Advertisement
ಮರಗೂರು ಗ್ರಾಮದ ಅರವಿಂದ್ ಯೋಗರಾಜ್ ಹಲವು ವರ್ಷದಿಂದ ಬೆಂಗಳೂರಿನಲ್ಲಿ ಸ್ವಉದ್ಯೋಗ ನಡೆಸಿಕೊಂಡಿದ್ದು ಬದುಕು ಕಟ್ಟಿಕೊಂಡಿದ್ದರು. ತಿಂಗಳಿಗೆ ಒಮ್ಮೆ ತನ್ನೂರಿಗೆ ಆಗಮಿಸಿ ತಾಯಿಗೆ ಅಗತ್ಯ ವಸ್ತುಗಳನ್ನು ಕೊಡಿಸಿ ವೆಚ್ಚಕ್ಕೆ ಹಣ ನೀಡಿ ತಾಯಿ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ವಾರ ಗ್ರಾಮಕ್ಕೆ ಬಂದಾಗ ತಾಯಿಯನ್ನು ಕ್ರೈಸ್ತ ಮತಕ್ಕೆ ಆಮೀಚ ಒಡ್ಡಿ ಮತಾಂತರ ಮಾಡಿರುವ ವಿಚಾರ ತಿಳಿದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮತಾಂತರ ಮಾಡಿದವರೇ ಪುಟ್ಟಮ್ಮನ ಕೃಷಿ ಭೂಮಿಯಲ್ಲಿ ಇದ್ದ ಮಾಯಮ್ಮ ದೇವತೆ ಗುಡಿಯನ್ನು ದ್ವಂಸ ಮಾಡಿಸಿದ್ದಾರೆ.
Related Articles
Advertisement
ಮತಾಂತರ ವಿರುದ್ಧ ಗ್ರಾಮದಲ್ಲಿ ಜಾಗೃತಿ-
ಚನ್ನರಾಯಪಟ್ಟಣ: ತಾಲೂಕಿನ ಮರಗೂರು ಗ್ರಾಮದಲ್ಲಿ ಮತಾಂತರ ನಡೆಯುತ್ತಿರುವ ವಿಷಯ ತಿಳಿದು ಸ್ಥಳಿಯ ಹಿಂದೂಪರ ಸಂಘಟನೆ ಕಾರ್ಯ ಕರ್ತರು ಗ್ರಾಮಕ್ಕೆ ಭೇಟಿ ನೀಡಿ ಮತಾಂತರ ಆಗಿರವ ಬಗ್ಗೆ ಮಾಹಿತಿ ಪಡೆದು ಗ್ರಾಮಕ್ಕೆ ಧರ್ಮ ಜಾಗೃತಿ ಸಭೆ ಮಾಡುವುದಾಗಿ ಭಜರಂಗದಳ ಮಾಜಿ ಸಂಚಾಲಕ ಧರಣಿನಾಗೇಶ್ ಭರವಸೆ ನೀಡಿದರು.
ಈಗಾಗಲೆ ಇಬ್ಬರು ಒಕ್ಕಲಿಗರ ಕುಟುಂಬ, ಮೂರು ದಲಿತರ ಕುಟುಂಬದವರು ಕ್ರೈಸ್ತ ಮತಕ್ಕೆ ಸೇರಿದ್ದಾರೆ ಇನ್ನು ಐದಾರು ಮನೆಯವರು ಕ್ರೈಸ್ತರಾಗುವಂತೆ ಒತ್ತಡ ಹೇರಿದ್ದು ಅವರೂ ಸಹಮತ ವ್ಯಕ್ತ ಪಡಿಸಿದ್ದಾರೆ ಎಂಬ ವಿಷಯ ತಿಳಿದಿದೆ. ಆದಷ್ಟು ಬೇಗ ಗ್ರಾಮದಲ್ಲಿ ಧರ್ಮ ಜಾಗೃತಿ ಸಭೆ ಮಾಡಲಾಗುವುದು, ಮತಾಂತರ ಆಗಿರುವ ಕುಟುಂಬವನ್ನು ವಾಪಸ್ ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುವುದು ಎಂದರು.
