Advertisement
ಏನಿದು ಮಿನಿ ಲಾಕ್‌ಡೌನ್? :
Related Articles
Advertisement
ಏನೆಲ್ಲ ನಿರ್ಬಂಧ :
ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಖರೀದಿಗೆ ಸುತ್ತಲಿನ ಊರಾದ ಕೋಟೇ ಶ್ವರ, ಗೋಪಾಡಿ, ಬೀಜಾಡಿ, ತಲ್ಲೂರು ಮೊದಲಾದೆಡೆಯಿಂದ ಬರುವುದನ್ನು ಪೊಲೀಸರು ನಿಷೇಧಿಸಿದ್ದಾರೆ. ಚಿತ್ತೂರು ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹೋಂ ಐಸೊಲೇಶನ್‌ನಲ್ಲಿ ಕಡ್ಡಾಯವಾಗಿ ಇರಬೇಕು. ಆದ್ದರಿಂದ ಅಂತಹ ಮನೆಗಳಿಗೆ ಗ್ರಾಮ ಪಂಚಾಯತ್‌ನಿಂದ ಗುರುತಿಸಲಾದ ರಿûಾಗಳ ಮೂಲಕ ಪಡಿತರ ಸಾಮಗ್ರಿಗಳನ್ನು ತಲುಪಿಸಲು ಅವಕಾಶ ಮಾಡಿಕೊಡಲಾಗಿದೆ.
ಆಲೂರು ಮತ್ತು ಹಕೂìರು ಗ್ರಾಮದಲ್ಲಿ 150ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿರುತ್ತವೆ. 70ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು 4 ಮಂದಿ ಮೃತಪಟ್ಟಿದ್ದಾರೆ.
ಎಲ್ಲೆಲ್ಲಿ? :
ಪುರಸಭೆ ವ್ಯಾಪ್ತಿ, ಆಲೂರು, ಹಕ್ಕೂರು, ಚಿತ್ತೂರು, ಸಿದ್ದಾಪುರ, ಜಡ್ಕಲ್, ಮುದೂರು, ಇಡೂರು ಕುಂಜ್ಞಾಡಿ, ವಂಡ್ಸೆ ಗ್ರಾಮಗಳ ವ್ಯಾಪ್ತಿಯಲ್ಲಿ.
ಮೇ 28, 29, 30ರಂದು ಮತ್ತು ಜೂ. 3, 4, 5 ಹಾಗೂ 6ನೇ ತಾರೀಖೀನಂದು ಆಲೂರು ಮತ್ತು ಹಕೂìರು ಗ್ರಾಮದ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಕೊರೊನಾ ಬಾಧಿತರಿಗೆ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ವೈದ್ಯಕೀಯ ಸೇವೆ ಮತ್ತು ಬೆಳಗ್ಗೆ 6 ರಿಂದ 8ರ ವರೆಗೆ ಹಾಲು ಹೊರತುಪಡಿಸಿ ಇತರ ಎಲ್ಲ ವ್ಯವಹಾರ ಸ್ಥಗಿತಗೊಳಿಸಲಾಗುತ್ತಿದೆ. ಸಿದ್ದಾಪುರದಲ್ಲಿ ಬುಧವಾ ರದಿಂದ ಇದು ಜಾರಿಗೆ ಬಂದಿದೆ. 8 ಗಂಟೆವರೆಗೆ ಹಾಲು ಹೊರತುಪಡಿಸಿ ಇತರ ಎಲ್ಲ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ದಿನಸಿ, ತರಕಾರಿಗೆ ಬೇರೆ ಊರಿನವರು ಬರುವುದು ನಿಷೇಧಿಸಲಾಗಿದೆ. ಸಿದ್ದಾಪುರಕ್ಕೆ ಸುತ್ತಲಿನ 8 ಗ್ರಾಮಗಳಿಂದ ಆಸ್ಪತ್ರೆ ಮೊದಲಾದ ಸೌಕರ್ಯಕ್ಕಾಗಿ ಬರುತ್ತಾರೆ. ಅಂತಹವರನ್ನು ಹೊರತುಪಡಿಸಿ ತುರ್ತು ಕಾರಣ ಇಲ್ಲದೇ ಯಾರನ್ನೂ ಗ್ರಾಮದೊಳಗೆ ಬಿಡಲಾಗುತ್ತಿಲ್ಲ.
