Advertisement

ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ವೈದ್ಯಕೀಯ ಸಿಬ್ಬಂದಿ!

05:54 PM Jun 21, 2022 | Team Udayavani |

ಇಸ್ಲಾಮಾಬಾದ್‌: ತುಂಬು ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗುವಿನ ತಲೆಯನ್ನೇ ಅನನುಭವಿ ವೈದ್ಯಕೀಯ ಸಿಬ್ಬಂದಿ ಕತ್ತರಿಸಿರುವಂಥ ಮನಕಲಕುವ ಘಟನೆ ಪಾಕಿಸ್ತಾನದ ಥರ್ಪಾರ್ಕರ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

32 ವರ್ಷದ ಹಿಂದೂ ಮಹಿಳೆ ಇತ್ತೀಚೆಗೆ ಹೆರಿಗೆಗಾಗಿ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದರು. ಅಲ್ಲಿ ಮಹಿಳಾ ಸಿಬ್ಬಂದಿ ಇಲ್ಲವೆಂದು, ಪುರುಷ ಸಿಬ್ಬಂದಿಯೇ ಆಕೆಗೆ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.

ಶಿಶುವಿನ ತಲೆಯನ್ನು ಗರ್ಭದಲ್ಲೇ ಇಟ್ಟು ಉಳಿದ ಭಾಗವನ್ನು ಕತ್ತರಿಸಿ ತೆಗೆದಿದ್ದಾರೆ. ಮಗುವಿನ ತಲೆಯು ತಾಯಿಯ ಹೊಟ್ಟೆಯಲ್ಲೇ ಉಳಿದ ಕಾರಣ, ತಾಯಿಯು ಜೀವನ್ಮರಣ ಸ್ಥಿತಿಗೆ ತಲುಪಿದ್ದಳು. ಕೂಡಲೇ ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದು, ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿ, ಶಿಶುವಿನ ತಲೆಯನ್ನು ಹೊರತೆಗೆಯಲಾಗಿದೆ.

ಪ್ರಕರಣದ ತನಿಖೆಗೆ ಸರ್ಕಾರ ವಿಶೇಷ ತಂಡವನ್ನು ರಚಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next