ಇದನ್ನೂ ಓದಿ:- ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್
ಎಲ್ಲಾ ಜಾತಿಯ ಮಠಾಧೀಶರು ತಮ್ಮ ತಮ್ಮ ಸಮುದಾಯಗಳಿಗೆ ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿ ಮತಾಂತರದಿಂದ ಕಾಪಾಡುವ ಕೆಲಸ ಮಾಡಬೇಕಿದೆ. ಜಾತಿಯಲ್ಲಿ ಭಕ್ತರು ಕಡಿಮೆಯಾದರೆ ಮಠಕ್ಕೆ ಭಕ್ತರು ಕಡಿಮೆ ಆಗುತ್ತಾರೆ ಇದನ್ನು ಅರಿತು ಮಠಾಧೀಶರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾವ ಮಠವೂ ಉಳಿಯುವುದಿಲ್ಲ ಎಂದರು.
ರಾಷ್ಟ್ರ ರಕ್ಷಣಾಪಡೆ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿ, ವೃದ್ಧರು, ಬಡತನ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರನ್ನೇ ಮುಖ್ಯಗುರಿ ಇಟ್ಟುಕೊಂಡು ಅವರಿಗೆ ಇಲ್ಲದ ವ್ಯಾಮೋಹ ತೋರಿ ಹಿಂದುತ್ವದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿನ ಅಧಿಕೃತ ಹಾಗೂ ಅನಧಿಕೃತ ಚರ್ಚ್‌ಗಳ ಬಗ್ಗೆ ಮಾಹಿತಿ ಪಡೆದು, ಕಾನೂನು ಬಾಹೀರವಾಗಿ ಚರ್ಚ್ ತೆರೆದು ಮತಾಂತರದಂತಹ ಕೃತ್ಯಕ್ಕೆ ಕೈ ಹಾಕಿದ್ದಲ್ಲಿ ಅಂತವುಗಳನ್ನು ಕೂಡಲೆ ತಾಲೂಕು ಆಡಳಿತ ತೆರವುಗೊಳಿಸಬೇಕು ಎಂದು ಎಚ್ಚರಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶಾಮಸುಂದರ್, ಯುವ ಬ್ರಿಗೇಡ್ ಕಾರ್ಯಕರ್ತ ಕೆರೆಬೀದಿ ಜಗದೀಶ್, ಹಿಂದುಪರ ಸಂಘಟನೆಯ ಕಾರ್ಯಕರ್ತ ಎನ್.ಎಸ್.ನಾಗೇಂದ್ರ, ಗ್ರಾಮದ ಮುಖಂಡರಾದ ಗುರುಮಲ್ಲೇಶ್, ನವೀನ್, ಶಿವನಂಜೇಗೌಡ, ಗುಡಿಗೌಡ ಶಂಕರೇಗೌಡ, ಶಂಭೇಗೌಡ, ದೇವರಾಜ್, ಜವರಯ್ಯ, ಕುಮಾರ್, ನಟರಾಜ್, ಶಿವಣ್ಣ ಸಭೆಯಲ್ಲಿ ಹಾಜರಿದ್ದರು.
ದೇಗುಲ ಪುನರ್ ನಿರ್ಮಾಣ-
ಗ್ರಾಮಕ್ಕೆ ಆಗಮಿಸಿದ ಪುಟ್ಟಮ್ಮ ಪುತ್ರ ಅರವಿಂದ್‌ಗೆ ಸಂಪೂರ್ಣ ಮಾಹಿತಿ ನೀಡಿ ಕೃಷಿ ಭೂಮಿಗೆ ಕರೆದುಕೊಂಡು ಹೋಗಿ ಅಲ್ಲಿನ ಮಾಯಮ್ಮ ಗುಡಿ ನೆಲಸಮ ಮಾಡಿರುವುದಾಗಿ ತಿಳಿಸಿದ್ದಾರೆ. ಕೂಡಲೆ ಅರವಿಂದ್ ಪುನಃ ಮಾಯಮ್ಮ ಗುಡಿಯನ್ನು ಎಂದಿನಂತೆ ನಿರ್ಮಿಸಿದ್ದಾರೆ.
