Advertisement

ಕೊಕಟನೂರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

01:00 PM Mar 03, 2020 | Suhan S |

ಸಿಂದಗಿ: ಸಾರ್ವಜನಿಕ ಜಾಗದಲ್ಲಿ ಅತಿಕ್ರಮಣವಾಗಿ ಸಮುದಾಯ ಭವನ ಕಟ್ಟಲು ಮುಂದಾಗಿರುವುದನ್ನು ಖಂಡಿಸಿ ಗ್ರಾಮದ ಮಹಿಳೆಯರು ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ.

Advertisement

ಕೊಕಟನೂರ ಗ್ರಾಮದಲ್ಲಿನ ಸರ್ವೇ ನಂ. 364 ಮತ್ತು 365 ಗ್ರಾಪಂಗೆ ಸೇರಿದ ಜಾಗದಲ್ಲಿ ಕಳೆದ 20 ವರ್ಷಗಳಿಂದಲೂ ಅಲ್ಲಿ ಮಹಿಳೆಯರು ಶೌಚಾಲಯಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ ಈಗ ಅಲ್ಲಿ ಒಂದು ಸಮುದಾಯ ಪಂಚಾಯತ್‌ ಅನುಮತಿ ಪಡೆಯದೇ ಜಾಗವನ್ನು ಅತಿಕ್ರಮಣ ಮಾಡಿ ಸಮುದಾಯ ಭವನ ಕಟ್ಟಡವನ್ನು ಏಕಾಏಕಿ ಪ್ರಾರಂಭಿಸಿದ್ದಾರೆ. ಅತಿಕ್ರಮಣ ಮಾಡಿ ಸಮುದಾಯ ಭವನ ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂದು ಗ್ರಾಮದ ಮಹಿಳೆಯರು ಒತ್ತಾಯಿಸಿದರು.

ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯ ಕಟ್ಟಿಸಿಕೊಳ್ಳಲು ಆಗಿಲ್ಲ. ಬಯಲು ಶೌಚ ಅನಿವಾರ್ಯವಾಗಿದೆ. ಗ್ರಾಪಂಗೆ ಸೇರಿದ ಗೌಂಟಾಣಿ ಜಾಗದಲ್ಲಿ ಅತಿಕ್ರಮವಾಗಿ ಸಮುದಾಯ ಭವನ ಕಟ್ಟಡ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ಮಹಿಳೆಯರಾದ ಶಾಂತಾಬಾಯಿ ಗೋವಿಂದ, ಭಾಗಮ್ಮ ಮಠ, ಶಿವಗಂಗವ್ವ ಉಪ್ಪಾರ, ಯಮನವವ್‌ ಗೌಂಡಿ, ಗುರುಬಾಯಿ ಅಗಸರ, ಸುಮಿತ್ರಾ ಮಠಪತಿ, ಗಂಗಾಬಾಯಿ ಮಂಕಣಿಮಠ, ಷರಿಪಾ ಗುಡ್ಯಾಳ, ದಾನಮ್ಮ ಮಠಪತಿ, ಮಾದೇವಿ ಗೋವಿಂದ, ಲಕ್ಕಮ್ಮ ಹೆಗಡ್ಯಾಳ, ದುರ್ಗವ್ವ ಮಾದರ, ಪಾರ್ವತಿ ಗೌಂಡಿ, ಬಿಸ್ಮಿಲ್ಲಾ ಕನ್ನೊಳ್ಳಿ, ಮಹಾದೇವಿ ಬ್ಯಾಕೋಡ, ಲಕ್ಷ್ಮೀ ಗತ್ತರಗಿ, ಕಲ್ಯಾಣಪ್ಪ ಹಿಟ್ನಳ್ಳಿ, ರೇಣುಕಾ ತಳವಾರ, ಮುನ್ನಾಬಿ ಹಿಪ್ಪರಗಿ, ಅಂಬವ್ವ ನೆಲ್ಲಗಿ, ಶಂಕ್ರಮ್ಮ ಗೌಂಡಿ, ಷರಿಪಾ ಬಾಗವಾನ, ಅಮಿನಬಿ ಗಲಗಲಿ, ಗಂಗಾಬಾಯಿ ಕೊಡೆಕಲ್‌, ಶರಣಮ್ಮ ಸಾತಿಹಾಳ, ಪಾತಿಮಾ ಹಿಪ್ಪರಗಿ, ಹುಸೆನಬಿ ಬೆನಕನಳ್ಳಿ, ಸಲಿಮಾ ಕುಮಸಗಿ, ಪದ್ಮಾ ಬಾಗೇವಾಡಿ, ಮಲ್ಲಮ್ಮ ಶಿವಣಗಿ, ಶಿವಮ್ಮ ಬಂದಾಳ, ಕಮಲಾಬಾಯಿ ತಳವಾರ, ದೀಪಾ ಮಠಪತಿ, ರಯಜಾನ ಬೆನಕನಳ್ಳಿ, ಶಾಂತಾಬಾಯಿ ಗೌಂಡಿ, ಸಿದ್ದವ್ವ ಕನ್ನೂರ, ರೇಣುಕಾ ಚಿನ್ನಾಕರ, ಲಕ್ಷ್ಮೀಬಾಯಿ ಗೌಂಡಿ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next