Advertisement

ಟೀಂ ಇಂಡಿಯಾ ಕೋಚ್ ಹುದ್ದೆಗೆ ಭಾರಿ ಪೈಪೋಟಿ: ಮುಂಚೂಣಿಯಲ್ಲಿದ್ದಾರೆ ರವಿ ಶಾಸ್ತ್ರೀ ಆಪ್ತ

11:00 AM Aug 23, 2021 | Team Udayavani |

ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರ ಅಧಿಕಾರವಧಿ ಇನ್ನು ಕೆಲವು ವಾರಗಳಷ್ಟೇ ಬಾಕಿ ಉಳಿದಿದೆ. ಟಿ20 ವಿಶ್ವಕಪ್ ಬಳಿಕ ರವಿ ಶಾಸ್ತ್ರೀ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಕ್ಕೆ ಸೂಕ್ತರನ್ನು ಹುಡುಕುವ ಕೆಲಸ ಈಗಾಗಲೇ ಆರಂಭವಾಗಿದೆ.

Advertisement

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಸ್ಥಾನಕ್ಕೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡಮೆ (ಎನ್ ಸಿಎ) ಮುಖ್ಯಸ್ಥನ ಸ್ಥಾನಕ್ಕೆ ಮತ್ತೊಂದು ಅವಧಿ ಬಯಸಿ ಅರ್ಜಿ ಹಾಕಿದ್ದಾರೆ. ಹೀಗಾಗಿ ಅವರು ರಾಷ್ಟ್ರೀಯ ತಂಡದ ಕೋಚ್ ಆಗುವುದು ಸಾಧ್ಯವಿಲ್ಲ.

ಇದನ್ನೂ ಓದಿ:ಅಫ್ಘಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿ ಅಜೀಜುಲ್ಲಾ ಫಜ್ಲಿ ಮರು ನೇಮಕ

ಸದ್ಯ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಹೆಸರು ಮುಖ್ಯ ಕೋಚ್ ಹುದ್ದೆಗೆ ಬಲವಾಗಿ ಕೇಳಿಬರುತ್ತಿದೆ. ವಿಕ್ರಮ್ ರಾಥೋರ್ ಅವರು ರವಿ ಶಾಸ್ತ್ರೀ ಜೊತೆಗೆ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಸೀನಿಯರ್ ಆಟಗಾರರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರ ಆಯ್ಕೆ ಖಚಿತವಾಗಬಹುದು ಎನ್ನುತ್ತಿವೆ ಮೂಲಗಳು.

Advertisement

ಪಂಜಾಬ್ ಮೂಲದ ವಿಕ್ರಮ್ ರಾಥೋರ್ 1996-1997 ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತದ ಪರ ಆರು ಟೆಸ್ಟ್ ಮತ್ತು ಏಳು ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಿರುವ ವಿಕ್ರಮ್, 146 ಪ್ರಥಮ ದರ್ಜೆ ಪಂದ್ಯಗಳಲ್ಲಿ 11,473 ರನ್ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next