ತಾಂಬಾ: ಗ್ರಾಮದಲ್ಲಿ 1500 ಬೈಕ್‌ಗಳಲ್ಲಿ 3000 ಯುವಕರು ಬೈಕ್ ರ್ಯಾಲಿಯಲ್ಲಿ ಬೃಹತ್ ಸ್ವಾಗತ ಕೋರಿದ್ದು ನೋಡಿದರೆ ನಾನು ಎಲ್ಲಿದ್ದೇನೆ ಅನಿಸಿತ್ತು. ನಮ್ಮ ಅಭ್ಯರ್ಥಿ ರಮೇಶ ಭೂಸನೂರವರ ವಿನಯ ಹಾಗೂ ಬಿಜೆಪಿ ಅಭಿವೃದ್ಧಿ ಕಾರ್ಯಗಳೆ ಇದಕ್ಕೆ ಸಾಕ್ಷಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ತಾಂಬಾ ಗ್ರಾಮದಲ್ಲಿ ಸಿಂದಗಿ ಉಪಚುನಾವಣೆ ನಿಮಿತ್ತ ಆಗಮಿಸಿದಾಗ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೆಸಿಬಿ ಮೂಲಕ ಹೂವಿನ ಸುರಿಮಳೆಗೈದರು. ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ವಿಜೇಂದ್ರರವರಿಗೆ ಹಾಗೂ ಭೂಸನೂರವರಿಗೆ ಜಯ ಘೋಷಗಳನ್ನು ಕುಗಿ ಕಾರ್ಯಕರ್ತರೆಲ್ಲರೂ ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಸಂಗನ ಬಸವೇಶ್ವರ ವೃತ್ತದಿಂದ ನಡೆದ ಬೈಕ್ ರ್ಯಾಲಿ ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣನ ವೃತ್ತ, ಕನಕದಾಸರ ವೃತ್ತ, ವಿರಕ್ತ ಮಠ, ಹನುಮಾನ ದೇವಸ್ಥಾನ, ಸಂತೆ ಬಜಾರ ಮಾರ್ಗವಾಗಿ ಮರಗಮ್ಮ ದೇವಾಲಯ ಸೇರಿದಂತೆ ತಾಂಬಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಅಭ್ಯರ್ಥಿ ರಮೇಶ ಭೂಸನೂರ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ಮತದಾರರ ಮನೆ ಮನೆಗೆ ತೆರಳಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದು ಬಿಜೆಪಿಯ ಸಾಧನೆಗಳನ್ನು ತಿಳಿಸಿದ್ದು ಕಾರ್ಯಕರ್ತರ ಹುಮ್ಮಸು ಇಮ್ಮಡಿಗೊಳಿಸಿದರು. ಸರ್ವ ಸಮಾಜದ ಹಿತಕ್ಕಾಗಿ ಜಾತಿಯನ್ನು ಮೀರಿನಿಂತ ರಮೇಶ ಭೂಸನೂರವರಗೆ ಮತನೀಡಿ ಎಂದು ಮತದಾರರಲ್ಲಿ ವಿನಂತಿಸಿದರು.
ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯರಾದ ಶೀಲವಂತ ಉಮರಾಣಿ, ದಯಾಸಾಗರ ಪಾಟೀಲ, ತಮ್ಮೇಶಗೌಡ, ಹನುಮಂತ ಕಾಳೆ, ಸುನೀಲ ರೇಬಶೆಟ್ಟಿ, ಪ್ರವೀಣ ತಂಗಾ, ಶಂಕರ ಯಳಕೋಟಿ, ಪ್ರಕಾಶ ಮುಂಜಿ, ಅರ್ಜುನ ಚೆಟ್ಟರಕಿ, ಆರ್.ಎಚ್. ಶಿವಣಗಿ, ನಿಂಗಪ್ಪ ಬಂದಾಳ, ಸಿದ್ದಪ್ಪ ಚಟ್ಟರಕಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.