ವಿಜಯಪುರ: ಪ್ರಸ್ತುತ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಇತರ ಪರಿಸರ ಸ್ನೇಹಿ ಮಾರ್ಗಸೂಚಿ ಅನುಸರಿಸುವುದು ಅನಿವಾರ್ಯವಾಗಿದೆ ಶಿವರಾಜ್ ಹಳ್ಳಿ ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದ ಗಡಿ ಭಾಗವಾದ ಗಡಿನಾಡು ಕನ್ನಡ ಗ್ರಾಮವಾದ ಜತ್ತ ತಾಲೂಕಿನ ಉಮದಿ ಪಟ್ಟಣದಲ್ಲಿ ಸರ್ವೋದಯ ಶಿಕ್ಷಣ ಸಮಿತಿ-ಲೀಡರ್ ಎಕ್ಸ್‌ಲ್ ರೇಟಿಂಗ್ ಡೆವಲೆಪಮೆಂಟ್ ಕಾರ್ಯಕ್ರಮದಲ್ಲಿ ಮಾಡನಾಡಿದ ಅವರು, ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅತಿ ಕಡಿಮೆ ವೆಚ್ಚದಲ್ಲಿ ಬಳಸಲು ಸಹಕಾರಿಯಾಗಲಿದೆ. ರದ್ದಿ ಪೇಪರ್‌ನಿಂದ ಬ್ಯಾಗ್, ಕಿವಿಯೋಲೆ ಸೇರಿ ವಿವಿಧ ಆಭರಣಗಳ, ಕಲಾಕೃತಿ ತಯಾರಿಕೆ ಮಾಡುವುದರಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ಸಾಧ್ಯ ಎಂದರು.
ನಂತರ ನ್ಯೂಸ್ ಪೇಪರ್ ಮೊದಲಾದ ಕಾಗದಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕತ್ತರಿಸಿ ಅದಕ್ಕೆ ಬ್ಯಾಗ್‌ನ ರೂಪ ನೀಡಿದರು. ಕಾಗದದಿಂದಲೇ ಸುಂದರ ಕಲಾಕೃತಿ ರಚಿಸಿ, ಅದಕ್ಕೆ ಸುಂದರವಾದ ಬಣ್ಣ ಹಾಗೂ ಅಲಂಕಾರಿಕ ವಸ್ತುಗಳನ್ನು ಅಲಂಕರಿಸಿ ಪರಿಸರದಲ್ಲಿಯೇ ದೊರಕುವ ಪರಿಸರ ಸ್ನೇಹಿ ವಸ್ತುಗಳಿಂದಲೇ ಮನೆ ಅಂದ ಹೆಚ್ಚಿಸುವ ವಸ್ತುಗಳನ್ನು ತಯಾರಿಸಬಹುದು ಎಂಬ ಸಂದೇಶ ಸಾರಿದರು.
ಪರಿಸರ ರಕ್ಷಣೆ ನಿಟ್ಟಿನಲ್ಲಿ ಆರಂಭಿಕವಾಗಿ ವಿದ್ಯಾರ್ಥಿಗಳಿಗೆ ಪೇಪರ್ ಬ್ಯಾಗ್ ತಯಾರಿಕಾ ತರಬೇತಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಸೆಣಬು ಮತ್ತು ಬಟ್ಟೆಯ ಕೈ ಚೀಲಗಳನ್ನು ತಯಾರಿಸುವ ತರಬೇತಿ ನೀಡುವ ಯೋಜನೆ ರೂಪಿಸಿದ್ದೇವೆ ಎಂದರು.
ಸಂಯೋಜಕ ಸಂತೋಷ ಬಿರಾದಾರ ಮಾತನಾಡಿ, ಆರಂಭಿಕ ಹಂತದಲ್ಲಿ ಪೇಪರ್, ಬಟ್ಟೆಗಳ ಬ್ಯಾಗ್ ತಯಾರಿಕೆ ವಿಧಾನ ಕಲಿತ ನಂತರ ಗ್ರಾಮಗಳಲ್ಲಿ ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಮುಂದಾಗಬೇಕು. ಇದಕ್ಕಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಪ್ರಾಂಶುಪಾಲ ಹೊರ್ತಿಕರ ಮಾತನಾಡಿದರು. ಪರಿಸರ ರಕ್ಷಣೆಗಾಗಿ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯಿಂದ ವಿಮುಖವಾಗಲು ಪರಿಸರ ಸ್ನೇಹಿ
ಪರ್ಯಾಯ ವಸ್ತುಗಳನ್ನು ತಯಾರಿಸಿ, ಬಳಸುವ ವಿಧಾನಗಳ ಕುರಿತು ಕಾರ್ಯಾಗಾರದಲ್ಲಿ ತಮ್ಮ ರಚನಾತ್ಮಕ ಕೆಲಸ ಮಾಡಿದರು.