Advertisement
ಲೋ ವೋಲ್ಟೇಜ್ ಸಮಸ್ಯೆಕಳೆದ ಹಲವಾರು ತಿಂಗಳಿಂದ ಲೋ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ಅಂಗಡಿ ಮುಂಗಟ್ಟು, ವ್ಯವಹಾರಸ್ಥರು ಇಲಾಖೆಗೆ ದೂರು ನೀಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಗಲಿರುಳು ವಿದ್ಯುತ್ ಬಳಕೆದಾರರು ಕುಗ್ಗಿದ ಬೆಳಕಿನಡಿ ವ್ಯವಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆ ಮಂದಿ ವಿದ್ಯುತ್ ಕೊರತೆಯಿಂದ ಬೇಸತ್ತಿದ್ದಾರೆ.
ಸಬ್ ಸ್ಟೇಶನ್
ಕಳೆದ ಹಲವು ವರುಷಗಳಿಂದ ನಡೆಯುತ್ತಿರುವ ಹಾಲ್ಕಲ್ ಬಳಿಯ ಸಬ್ ಸ್ಟೇಶನ್ ನಿರ್ಮಾಣ ಕಾಮಗಾರಿ ಈವರೆಗೆ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವಾರು ವರುಷಗಳಿಂದ ನಡೆಯುತ್ತಿರುವ ಕಾಮಗಾರಿ ಕೊನೆಗೊಳ್ಳದಿರುವುದು ಪ್ರಶ್ನಾರ್ಥಕವಾಗಿದೆ. ಅರಣ್ಯ ಇಲಾಖೆಯ ಅನುಮತಿ ಪತ್ರವು ಸಕಾಲದಲ್ಲಿ ವಿದ್ಯುತ್ ಇಲಾಖೆಗೆ ದೊರಕದಿರುವುದು ಒಂದು ಕಾರಣ ಎನ್ನಲಾಗಿದ್ದು ಇನ್ನಿತರ ತಾಂತ್ರಿಕ ಕಾರಣಗಳು ಕೂಡ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಕೈಕೊಡುವ ದೂರವಾಣಿ ಸಂಪರ್ಕ
ದಿನಂಪ್ರತಿ ಮೂಕಾಂಬಿಕೆಯ ದರ್ಶನಕ್ಕೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಬಿ.ಎಸ್.ಎನ್.ಎಲ್. ದೂರವಾಣಿ ಹಾಗೂ ಮೊಬೆ„ಲ್ ಬಳಕೆಗೆ ಎದುರಾಗುತ್ತಿರುವ ಸಂಪರ್ಕ ವಿಘ್ನ ಈವರೆಗೆ ಪರಿಹಾರವಾಗದಿರುವುದು ಇಲ್ಲಿನ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ. ಲಕ್ಷಾಂತರ ಭಕ್ತರ ದ್ಯಾನಕೇಂದ್ರವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ವ್ಯವಸ್ಥೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಎಂದು ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರಕಿಲ್ಲ. ಇಲಾಖೆಗಳು ಅತೀ ಶೀಘ್ರದಲ್ಲೇ ಸ್ಪಂದಿಸಿ ಸಮಸ್ಯೆ ನಿಭಾಯಿಸಬೇಕಾಗಿದೆ.