ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಓವರ್‌ಹೆಡ್ ಹಾಗೂ ಮಿನಿ ವಾಟರ್ ಟ್ಯಾಂಕಿಗೆ ಸಂಪರ್ಕ ಕಲ್ಪಿಸುವ ಪೈಪ್ ಒಡೆದು,ಕಲುಷಿತ ನೀರು ನಲ್ಲಿಗಳಿಗೆ ಪೂರೈಕೆಯಾಗುತ್ತಿದೆ.ಈ ನೀರನ್ನೇ ಗ್ರಾಮದ ಜನರು ಕುಡಿಯುವ ಪರಿಸ್ಥಿತಿ ಇದೆ.
ಗ್ರಾಮದ ಭೀಮ್‌ರಾವ್ ರಾಮ್‌ಜಿ ಪ್ರೌಢಶಾಲೆ ಮುಂಭಾಗದಲ್ಲಿ ಪೈಪ್ ಒಡೆದು ನಾಲ್ಕೈದುತಿಂಗಳಾಗಿವೆ. ಆದರೂ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಹಾಗೂಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೊಳವೆ ಬಾವಿಯಿಂದ ಓವರ್‌ಹೆಡ್ ಹಾಗೂ ಮಿನಿ ವಾಟರ್ ಟ್ಯಾಂಕಿಗೆ ನೀರನ್ನು ಪ್ರತಿದಿನತುಂಬಿಸಲಾಗುತ್ತಿದೆ. ಈ ಭಾಗದಲ್ಲಿಪೈಪ್ ಒಡೆದುಹೋಗಿದೆ. ನಿತ್ಯ ಇಲ್ಲಿಂದ ಸಾವಿರಾರು ಲೀ. ನೀರುರಸ್ತೆಯಲ್ಲೇ ಹರಿದು ವ್ಯರ್ಥವಾಗುತ್ತಿದೆ. ಅಲ್ಲದಹಲವು ತಿಂಗಳಾಗಿರುವುದರಿಂದ ಇಲ್ಲಿ ದೊಡ್ಡಹಳ್ಳವಾಗಿ ಮಾರ್ಪಟ್ಟಿದೆ. ಇದರೊಳಗೆ ನೀರುಶೇಖರಣೆಯಾಗುತ್ತದೆ. ಜಾನುವಾರುಗಳು ಕೂಡ ಈ ನೀರನ್ನೇ ಕುಡಿಯುತ್ತವೆ. ರಾತ್ರಿ ವೇಳೆ ಬಹಿರ್ದೆಸೆಗೆ ಹೋಗುವವರೂ ಈ ನೀರನ್ನೇ ಬಳಸುತ್ತಾರೆ. ಇಲ್ಲಿ ಕಲುಷಿತ ನೀರುಶೇಖರಣೆಗೊಳ್ಳುತ್ತದೆ. ನೀರು ನಿಲ್ಲಿಸಿದಸಂದರ್ಭದಲ್ಲಿ ಈ ಕಲುಷಿತಗೊಂಡಿರುವ ನೀರೆಒಡೆದ ಪೈಪ್‌ಗ್ಳಿಂದ ವಾಪಸ್ಸಾಗಿ ನಲ್ಲಿಗಳಲ್ಲಿ ಬರುತ್ತದೆ. ಈ ನೀರನ್ನೇ ಜನರು ಕುಡಿಯಲುಬಳಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ನಿರ್ಲಕ್ಷ್ಯ:ಈ ಅವ್ಯವಸ್ಥೆ ಬಗ್ಗೆ ಖುದ್ದು ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಅವರು ಗಮನ ಹರಿಸಿಲ್ಲ.ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳು ನೀರಿನಿಂದ ಬಂದರೆ ಇದಕ್ಕೆ ಸಂಪೂರ್ಣ ಗ್ರಾಮ ಪಂಚಾಯಿತಿಯೇಜವಾಬ್ದಾರಿಯಾಗುತ್ತದೆ. ಈಗಲಾದರೂ ಸಂಬಂಧಪಟ್ಟವರು ಪೈಪ್ ಬದಲಿಸಿ ನೀರು ಸೋರಿಕೆಯಾಗುವುದನ್ನು ತಡೆಗಟ್ಟಿಲಿ. ಇಲ್ಲವಾದಲ್ಲಿ ಪಂಚಾಯಿತಿ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
ಹೊನ್ನೂರು ಗ್ರಾಮದಲ್ಲಿ ಪೈಪ್ ಒಡೆದು ಹೋಗಿದ್ದು, ಈಗಾಗಲೇ ಇದರ ದುರಸ್ತಿಗೆ ಕ್ರಮ ವಹಿಸಲಾಗಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರದೊರಕಲಿದೆ.
–ಸುನೀತಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