ವಂಡ್ಸೆಯಲ್ಲಿ ಮೇ 29ರಿಂದ ಸ್ವಯಂಘೋಷಿತ ಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದ್ದು ಪ್ರತೀ ಸೋಮವಾರ, ಗುರುವಾರ ಅಗತ್ಯವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಇಡೂರು ಕುಂಜ್ಞಾಡಿ ಗ್ರಾಮದಲ್ಲಿ ಮೇ 27ರಿಂದ ಮೇ 30ರವರೆಗೆ ಸ್ವಯಂ ಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಬೆಳಗ್ಗೆ 8.30ರ ವರೆಗೆ ಹಾಲು ಹೊರತುಪಡಿಸಿ ಇತರ ಯಾವುದೇ ಅಂಗಡಿಗಳು 4 ದಿನಗಳ ಕಾಲ ತೆರೆಯುವುದಿಲ್ಲ. ಜಡ್ಕಲ್, ಮುದೂರಿನಲ್ಲಿ ಕೂಡ ಬಂದ್ ವಾತಾವರಣ, ನಿರ್ಬಂಧ ಆರಂಭಿಸಲಾಗಿದೆ. ಹೆಮ್ಮಾಡಿಯಲ್ಲಿ ಸ್ವಯಂ ಲಾಕ್‌ಡೌನ್ ನಿರ್ಧಾರದ ಕಡೆಗೆ ಒಲವು ಹರಿಸಲಾಗಿದೆ. ಬೆಳ್ವೆ ಮೊದಲಾದೆಡೆ ಪ್ರಕರಣ ಹೆಚ್ಚಿದ್ದರೂ ಇಂತಹ ಪ್ರಕ್ರಿಯೆ ನಡೆದಿಲ್ಲ.
ಪರಿಣಾಮ :
ದಿನ ಬೆಳಗಾದರೆ ಏನಾದರೂ ಕಾರಣ ಹಿಡಿದು ಅಂಗಡಿ ಕಡೆಗೆ ಬರುತ್ತಿದ್ದವರ ಸಂಖ್ಯೆ ಇಳಿದಿದೆ. ಸಿದ್ದಾಪುರದಂತಹ ಪ್ರದೇಶದಲ್ಲಿ 400-500 ಜನ ಆಗಮಿಸುತ್ತಿದ್ದವರ ಸಂಖ್ಯೆ ಈಗ 150ಕ್ಕೆ ಇಳಿದಿದೆ. ಜನ ಕೂಡ ಗ್ರಾ.ಪಂ.ನ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕೊರೊನಾಮುಕ್ತ ಊರಾಗಲು ಜನ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.
ಜನರು ಅಗತ್ಯ ವಸ್ತು ಖರೀದಿಗೆ ಸ್ಥಳೀಯವಾಗಿಯೇ ಹೋಗಬೇಕು. ಅನಗತ್ಯವಾಗಿ ಸಂಚಾರ ಮಾಡಬಾರದು ಎಂದೇ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಸ್ಥಳೀಯರುನೇತೃತ್ವ ವಹಿಸಿದಾಗಅನಗತ್ಯ ಓಡಾಟಕ್ಕೆ ಕಡಿವಾಣ ಬೀಳುತ್ತದೆ. ಪ್ರಕರಣ ಜಾಸ್ತಿ ಇದ್ದಲ್ಲಿ ಇಂತಹ ಕ್ರಮ ಕೈಗೊಂಡರೆ ಅನುಕೂಲ. –ಜಿಲ್ಲಾಧಿಕಾರಿ, ಉಡುಪಿ
ಪರಿಚಿತರೇ ಚೆಕ್‌ಪೋಸ್ಟ್‌ಗಳಲ್ಲಿ ನಿಲ್ಲುವ ಕಾರಣ ಅನಗತ್ಯ ನೆಪದಲ್ಲಿ ಪೇಟೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಅಗತ್ಯವಸ್ತು ಖರೀದಿ ಕೂಡ ಒಂದಷ್ಟು ಮನೆಯವರಿಗೆ ಒಟ್ಟಾಗಿ ಒಬ್ಬರೇ ಖರೀದಿಸಿ ಒಯ್ಯುತ್ತಾರೆ. –ರವೀಂದ್ರ ರಾವ್, ಪಿಡಿಒ, ಸಿದ್ದಾಪುರ