Advertisement

Kaduru; ಗುಡಿಸಲಿಗೆ ಬೆಂಕಿ: ಮಗು ಸೇರಿ ಇಬ್ಬರನ್ನು ರಕ್ಷಿಸಿದ ಗ್ರಾಮದ ಮಹಿಳೆಯರು

05:30 PM Nov 02, 2023 | Team Udayavani |

ಚಿಕ್ಕಮಗಳೂರು/ ಕಡೂರು: ಗ್ರಾಮದ ಮೂರು ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಗುಡಿಸಲಿನಲ್ಲಿದ್ದ ಆರು ವರ್ಷದ ಮಗು ಸೇರಿದಂತೆ ಮತ್ತೋರ್ವ ವ್ಯಕ್ತಿಯನ್ನು ಗ್ರಾಮದ ಮಹಿಳೆಯರು ರಕ್ಷಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ಗುಮ್ಮನಹಳ್ಳಿ ಸಮೀಪದ ಬೋವಿ ಕಾಲೋನಿಯಲ್ಲಿ ಗುರುವಾರ ನಡೆದಿದೆ.

Advertisement

ಗ್ರಾಮದ ಹಿರಿಯರೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಗ್ರಾಮದ ಪುರುಷರೆಲ್ಲರೂ ಮೃತದೇಹದ ಅಂತ್ಯಸಂಸ್ಕಾರಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಮೂರು ಗುಡಿಸಲಿಗೆ ಬೆಂಕಿ ಬಿದ್ದಿದೆ. ಹನುಮಂತು ಎಂಬುವರು ಮದ್ಯ ಸೇವಿಸಿ ಗುಡಿಸಿಲಿನಲ್ಲಿ ಮಲಗಿದ್ದರು. ಕಲ್ಲೇಶ್ ಎಂಬುವರ ಗುಡಿಸಿಲಿನಲ್ಲಿ ಆರು ವರ್ಷದ ಮಗುವಿದ್ದು, ಈ ಗುಡಿಸಲುಗಳಿಗೆ ಬೆಂಕಿ ಬಿದ್ದಿರುವುದು ತಿಳಿಯುತ್ತಿದ್ದಂತೆ ಮಹಿಳೆಯರು ಮಧ್ಯವಯಸ್ಕ ಹನುಮಂತು ಹಾಗೂ ಆರು ವರ್ಷದ ಮಗುವನ್ನು ಗುಡಿಸಲಿನಿಂದ ಹೊರತಂದು ರಕ್ಷಿಸಿದ್ದಾರೆ.

ಗ್ರಾಮದ ಗಂಡಸರು ಅಂತ್ಯ ಸಂಸ್ಕಾರಕ್ಕೆ ತೆರಳಿದ್ದರಿಂದ ಮಹಿಳೆಯರು ಶ್ರಮವಹಿಸಿ ಇಬ್ಬರನ್ನು ರಕ್ಷಿಸಿದ್ದಾರೆ. ಗುಡಿಸಲುಗಳಿಗೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಶವ ಸಂಸ್ಕಾರಕ್ಕೆ ತೆರಳಿದ್ದ ಗಂಡರು ಅಂತ್ಯ ಸಂಸ್ಕಾರವನ್ನು ಅರ್ಧಕ್ಕೆ ಬಿಟ್ಟು ಗ್ರಾಮಕ್ಕೆ ಬಂದಿದ್ದಾರೆ. ಬೆಂಕಿ ಅನಾಹುತದಲ್ಲಿ ಶಶಿ ಮತ್ತು ಕಲ್ಲೇಶ್ ಎಂಬುವರ ಸೇರಿದ ಗುಡಿಸಲು ಸಂಪೂರ್ಣ ಸುಟ್ಟುಹೋಗಿದ್ದು, ಹನುಮಂತ ಎಂಬುವರಿಗೆ ಸೇರಿದ ಗುಡಿಸಲು ಭಾಗಶಃ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಗುಡಿಸಿಲಿನಲ್ಲಿ ವಾಸಿಸುವವರು ಕಡು ಬಡವರಾಗಿದ್ದು, ಗುಡಿಸಲು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next