Advertisement
ಗಣೇಶ ಚೌತಿಯ ನಂತರ ಹೊಸಳ್ಳಿ, ಗೋಟಗಾರು, ಮರಡುಮನೆ, ಹಂಸಗಾರು ಭಾಗದಲ್ಲಿ ಭಾರೀ ಮಳೆ ಬಿದ್ದಿದೆ. ಒಂದು ದಿನ ಅರ್ಧ ಗಂಟೆಯ ಅವಧಿಯಲ್ಲಿ ಸುಮಾರು ಮೂರು ಸೆಂಮೀಗಳಷ್ಟು ಮಳೆ ಬಿದ್ದಿರುವ ಅಂದಾಜು ಮಾಡಲಾಗಿದೆ. ಈ ವೇಳೆ ಊಹಿಸಲಾಗದ ಪ್ರಮಾಣದಲ್ಲಿ ನೀರು ನುಗ್ಗಿ ಸುತ್ತಮುತ್ತಲಿನ ಕೆಲ ಮನೆಗಳು ಹಾಗೂ ಅಡಕೆ ತೋಟದಲ್ಲಿ ಹಾನಿಯಾಗಿದೆ.
ನಮ್ಮನ್ನು ಒಡ್ಡಿಕೊಂಡು ಬದುಕುವುದಕ್ಕೆ ಬದಲು ಗುಡ್ಡವನ್ನು ಗುಡ್ಡವಾಗಿಯೇ ಉಳಿಸಬೇಕು. ಮೊನ್ನೆ ಆಗಿದ್ದು ಅಪಾಯ ಅಲ್ಲ, ಬದಲು ಮುಂದಿನ ಮರಣ ಮೃದಂಗಕ್ಕೆ ಎಚ್ಚರಿಕೆ. ಈಗ ಇಂಗುಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಈ ಕಾರ್ಯಕ್ಕೆ ಎಂದಿನಂತೆ ಗ್ರಾಮಸ್ಥರು, ಅವತ್ತು ಇಂಗುಗುಂಡಿ ಮಾಡಲು ಸಹಕರಿಸಿದ ಅಕ್ಕಪಕ್ಕದ ಊರಿನ ಮತ್ತು ಸಾಗರದ ಆಸಕ್ತರನ್ನು ಈ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಲು ಕೋರುತ್ತಿದ್ದೇನೆ ಎಂದು ವಿನಂತಿಸಿದ್ದಾರೆ.
Related Articles
Advertisement
ಈ ಕುರಿತಾಗಿ ಭಾನುವಾರ ಸಮಾನಾಸಕ್ತ ಗೆಳೆಯರ ಜೊತೆ ಸ್ಥಳ ಪರಿಶೀಲನೆ ನಡೆಸಿದ ಇಂಗುಗುಂಡಿಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ಪರಿಸರ ಕಾರ್ಯಕರ್ತ ಜಿತೇಂದ್ರ ಕಶ್ಯಪ್ ಪತ್ರಿಕೆಯೊಂದಿಗೆ ಮಾತನಾಡಿ, ಅವತ್ತಿನ ಪರಿಸ್ಥಿತಿಯಲ್ಲಿ ಇಂಗುಗುಂಡಿಗಳು ಊರಿನ ಸಂಕಷ್ಟ ಪರಿಹರಿಸಲು ನೆರವು ನೀಡುತ್ತವೆ ಎಂಬ ನಂಬಿಕೆ ಊರಿನ ಎಲ್ಲರಲ್ಲಿಯೂ ಇತ್ತು. ಆ ವೇಳೆ ನಾವು ಮಡಿಕೇರಿಯಂತಹ ಅನಾಹುತಗಳನ್ನು ನೋಡಿರಲಿಲ್ಲ. ಗುಡ್ಡದಲ್ಲಿ ಇಂಗುಗುಂಡಿ, ವನ ಸಂರಕ್ಷಣೆ ನಡೆದಿದೆಯೇ ವಿನಃ ಬೇರಾವುದೇ ರೀತಿಯ ಭೂಮಿಯ ಸ್ಥಿರತೆ ತಪ್ಪಿಸುವ ಕೆಲಸ, ಗಣಿಗಾರಿಕೆ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.
ಮೊನ್ನಿನ ಮೇಘಸ್ಫೋಟದ ಸಂದರ್ಭದಲ್ಲಿ ಇಂಗುಗುಂಡಿ ದಂಡೆ ಒಡೆದಿಲ್ಲ. ಕೋಡಿ ಹರಿದಿದೆ. ಬಹುಶಃ ಅವತ್ತು ಗುಡ್ಡದಲ್ಲಿ ಸುರಿದ ಕೋಟ್ಯಂತರ ಲೀಟರ್ ನೀರು ಇಂಗುಗುಂಡಿಗಳಲ್ಲಿ ತುಂಬಿ ಹರಿಯುವುದರ ಬದಲು ಒಮ್ಮೆಗೇ ಊರಿನತ್ತ ಧುಮುಕಿದ್ದರೆ ಇನ್ನಷ್ಟು ಅಪಾಯ ಆಗಬಹುದಿತ್ತು. ನಾವು ಮಾಡಿದ ಕೆಲಸ, ಆಗಬಹುದಾದ ಪರಿಣಾಮಗಳ ಕುರಿತು ವೈಜ್ಞಾನಿಕವಾದ ಅಧ್ಯಯನ ನಡೆಯಬೇಕು. ಎಂಟು ವರ್ಷಗಳಿಂದ ಇಂಗುಗುಂಡಿ ಭೂ ವ್ಯವಸ್ಥೆಗೆ ವರ್ತಿಸಿರುವ ರೀತಿಯ ವಿಶ್ಲೇಷಣೆ ನಡೆಯಬೇಕು. ಏಕಾಏಕಿ ಇಂಗುಗುಂಡಿ ಮುಚ್ಚುವ ಅಥವಾ ಇಲ್ಲಿನ ಗಿಡಮರಗಳನ್ನು ತೆಗೆಯುವ ಚಿಂತನೆ ನಮಗಿಲ್ಲ. ಎಂದು ತಿಳಿಸಿದರು.
ನಾವು 7 ಜನರು ನಾವು ನಿರ್ಮಾಣ ಮಾಡಿದ ಇಂಗುಗುಂಡಿ ಹಾಗೂ ನೆಟ್ಟ ಗಿಡಗಳನ್ನು ಪರಿಶೀಲಿಸಿದೆವು. ದನಕರುಗಳಿಗೆ ಸಾಕಷ್ಟು ಮೇವು, ನೀರು ಇದೆ. ಭವಿಷ್ಯದಲ್ಲೂ ಊರಿಗೆ ಯಾವುದೇ ಹಾನಿಯಾಗುವ ಪರಿಸ್ಥಿತಿ ಇರುವುದಿಲ್ಲ. ಪರಿಸರಕ್ಕೆ ಯಾವ ಹಾನಿಯೂ ಆಗಿಲ್ಲ. ಸೆ.1ರಂದು ಆದ ಮಳೆ ಹಾಗೂ ಅದರಿಂದ ಆದ ಪ್ರವಾಹ ಊರಿನಲ್ಲಿ ಆದ ಹಾನಿಗೆ ಕಾರಣ ಎಂಬ ಒಟ್ಟಾಗಿ ಅಭಿಪ್ರಾಯವನ್ನು ನೀಡಲಾಯಿತು ಎಂದು ಅವರು ತಿಳಿಸಿದರು.