Advertisement
ವಿಕಾಸ್ ದುಬೆ ವಿರುದ್ಧ ರಾಹುಲ್ ತಿವಾರಿ ಎಂಬವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಶುಕ್ರವಾರ (ಇಂದು) ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೆರಳಿದ್ದ ವೇಳೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿ ಪೊಲಿಸರನ್ನು ಕೊಲೆಗೈಯಲಾಗಿದೆ.
Related Articles
Advertisement
ತಾರಾಚಂದ್ ಇಂಟರ್ ನ್ಯಾಶನಲ್ ಕಾಲೇಜು ಪ್ರಿನ್ಸಿಪಾಲ್ ಆಗಿದ್ದ ಸಿದ್ದೇಶ್ವರ ಪಾಂಡೆ ಕೊಲೆ ಪ್ರಕರಣದಲ್ಲೂ ದುಬೆ ಪ್ರಮುಖ ಆರೋಪಿಯಾಗಿದ್ದ. 2004ರಲ್ಲಿ ಉದ್ಯಮಿ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲೂ ವಿಕಾಸ್ ದುಬೆ ಹೆಸರು ಕೇಳಿ ಬಂದಿತ್ತು.
ಕೊಲೆ, ಸುಲಿಗೆ, ಅಪಹರಣ ಮುಂತಾದ ಕುಕೃತ್ಯಗಳಲ್ಲಿ ದುಬೆ ಹೆಸರಿದೆ. ಜೈಲಿನಲ್ಲಿದ್ದುಕೊಂಡೆ ಹತ್ಯೆಗಳಿಗೆ ಸ್ಕೆಚ್ ಸಿದ್ದಮಾಡುತ್ತಿದ್ದ ಎನ್ನಲಾಗಿದೆ. 2018ರಲ್ಲಿ ಈತನ ಸೋದರ ಸಂಬಂಧಿ ಅನುರಾಗ್ ಎನ್ನುವಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಯೋಜನೆಯನ್ನು ಮಾಟಿ ಜೈಲಿನಲ್ಲಿ ರೂಪಿಸಿದ್ದ ಎನ್ನಲಾಗಿದೆ. ಕೆಲವಷ್ಟು ಬಾರಿ ಜೈಲು ಸೇರಿದರೂ ಸಾಕ್ಷಾಧಾರಗಳ ಕೊರತೆಯಿಂದ ಬಿಡುಗಡೆಯಾಗುತ್ತಿದ್ದ.
ನಂತರ ಬಹುಜನ ಸಮಾಜ ಪಕ್ಷ ಸೇರ್ಪಡೆಯಾಗಿದ್ದ ಈತ ಶಿವರಾಜಪುರ್ ನಗರ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದ.
ಕೊಲೆ ಬೆದರಿಕೆ ಪ್ರಕರಣದ ಆರೋಪದ ಮೇಲೆ ವಿಕಾಸ್ ದುಬೆನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಈತ ಮತ್ತು ಸಹಚರರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಎಂಟು ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ.