Advertisement
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ತಾಲೂಕಿನ ಬಿಲ್‌ಕೆರೂರ ಗ್ರಾಮದಲ್ಲಿ ಇಡೀ ತಾಲೂಕು ಆಡಳಿತ ಗ್ರಾಮ ವಾಸ್ತವ್ಯ ನಡೆಸಿತು. ತಾಪಂ ಇಒ ಎನ್.ವೈ. ಬಸರಿಗಿಡದ, ಭೂದಾಖಲೆಗಳ ಸಹಾಯಕ ನಿರ್ದೇಶಕ ಕೊಲ್ಹಾರ, ಹೆಸ್ಕಾಂ ಎಇಇ ಹಲಗತ್ತಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಸುಮಾರು 3 ಗಂಟೆಗಳ ಕಾಲ ಗ್ರಾಮಸ್ಥರ ಅಹವಾಲು ಆಲಿಸಿದರು.
Related Articles
Advertisement
ದಾರಿಗಿ ಅಡ್ಡ ಆಗಬ್ಯಾಡ್ರಿ: ನಮ್ಮ ಹೊಲಕ್ಕೆ ಹೋಗುವ ದಾರಿ ಬಂದ್ ಮಾಡಿದ್ದಾರೆ. ನಾವು ಹೊಲಕ್ಕೆ ಹೇಗೆ ಹೋಗುವುದೆಂದು ವೃದ್ಧೆಯೊಬ್ಬರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ,ಇಂತಹ ಸಮಸ್ಯೆ ಗ್ರಾಮಸ್ಥರೇ ಒಗ್ಗಟ್ಟಿ ನಿಂದ ಬಗೆಹರಿಸಿಕೊಳ್ಳಬೇಕು. ದಾರಿಗೆ ಅಡ್ಡ ಮಾಡಿ, ಕೋಟಿ ಗಳಿಸಲು ಆಗಲ್ಲ. ಹೊಲಕ್ಕೆ ಹೋಗುವ ದಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದರು. ಆಟಿಗೆ ಸಾಮಗ್ರಿ ಸವೆಯಲ್ಲ: ಅಹವಾಲು ಪಡೆದ ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಗ್ರಾಪಂನಿಂದಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಆಟಿಗೆ ವಸ್ತು, ಟಿವಿ ಹಾಗೂ ವಿವಿಧ ಸಾಮಗ್ರಿ ನೀಡಿದ್ದು, ಅವುಗಳನ್ನು ಬಳಕೆ ಮಾಡುತ್ತಿರುವ ಕುರಿತು ಪ್ರಶ್ನಿಸಿದರು. ಬಹುತೇಕ ಸಾಮಗ್ರಿಗಳು ಇನ್ನೂ ಸುಭ್ರವಾಗಿ ಒಂದೆಡೆ ಜೋಡಿಸಿಟ್ಟಿದ್ದನ್ನು ಕಂಡು, ಇವೆಲ್ಲ ಮಕ್ಕಳ ಆಟಿಕೆಗೆ ನೀಡಿದ್ದು, ಅವರಿಗೆ ಆಡಲು ಕೊಟ್ಟರೆ ಸವೆಯುವುದಿಲ್ಲ.ಮಕ್ಕಳಿಗೆ ಆಹಾರಧಾನ್ಯ ವಿತರಣೆ, ಗರ್ಭಿಣಿ, ಬಾಣಂತಿಯರಿಗೆ ಸರಿಯಾಗಿ ಪೌಷ್ಟಿಕ ಆಹಾರ ಕೊಡಬೇಕು. ಈ ಕುರಿತು ಸರಿಯಾಗಿ ದಾಖಲೆಗಳನ್ನೇ ಇಟ್ಟಿಲ್ಲ ಎಂದು ಎಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸೂಪರ್ ವೈಜರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ಶಾಲೆಯಲ್ಲೂ ಇಂತಹ ಸೌಲಭ್ಯ ಇರಲ್ಲ :
ಬಿಲ್‌ಕೆರೂರಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ಮಕ್ಕಳಿಗಾಗಿ ಹೈಟೆಕ್ ಮಾದರಿ ಆಟಿಕೆ ವಸ್ತುಗಳು, ಟಿ.ವಿ, ಗಣಿತ ಮಾದರಿ ಕಲಿಕೆಗೆ ಅನುಕೂಲವಾಗುವ ವಸ್ತುಗಳು ಕಂಡು ಖುಷಿ ಪಟ್ಟರು. ಇಂತಹ ಸೌಲಭ್ಯ ಯಾವುದೇ ಖಾಸಗಿ ಕಾನ್ವೆಂಟ್ ಶಾಲೆಯಲ್ಲೂ ಇರಲ್ಲ ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಹೇಳಿದರು.