ಸಕಲೇಶಪುರ: ಹೆತ್ತೂರು-ಹಾಡ್ಲಹಳ್ಳಿ ರಸ್ತೆಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದುಗ್ರಾಮಸ್ಥರು ಮಂಗಳವಾರ ತಾಲೂಕಿನ ಹೆತ್ತೂರು ವೃತ್ತದಲ್ಲಿ ಪ್ರತಿಭಟಿಸಿದರು.
ಹೋಬಳಿ ಕೇಂದ್ರ ಹೆತ್ತೂರು, ಹಾಡ್ಲಹಳ್ಳಿ ನಡುವೆ ಮೂರು ಕಿ.ಮೀ. ಇದೆ. ಇದರ ಅಭಿವೃದ್ಧಿಗಾಗಿ 3.5 ಕೋಟಿ ರೂ. ಅನುದಾನ 2 ವರ್ಷಗಳ ಹಿಂದೆಬಿಡುಗಡೆ ಆಗಿದೆ. 2.5 ಕಿ.ಮೀ. ಹಳೇ ರಸ್ತೆಯನ್ನುಕಿತ್ತು ಜಲ್ಲಿ ಹಾಕಿ, ರೋಲರ್ ಮೂಲಕ ಸಮದಟ್ಟು ಮಾಡಲಾಗಿತ್ತು. ಅರಕಲಗೂಡು ತಾಲೂಕಿನಗುತ್ತಿಗೆದಾರ ಮಳೆಗಾಲದ ನಂತರ ರಸ್ತೆಗೆ ಡಾಂಬರ್‌ಹಾಕುವ ಭರವಸೆ ನೀಡಿದ್ದರು. ಆದರೆ, 2 ಬಾರಿಮಳೆಗಾಲ ಮುಗಿದು ಮತ್ತೆ ಪ್ರಾರಂಭವಾಗುವದಿನಗಳು ಸಮೀಪಿಸುತ್ತಿದ್ದರೂ ಡಾಂಬರೀಕರಣ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ವಾಹನಗಳು ಬರಲ್ಲ: ರಸ್ತೆಗೆ ಹಾಕಿದ್ದ ಜಲ್ಲಿ ಮೇಲೆದ್ದಿದೆ. ಎಲ್ಲೆಡೆ ಗುಂಡಿ ಬಿದ್ದಿದೆ. ರಸ್ತೆಸಂಪೂರ್ಣ ದೂಳಿನಿಂದ ಕೂಡಿದೆ. ಗ್ರಾಮಸ್ಥರು ಜಲ್ಲಿ ರಸ್ತೆಯಲ್ಲೇ ಓಡಾಡಬೇಕಾಗಿದೆ. ದೂಳಿನಿಂದ ರಸ್ತೆ ಸಮೀಪದ ಮನೆಯವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ತಾಲೂಕು ಕೇಂದ್ರದಿಂದ ಹಾಡ್ಲಹಳ್ಳಿ 30 ಕಿ.ಮೀ. ಇದ್ದು,ಊರಿಗೆ ಒಂದೇ ಒಂದು ಬಸ್ ಸಂಚರಿಸುತ್ತಿದೆ. ಇದು ತಪ್ಪಿದರೆ ಗ್ರಾಮಸ್ಥರು ಖಾಸಗಿ ವಾಹನಅವಲಂಬಿಸಬೇಕಾಗುತ್ತದೆ. ಆದರೆ, ರಸ್ತೆ ಹದಗೆಟ್ಟಿರುವ ಕಾರಣ ಯಾವುದೇ ಬಾಡಿಗೆ ವಾಹನ ಬರುವುದಿಲ್ಲ ಎಂದು ಆರೋಪಿಸಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ರಸ್ತೆಯ ಕಾಮಗಾರಿ ಮುಗಿಸಿಕೊಡುವಂತೆ ಹಲವು ಬಾರಿ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಮನವಿಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಭರವಸೆ ನಂತರ ಪ್ರತಿಭಟನೆ ವಾಪಸ್: ಸ್ಥಳಕ್ಕೆ ಆಗಮಿಸಿದ ಪಿಡಬ್ಲೂéಡಿ ಅಭಿಯಂತರರು ರಸ್ತೆಗೆ ಬಿಡುಗಡೆ ಆಗಿರುವ ಹಣ ರಾಷ್ಟ್ರೀಯಹೆದ್ದಾರಿಯಿಂದ ಬಂದಿದೆ. ಗುತ್ತಿಗೆದಾರರಿಗೆ ಹಣಬಿಡುಗಡೆಯಾಗದ ಕಾರಣ ಕಾಮಗಾರಿವಿಳಂಬವಾಗಿದೆ. ಇನ್ನು 5 ದಿನದ ಒಳಗೆ ಕಾಮಗಾರಿಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದುಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾಮಸ್ಥರಾದ ಗೋಪಾಲೇಗೌಡ, ಉಮೇಶ್, ಪ್ರಸನ್ನ, ಕುಶಾಲಪ್ಪ, ಸುಧಾಕರ್,ಕರುಣಾಕರ್, ತಾಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ,ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷಸಚ್ಚಿನ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅರವಿಂದ್, ಬಿಜೆಪಿ ಮುಖಂಡ ಮಹೇಶ್ ಇದ್ದರು.