Advertisement

ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

02:09 PM Jan 02, 2021 | Team Udayavani |

ಗಜೇಂದ್ರಗಡ: ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಕೆಲಸ ನೀಡದಿರುವುದನ್ನು ಖಂಡಿಸಿಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಹಾಕಿ, ಕಚೇರಿ ಮುಂಭಾಗದಲ್ಲಿಯೇಬುತ್ತಿ ಕಟ್ಟಿಕೊಂಡು ಊಟ ಮಾಡಿವಿನೂತನ ಪ್ರತಿಭಟನೆ ನಡೆಸಿದ ಘಟನೆ ಶಾಂತಗೇರಿಯಲ್ಲಿ ಶುಕ್ರವಾರ ನಡೆದಿದೆ.

Advertisement

ಶಾಂತಗೇರಿ ಗ್ರಾಮದ ಮಹಿಳೆಯರಿಗೆ ಗುಡ್ಡಗಾಡುಪ್ರದೇಶದಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿ ಕೆಲನೀಡುವುದಲ್ಲದೇ, ಕಡಿಮೆ ಕೂಲಿಯಲ್ಲಿ ಹೆಚ್ಚಿನ ಕೆಲಸ ನೀಡುತ್ತಿದ್ದಾರೆ.ಜೆಸಿಬಿ ಯಂತ್ರಗಳ ಮೂಲಕ ಕೆಲಸಮಾಡಿಸುವ ದುರುದ್ದೇಶದಿಂದ ಕಡಿಮೆ ಕೂಲಿಯ ನೆಪವೊಡ್ಡಿ ಯಾರೂ ಕೆಲಸಕ್ಕೆ ಹೋಗದಂತೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ನಿಯಮಾವಳಿ ಪ್ರಕಾರ ಹೆಚ್ಚಿನ ಕೆಲಸಕ್ಕೆ ಹೆಚ್ಚಿನ ಕೂಲಿ ನೀಡಿ ಎಂದುಕೇಳಿಕೊಂಡರೂ ಗ್ರಾಪಂ ಅ ಧಿಕಾರಿಗಳುಕೂಲಿ ನೀಡುವಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಉದ್ಯೋಗ ಖಾತ್ರಿಯೋಜನೆಯನ್ನು ಸಮರ್ಪಕವಾಗಿಅನುಷ್ಠಾನ ಗೊಳಿಸುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಮೇಲಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಗ್ರಾಮದ ಮಹಿಳೆಯರು ಪಂಚಾಯತಿ ಮುಂದೆಯೇ ಗುದ್ದಲಿ,ಪಿಕಾಸಿ, ಸೆಲಿಕಿ ಮತ್ತು ಬುಟ್ಟಿಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ಹೊಸಮನಿ, ಶಾಂತಪ್ಪ ಹಟ್ಟಿಮನಿ, ಶಂಕ್ರಪ್ಪ ಹಟ್ಟಿಮನಿ, ಶಾಂತಪ್ಪ ಹುಲ್ಲಣ್ಣವರ, ಉಮೇಶ ಹಲ್ಲಣ್ಣನವರ, ಪ್ರವೀಣ ಹೊಸಮನಿ,ಸಂತೋಷ ಹುಲ್ಲಣ್ಣವರ, ಪ್ರಕಾಶಹುಲ್ಲಣ್ಣನವರ, ಶಾಂತಪ್ಪ ಹೊಸಮನಿ,ಶಿವಪ್ಪ ಹೊಸಮನಿ, ಭರತ್‌ ತುಗ್ಗಣಿ, ಪರಸಪ್ಪ ಪಿಳಬಂಟರ ಸೇರಿದಂತೆಹಲವಾರು ಜನರು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next