ್ಲಾಪಡಿಸುವಂತೆ ಪುರಸಭೆಗೆ ಆದೇಶ ನೀಡಿದ್ದರು. ಸ್ಮಶಾನ ಭೂಮಿಯ ಅತಿಕ್ರಮಣ ಖುಲ್ಲಾಪಡಿಸಲು ತಹಶೀಲ್ದಾರ್ ಪತ್ರ ದಿ.2-6-2021 ಹಾಗೂ 2-9-2021 ಮತ್ತು ಹಿಂದೂ ಸ್ಮಶಾನ ಭೂಮಿ ಸುರಕ್ಷಾ ಸಮಿತಿ ಮನವಿ ದಿ.23-9-2021ಕ್ಕೆ ಸಂಬಂಧಿಸಿದಂತೆ ಪುರಸಭೆ ಅ.30 ರಂದು ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಖುಲ್ಲಾಪಡಿಸುವ ಕಾರಣ ಕೇಳಿ ನೊಟೀಸ್ ನೀಡಿದೆ. ಪುರಸಭೆ ನೋಟೀಸಿಗೆ ಕಂಗಾಲಾದ ಅಲ್ಲಿನ ನಿವಾಸಿಗಳು ಶನಿವಾರ ದಿಢೀರ ಪ್ರತಿಭಟನೆ ನಡೆಸಿದರು.
Related Articles
Advertisement
ಸ್ಥಳಕ್ಕಾಗಮಿಸಿದ ಉಪ ಪೊಲೀಸ್ ನಿರೀಕ್ಷಕ ಪ್ರೇಮನಗೌಡ ಪಾಟೀಲ, ಪಿಎಸ್‌ಐ ಪ್ರವೀಣಕುಮಾರ ಸೀಮೆ ಎಣ್ಣೆ ಕ್ಯಾನುಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಜನರನ್ನು ನ್ಯಾಯ ಕೇಳಲು ಕಾನೂನು ಪ್ರಕಾರ ಹಲವು ಮಾರ್ಗಗಳಿವೆ. ಈ ರೀತಿ ಆವೇಶದಿಂದ ಜೀವಹಾನಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿ ಮನವೊಲಿಸಿದರು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.