ಮುಂಬಯಿ: ವಿಕ್ರೋಲಿ ಪೂರ್ವದ ಠಾಗೋರ್ ನಗರದ ಹರಿಯಾಲಿ ವಿಲೇಜ್‌ನ ಶ್ರೀ ಅಯ್ಯಪ್ಪ ಸೇವಾ ಮಂಡಲ ಇದರ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಯು ಡಿ. 30ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 5ರಿಂದ ಗಣಪತಿ ಹೋಮ, ಬೆಳಗ್ಗೆ 7ರಿಂದ ಮಹಾದೇವಿ ಪೂಜೆ, ಪೂರ್ವಾಹ್ನ 10ರಿಂದ ಭಜನೆ ಹಾಗೂ ಪೂರ್ವಾಹ್ನ 11 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಡೆಯಿತು. ಮಧ್ಯಾಹ್ನ 12ರಿಂದ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಪುರೋಹಿತ ಶ್ರೀಕಾಂತ್ ಭಟ್ ಅವರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಶ್ರೀನಿವಾಸ ಗುರುಸ್ವಾಮಿ, ಸುರೇಶ್ ಪಾಟ್ಕರ್ ಗುರುಸ್ವಾಮಿ, ಬಸ್ತಿ ರವಿ ಗುರುಸ್ವಾಮಿ ಅವರು ಅಯ್ಯಪ್ಪ ಪೂಜೆಯನ್ನು ನೆರವೇರಿಸಿದರು. ಹದಿನೆಂಟನೇ ಶಬರಿಮಲೆ ಯಾತ್ರೆ ಕೈಗೊಂಡ ಕಮಲೇಶ್ ಶೆಟ್ಟಿ ಗುರುಸ್ವಾಮಿ ಮತ್ತು ಸದಾನಂದ ತಣ್ಣೀರುಬಾವಿ ಗುರು ಸ್ವಾಮಿಗಳನ್ನು ಇದೇ ಸಂದರ್ಭದಲ್ಲಿ ಶಾಲು ಹೊದೆಸಿ,ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಪೇಜಾವರ ಉದಯ ಗುರುಸ್ವಾಮಿ, ವ್ರತಧಾರಿಗಳಾದ ಗಣೇಶ್ ಸ್ವಾಮಿ, ಯುಗಾನಂದ ಸ್ವಾಮಿ, ದಿಲೀಪ್ ಸ್ವಾಮಿ, ಸಂತೋಷ್ ಗಾಯಕ್ವಾಡ್ ಸ್ವಾಮಿ, ಸಂದೀಪ್ ಗುಡೆಕಾರ್ ಸ್ವಾಮಿ, ಪೂವಪ್ಪ ಸ್ವಾಮಿ, ಕೃಷ್ಣ ಸ್ವಾಮಿ, ಸಂತೋಷ್ ಸ್ವಾಮಿ, ರಾಜೇಶ್ ಸ್ವಾಮಿ, ಡಿ. ಗಣೇಶ್ ಸ್ವಾಮಿ, ದಯಾನಂದ ಸ್ವಾಮಿ, ನರೇಶ್ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಅಖೀಲ ಭಾರತ ಅಯ್ಯಪ್ಪ ಸೇವಾ ಸಂಸ್ಥೆಯ ಭಜನಾ ಮಂಡಳಿಯಿಂದ ಭಜನ ಕಾರ್ಯಕ್ರಮ ನಡೆಯಿತು.
ವಿಕ್ರೋಲಿ ಬಂಟ್ಸ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಕೆ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ಮುಕೇಶ್ ಆರ್. ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂಸುಂದರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ, ಸತೀಶ್ ಐಲ್, ಉಮೇಶ್ ಪೂಜಾರಿ, ರಮೇಶ್ ಅಂಚನ್, ಸುರೇಶ್ ಬಂಗೇರ, ಸುಂದರ ಪಿಳ್ಳೈ, ಅಚ್ಚೆಲಾಲ್ ಗುಪ್ತ, ನಿತ್ಯಾನಂದ ಶೆಟ್ಟಿ, ಸಂತೋಷ್ ಕದಂ, ಮಹೇಂದ್ರ ಕದಂ, ಸುರೇಶ್ ಬಂಗೇರ, ದಯಾನಂದ ಶೆಟ್ಟಿ, ವಿಜಯ ಸಾಲ್ಯಾನ್, ಪ್ರವೀಣ್ ಬಂಗೇರ, ಪ್ರವೀಣ್ ವಸಂತ್ ಶೆಟ್ಟಿ, ಪ್ರವೀಣ್ ಕೆ. ಶೆಟ್ಟಿ, ಸತೀಶ್ ಮಹಾಬಲ ಶೆಟ್ಟಿ, ಗಿರೀಶ್ ಸಾಲ್ಯಾನ್, ದಿನೇಶ್ ಹುಲೆ, ದೀಪಕ್ ಶೆಟ್ಟಿ ಮತ್ತು ಪರಿವಾರ, ಕರಿಯ ಶೆಟ್ಟಿ, ರವೀಂದ್ರ ಶೆಟ್ಟಿ, ಜಯ ಶೆಟ್ಟಿ, ಶೇಖರ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ವಿಕ್ರೋಲಿ ಬಂಟ್ಸ್‌ನ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಕ್ರೋಲಿ ಕನ್ನಡ ಸಂಘ, ಬಿಲ್ಲವರ ಅಸೋಸಿಯೇಶನ್ ವಿಕ್ರೋಲಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ತುಳು-ಕನ್ನಡಿಗರು, ಅಯ್ಯಪ್ಪ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದು.
ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜ. 1 ರಂದು ಸಂಜೆ 6.30 ರಿಂದ ಶ್ರೀ ಗೀತಾಂಬಿಕ ಕೃಪಾಪೋಶಿತ ಯಗÒಗಾನ ಮಂಡಳಿ ಘಾಟ್ಕೊàಪರ್ ಇವರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ದೇವಿ ಮಹಾತೆ¾ ಎಂಬ ಪುಣ್ಯ ಕಥಾ ಭಾಗವು ಬಯಲಾಟ ರೂಪದಲ್ಲಿ ಪ್ರದರ್ಶನಗೊಂಡಿತು. ಸಾವಿರಾರು ಭಕ್ತಾದಿಗಳು, ಕಲಾಭಿಮಾನಿಗಳು ಪಾಲ್ಗೊಂಡಿದ್ದರು.