Advertisement

Hassan; ವಿಕ್ರಂ ಸಿಂಹಗೆ ಜಾಮೀನು: ಬಿಡುಗಡೆ

11:43 PM Dec 31, 2023 | Team Udayavani |

ಹಾಸನ: ಬೇಲೂರು ತಾಲೂಕು ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಮೈಸೂರು ಸಂಸದ ಪ್ರತಾಪಸಿಂಹ ಅವರ ಸಹೋದರ, ಸಕಲೇಶಪುರ ತಾಲೂಕು ಬಿರಡಹಳ್ಳಿಯ ನಿವಾಸಿ ವಿಕ್ರಂ ಸಿಂಹ ಅವರಿಗೆ ಬೇಲೂರು ಜೆಎಂಎಫ್ಸಿ ನ್ಯಾಯಾಲಯ ಜಾಮೀನು ನೀಡಿದೆ.

Advertisement

ವಿಕ್ರಂಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿ ನಲ್ಲಿ ಶನಿವಾರ ಸಂಜೆ ವಶಕ್ಕೆ ತೆಗೆದು ಕೊಂಡಿದ್ದರು. ರಾತ್ರಿಯೇ ಹಾಸನಕ್ಕೆ ಕರೆತಂದ ಅಧಿಕಾರಿಗಳು ಹಾಸನದ ಹೊರ ವಲಯದಲ್ಲಿರುವ ಜಂಡೇಕಟ್ಟೆ ಅರಣ್ಯ ಧಾಮದ ಅತಿಥಿಗೃಹದಲ್ಲಿ ಇರಿಸಿದ್ದರು. ರವಿವಾರ ಬೆಳಗ್ಗೆ ಅವರನ್ನು ಹಿಮ್ಸ್‌ ಆಸ್ಪತ್ರೆಗೆ ಕೆರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಿದರು.

ಬಳಿಕ ಬೇಲೂರಿಗೆ ಕರೆದೊಯ್ದು ಜೆಎಂಎಫ್ಸಿ ನ್ಯಾಯಾಧೀಶ ಪ್ರಕಾಶ್‌ ನಾಯಕ್‌ ಅವರ ಮುಂದೆ ಹಾಜರುಪಡಿಸಿದರು. ಆಗ ವಿಕ್ರಂ ಪರ ವಕೀಲರು ಎಫ್ಐಆರ್‌ನಲ್ಲಿ ಹೆಸರಿಲ್ಲ ದಿದ್ದರೂ ವಿಕ್ರಂಸಿಂಹ ಅವರನ್ನು ಬಂಧಿಸಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಪರಿಶೀಲನೆ ನಡೆಸಿದ ನ್ಯಾಯಾಧೀಶರು ವಿಕ್ರಂಸಿಂಹಗೆ ಜಾಮೀನು ಮಂಜೂರು ಮಾಡಿದರು.

ರಾಜಕೀಯ ಪ್ರೇರಿತ
ಜಾಮೀನು ಬಳಿಕ ನ್ಯಾಯಾ ಧೀಶರ ನಿವಾಸದಿಂದ ಹೊರ ಬಂದ ವಿಕ್ರಂಸಿಂಹ ಅವರು ಸುದ್ದಿಗಾರ ರೊಂದಿಗೆ ಮಾತನಾಡಿ, ನಂದಗೊಂಡನ ಹಳ್ಳಿಯಲ್ಲಿ ಶುಂಠಿ ಬೆಳೆಯಲು ನಾನು ಜಯಮ್ಮ ಎಂಬವರಿಂದ 3.10 ಎಕ್ರೆ ಜಮೀನು ಕರಾರು ಮಾಡಿ ಕೊಂಡಿದ್ದೇನೆ. ಮರ ಕಡಿತಕ್ಕೂ ನನಗೂ ಸಂಬಂಧವಿಲ್ಲ. ಆದರೂ ನನ್ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವುದು ರಾಜಕೀಯ ಪ್ರೇರಿತ. ನನಗೆ ಜಾಮೀನು ಮಂಜೂರಾಗುವ ಮೂಲಕ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದರು.

ಅಕ್ರಮವಾಗಿ ಮರ ಕಡಿದ ಆರೋಪದಲ್ಲಿ ವಿಕ್ರಂ ಸಿಂಹ ಬಂಧನವನ್ನು ಮುಂದಿಟ್ಟು ಸಂಸದ ಪ್ರತಾಪಸಿಂಹ ಅವರು ಅನಗತ್ಯವಾಗಿ ಸಿಎಂ ಮತ್ತು ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಈ ಅಪರಾಧದಲ್ಲಿ ಅವರು ಕೂಡ ಪರೋಕ್ಷವಾಗಿ ಭಾಗಿಯಾಗಿದ್ದಾರೆಂದು ಭಾವಿಸಬೇಕಾಗುತ್ತದೆ.
-ಈಶ್ವರ ಖಂಡ್ರೆ, ಅರಣ್ಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next