Advertisement

ವಿಕ್ರಮ್‌ ರಾಠೊಡ್‌ ಬ್ಯಾಟಿಂಗ್‌ ಕೋಚ್

02:04 AM Aug 23, 2019 | Sriram |

ಮುಂಬಯಿ: ಮಾಜಿ ಕ್ರಿಕೆಟಿಗ ವಿಕ್ರಮ್‌ ರಾಠೊಡ್‌ ಅವರನ್ನು ಟೀಮ್‌ ಇಂಡಿಯಾದ ನೂತನ ಬ್ಯಾಟಿಂಗ್‌ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಅವರು ಸಂಜಯ್‌ ಬಂಗಾರ್‌ ಸ್ಥಾನವನ್ನು ತುಂಬಲಿದ್ದಾರೆ. ಆದರೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್ ಆಗಿ ಭರತ್‌ ಅರುಣ್‌ ಮತ್ತು ಆರ್‌. ಶ್ರೀಧರ್‌ ಮುಂದುವರಿಯಲಿದ್ದಾರೆ.

Advertisement

ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಗುರುವಾರ ಈ ಮೂವರ ಹೆಸರುಗಳನ್ನು ಶಿಫಾರಸು ಮಾಡಿತು. ಸ್ವಹಿತಾಸಕ್ತಿ ಸಮಸ್ಯೆ ಇಲ್ಲ ಎಂಬುದು ಖಾತ್ರಿಗೊಂಡ ಬಳಿಕ ಈ ಹೆಸರನ್ನು ಅನು ಮೋದಿಸಲಾಯಿತು. ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ರಾಹುಲ್ ಜೊಹ್ರಿ ಇದನ್ನು ಮಾಧ್ಯಮಗಳಿಗೆ ತಿಳಿಸಿದರು.

50ರ ಹರೆಯದ, ಪಂಜಾಬ್‌ನ ವಿಕ್ರಮ್‌ ರಾಠೊಡ್‌ 1996-97ರ ಅವಧಿಯಲ್ಲಿ ಭಾರತದ ಪರ 6 ಟೆಸ್ಟ್‌ ಮತ್ತು 7 ಏಕದಿನ ಪಂದ್ಯಗಳನ್ನಾಡಿದ್ದಾರೆ. 146 ಪ್ರಥಮ ದರ್ಜೆ ಪಂದ್ಯಗಳಿಂದ 11,473 ರನ್‌ ಪೇರಿಸಿದ್ದಾರೆ. ಸಂದೀಪ್‌ ಪಾಟೀಲ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ರಾಠೊಡ್‌ ಸದಸ್ಯನೂ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next