“ನನ್ನ ತಾಯಿಯನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರಲು ಸಹಕಾರ ನೀಡಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ಸ್ವಯಂ ವಿಡಿಯೋ ಮಾಡಿ ಸಾಮಾಜಿಕ ಜಾಲಾತಣದಲ್ಲಿ ಹರಿ ಬಿಟ್ಟಿದ್ದಾರೆ.
ನಗರದಲ್ಲಿ ನಡೆಯುತಿದ್ದ ಮತಾಂತರ ಭೂತ ಈಗಾಗಲೇ ಗ್ರಾಮೀಣ ಭಾಗವನ್ನು ಆವರಿಸಿದ್ದು, ಅದೆಷ್ಟೋ ಕುಟುಂಬವನ್ನು ನುಂಗಲಾರಂಭಿಸಿದೆ. ನನಗೆ ತಿಳಿಯದೆ ನನ್ನ ತಾಯಿ ಮನಸ್ಸು ಕೆಡಿಸಿ ಮತಾಂತರ ಮಾಡಲಾಗಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು.” – ಅರವಿಂದ್ ಯೋಗರಾಜ್, ಮರುಗೂರು ಪುಟ್ಟಮ್ಮನ ಮಗ
ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ಇಂದು –
ಅರಸೀಕೆರೆ: ತಾಲೂಕು ವಿಶ್ವಹಿಂದು ಪರಿಷತ್ ಹಾಗೂ ಭಜರಂಗ ದಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಆಡಲಿತದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಾಲೂಕು ವಿಶ್ವಹಿಂದು ಪರಿಷತ್ ಅಧ್ಯಕ್ಷ ಟಿ.ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಲೂಕಿನ ನಗರ ಮತ್ತು ಗ್ರಾಮೀಣಾ ಪ್ರದೇಶಗಳಲ್ಲಿ ಅನ್ಯ ಧರ್ಮೀಯರು ಮತಾಂತರ ಕಾರ್ಯವನ್ನು ಮಾಡುತ್ತಿದ್ದು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿದ್ದಾರೆ, ಕೊರೊನಾ ಸಾಂಕ್ರಾಮಿಕ ಖಾಯಿಲೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈದ್ ಮಿಲಾದ್ ಹಬ್ಬದ ಆಚರಣೆಗೆ ಮುಂದಾದ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರ ಗುಂಪು ನಗರದ ಪ್ರಮುಖ ರಸ್ತೆಯಲ್ಲಿ ಸಾವಿರರು ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ನಡೆಸಿದ್ದು, ಅಲ್ಲದೆ ಆರ್‌ಎಸ್‌ಎಸ್ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು.
ಅಲ್ಲದೆ ನೂರಾರು ಬೈಕ್‌ಗಳ ರ್ಯಾಲಿ ನಡೆಸಿದ್ದಾರೆ, ಆದರೆ, ತಾಲೂಕು ಆಡಳಿತ ಕಾನೂನು ಕ್ರಮ ಕೈಗೊಂಡಿಲ್ಲ. ತಾಲೂಕು ಆಡಳಿತದ ವೈಪಲ್ಯವನ್ನು ಖಂಡಿಸಿ ನಮ್ಮ ಸಂಘಟನೆಗಳು ಸಾರ್ವಜನಿಕರ ಪರವಾಗಿ ನಗರದ ಹಾಸನ ರಸ್ತೆಯ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯ ಮುಂಭಾಗದಿಂದ ಬುಧವಾರ ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.