ಚೆನ್ನೈ: ದಳಪತಿ ವಿಜಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಲಿಯೋ’ ಚಿತ್ರದ ಟ್ರೈಲರ್ ಗುರುವಾರ ಸಂಜೆ ಬಿಡುಗಡೆಯಾಗಿದೆ. ಟ್ರೇಲರ್‌ಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ತಮಿಳು ಟ್ರೈಲರ್ ಕೇವಲ 30 ನಿಮಿಷಗಳಲ್ಲಿ ಯೂಟ್ಯೂಬ್‌ನಲ್ಲಿ 30 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ದಳಪತಿ ಅಭಿಮಾನಿಗಳಿಗಾಗಿಯೇ ಹಲವೆಡೆ ವಿಶೇಷ ಸ್ಕ್ರೀನ್ ಮೂಲಕ ಟ್ರೇಲರ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಂತಹದೊಂದು ವಿಶೇಷ ಶೋ ಚೆನ್ನೈನ ರೋಹಿಣಿ ಸಿಲ್ವರ್ ಸ್ಕ್ರೀನ್ ನಲ್ಲಿ ಏರ್ಪಡಿಸಲಾಗಿದ್ದು ಅದರಂತೆ ಗುರುವಾರ ಸಂಜೆ 6.30ಕ್ಕೆ ಬಿಡುಗಡೆಯಾದ ಎರಡು ನಿಮಿಷ 43 ಸೆಕೆಂಡ್ ನ ಟ್ರೇಲರ್‌ಗಾಗಿ ಚೆನ್ನೈನ ರೋಹಿಣಿ ಸಿಲ್ವರ್‌ಸ್ಕ್ರೀನ್ ಥಿಯೇಟರ್ ಅಂಗಳದ ಪಾರ್ಕಿಂಗ್ ಸ್ಥಳದಲ್ಲಿ ಟ್ರೈಲರ್ ಅನ್ನು ಪ್ರದರ್ಶಿಸುವುದು ಮೊದಲ ನಿರ್ಧಾರವಾಗಿತ್ತು. ಆದರೆ, ಪೊಲೀಸರ ಅನುಮತಿ ಪಡೆಯದ ಕಾರಣ ಥಿಯೇಟರ್‌ನೊಳಗೆ ಪ್ರದರ್ಶನ ನಡೆಸಲಾಯಿತು.
ಉಚಿತ ಪ್ರದರ್ಶನದಲ್ಲಿ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು. ಥಿಯೇಟರ್ ನ ಹೊರಗೆ ಬಹಳ ಹೊತ್ತು ಕಾದು ನಿಂತಿದ್ದ ಅಭಿಮಾನಿಗಳು ಗೇಟ್ ತೆರೆದಾಗ ಒಮ್ಮೆಲೇ ಒಳಗೆ ನುಗ್ಗಿ ಟ್ರೇಲರ್ ವೀಕ್ಷಣೆಯನ್ನೂ ಮಾಡಿದ್ದಾರೆ ಆದರೆ, ಪ್ರದರ್ಶನ ಮುಗಿದಾಗ ಬಳಿಕ ಥಿಯೇಟರ್ ಅಧಿಕಾರಿಗಳು ಮಾತ್ರ ಬೆಚ್ಚಿಬಿದ್ದಿದ್ದರು. ಕಾರಣ ಟ್ರೇಲರ್‌ನ ಸಂಭ್ರಮದಲ್ಲಿ ಅಭಿಮಾನಿಗಳು ಥಿಯೇಟರ್ ನ ಸೀಟ್‌ಗಳ ಮೇಲೆ ಏರಿ ಕುಣಿಯುವ ಭರದಲ್ಲಿ ಆಸನಗಳು ಮುರಿದು ಹೋಗಿದ್ದು ಆಸನದ ಕೆಲವು ಭಾಗಗಳು ಚದುರಿ ಹೋಗಿವೆ ಎಂದು ಥಿಯೇಟರ್ ಅಧಿಕಾರಿಗಳು ಹೇಳಿದ್ದಾರೆ ಅಲ್ಲದೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಅವರ ‘ಲಿಯೋ’ ಚಿತ್ರ ಅಕ್ಟೋಬರ್ 19 ರಂದು ಥಿಯೇಟರ್‌ಗೆ ಬರಲಿದ್ದು. ಬರೋಬ್ಬರಿ 14 ವರ್ಷಗಳ ಬಳಿಕ ತ್ರಿಶಾ ವಿಜಯ್ ಜೊತೆ ನಟಿಸುತ್ತಿರುವ ಚಿತ್ರವಾಗಿದೆ. ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮಿಶ್ಕಿನ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಇತರ ತಾರಾ ಬಳಗವೇ ಚಿತ್ರದಲ್ಲಿದೆ.
ಇದನ್ನೂ ಓದಿ: ಮೈಸೂರು ದಸರಾ ಏರ್ ಶೋ ಆಯೋಜನೆ: ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