ತಿ.ನರಸೀಪುರ: ಗ್ರಾಮ ವಿಕಾಸ ಯೋಜನೆ ಹಿಂದುಳಿದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಇದೊಂದು ಅತ್ಯುತ್ತಮ ಯೋಜನೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ವ್ಯಾಪ್ತಿಯ ಮೂಗೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಗ್ರಾಮ ವಿಕಾಸ ಯೋಜನೆಯಡಿ 1.79 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ನಾಗರೀಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ತರಲು ಮೊದಲ ಆದ್ಯತೆ ನೀಡಲಾಗುವುದು. ಗ್ರಾಮಗಳು ಅಭಿವೃದ್ಧಿ ಹೊಂದಿದರೆ ಜನರಿಗೆ ಸೌಲಭ್ಯಗಳು ಸಿಗಲಿವೆ. ರಸ್ತೆ, ಕುಡಿಯುವ ನೀರು,ಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಬಿಡುಗಡೆಯಾಗಿರುವ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ವಾಟಾಳು, ವಾಟಾಳುಪುರ, ಆದಿಬೆಟ್ಟಹಳ್ಳಿ, ಹೊಸಹಳ್ಳಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ವಾಟಾಳು ಮಠದ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಕೈಯಂಬಳ್ಳಿ ನಟರಾಜು, ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಶಂಭುದೇವನಪುರ ರಮೇಶ್,
-ತಾಪಂ ಸದಸ್ಯ ಮೂಗೂರು ಚಂದ್ರ ಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಣ್ಣ, ಮುಖಂಡ ಶಿವಮೂರ್ತಿ, ಕಬಿನಿ ನೀರಾವರಿ ಇಲಾಖೆ ಅಧಿಕಾರಿ ಲಕ್ಷಣ್‌ರಾವ್, ಜಿಪಂ ಎಇಇ ಚಿಕ್ಕನಿಂಗಯ್ಯ, ರಾಜುನಾಯಕ, ಗುತ್ತಿಗೆದಾರ ಮೂಗೂರು ಹರೀಶ್, ಭೂಸೇನಾ ನಿಗಮದ ಅಧಿಕಾರಿ ಸಿದ್ಧರಾಜು ಇತರರಿದ್ದರು.