Advertisement

Vikasa Parva; ತೆರೆಗೆ ಬಂತು ಫ್ಯಾಮಿಲಿ ಥ್ರಿಲ್ಲರ್‌ ವಿಕಾಸ ಪರ್ವ

12:32 PM Sep 13, 2024 | Team Udayavani |

ವಿಕಾಸಪರ್ವ ಎಂಬ ಫ್ಯಾಮಿಲಿ ಥ್ರಿಲ್ಲರ್‌ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಕೌಟುಂಬಿಕ ವಿಷಯವೊಂದನ್ನು ಭಿನ್ನವಾಗಿ ಹೇಳಿರುವ ಈ ಚಿತ್ರದಲ್ಲಿ ರೋಹಿತ್‌ ನಾಗೇಶ್‌ ನಾಯಕ ನಟರಾಗಿದ್ದಾರೆ. ಈವರೆಗೆ ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿರುವ ರೋಹಿತ್‌ ನಾಗೇಶ್‌ ವಿಕಾಸಪರ್ವದ ಮೂಲಕ ನಾಯಕ ನಟನ ಹೊಣೆ ಹೊತ್ತಿದ್ದಾರೆ.

Advertisement

ಇತ್ತೀಚೆಗೆ ಚಿತ್ರತಂಡ ದಾವಣಗೆರೆ, ಹುಬ್ಬಳ್ಳಿ, ಹಾಸನ, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಸಂಚರಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರ ಮುಂದೆ ಹೋಗಿ ಚಿತ್ರದ ಪ್ರಚಾರ ಮಾಡಿದೆ. ಈಗಾಗಲೇ ಚಿತ್ರದ ಟ್ರೇಲರ್‌ಗೆ ಹೋದಲೆಲ್ಲ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಿನಿಮಾ ನೋಡುವ ಕುತೂಹಲವನ್ನು ಪ್ರೇಕ್ಷಕರಲ್ಲಿ ಹೆಚ್ಚಿಸಿದೆ.

ಚಿತ್ರದ ಕುರಿತು ಮಾತನಾಡುವ ನಟ ರೋಹಿತ್‌ ನಾಗೇಶ್‌, “ವಿಕಾಸಪರ್ವ ಇಂಥದ್ದೇ ಜಾನರ್‌ ಚಿತ್ರ ಎಂದು ಹೇಳಲಾಗದು. ಇಲ್ಲಿ ಎಲ್ಲ ರೀತಿಯ ಅಂಶಗಳಿವೆ. ಪ್ರತಿ ಮನೆಯಲ್ಲಿರುವ ಗಹನವಾದ ಸಮಸ್ಯೆ ಇಲ್ಲಿ ಹೇಳಲಾಗಿದೆ’ ಎಂದಿದ್ದಾರೆ.

ಸಮೀರ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್‌ ನಿರ್ದೇಶನದ ಈ ಚಿತ್ರದಲ್ಲಿ ಸ್ವಾತಿ, ಅಶ್ವಿ‌ನ್‌ ಹಾಸನ್‌, ಕುರಿರಂಗ, ಬಲ ರಾಜವಾಡಿ, ನಿಶ್ವಿ‌ಕಾ ಗೌಡ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.