ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಗ ಏನು ಕಡ್ಲೆಪುರಿ ತಿಂತಿದ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಖಾರವಾಗಿ ಪ್ರಶ್ನಿಸಿದರು. ನಗರದ ಕೆ.ಆರ್.ವೃತ್ತದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗ ವಾಗಿ ನಾಲ್ವಡಿ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಆದರೆ, ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಎಂದಿದ್ದಾರೆ.
ಆದರೆ ಎಂದೂ ಕೂಡ ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಹಾಗೆ ಹೇಳಿರಬೇಕು. ನನಗಾಗಲಿ, ನಮ್ಮ ಸಹೋ ದ್ಯೋಗಿಗಳಾಗಲಿ ವಿಜಯೇಂದ್ರ ಅವರಿಂದ ಹಸ್ತಕ್ಷೇಪಕ್ಕೆ ಒಳಗಾಗಿರುವ ನಿದರ್ಶನವಿಲ್ಲ. ವರ್ಗಾವಣೆ ವಿಷಯದಲ್ಲಿ ಐಎಎಸ್ ಅಧಿ ಕಾರಿಗಳಿದ್ದಾರೆ, ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಲಾಭಿ ನಡೆದಿಲ್ಲ: ಇನ್ನು ಬಿಜೆಪಿ ಶಾಸಕರು ಸಿದ್ದರಾಮಯ್ಯ ಸಂಪರ್ಕದಲ್ಲಿದ್ದಾರೋ, ಇಲ್ಲವೋ ಮಾಹಿತಿ ಇಲ್ಲ. ಈಗ 9 ವಿಧಾನ ಪರಿ ಷತ್ ಸದಸ್ಯ ಸ್ಥಾನ, 2 ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಯ್ಕೆ ಆಗಬೇಕಿದೆ. ಮೈಸೂರಿನಲ್ಲಿ ಪಕ್ಷ ಸಂಘಟಿಸಿದವರಿಗೆ ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಇದು ಲಾಬಿ ಅಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕತ್ತಿ ಅವರು ಲಾಭಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
ಮೃಗಾಲಯಕ್ಕೆ ಅನುಮತಿ: ಮೃಗಾಲಯ ತೆರೆ ಯುವ ಸಂಬಂಧ ರಾಜ್ಯ ಸರ್ಕಾರದ ಜೊತೆ ಮಾತನಾಡಿದ್ದೇನೆ. ಜೂ. 8ರೊಳಗೆ ಅನುಮತಿ ನೀಡುವ ಭರವಸೆ ಇದೆ ಎಂದು ಹೇಳಿದರು. ಶಾಸಕರಾದ ರಾಮದಾಸ್, ದೇವೇಗೌಡ, ನಾಗೇಂದ್ರ, ಮೇಯರ ತಸ್ನೀಂ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇತರರಿದ್ದರು.
ಸಿಎಂ ಹುದ್ದೆ ಖಾಲಿ ಇಲ್ಲ: ಸಿದ್ದರಾಮಯ್ಯ ಸಿಎಂ ಆಗುವುದಕ್ಕೆ ಇನ್ನೂ ಮೂರು ವರ್ಷ ಬೇಕು. ಈಗ ಸಿಎಂ ಹುದ್ದೆ ಖಾಲಿ ಇಲ್ಲ. ಯಡಿಯೂರಪ್ಪ ಅವರು ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರದಲ್ಲಿ 2-3 ಮಂತ್ರಿ ಸ್ಥಾನ ಖಾಲಿ ಇದೆ. ಅವರು ನೀಡಿದ ಭರವಸೆಯನ್ನು ಶೇ.100ರಷ್ಟು ಈಡೇರಿಸಿದ್ದಾರೆ ಎಂದು ಜಿಲ್ಲಾ ಸಚಿವ ಸೋಮಶೇಖರ್ ಹೇಳಿದರು. ಪಕ್ಷದಲ್ಲಿ ಅಂದಿನಂತೆ ಇಂದಿಗೂ ಒಗ್ಗಟ್ಟಿದೆ, ಶಿಸ್ತಿದೆ.
ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ಶಂಕರ್, ರೋಷನ್ ಬೇಗ್, ಪ್ರತಾಪ ಗೌಡ ಪಾಟೀಲ್, ಮುನಿರತ್ನ ಮುಂತಾದವರಿದ್ದಾರೆ. ಈ ನಡುವೆ ಸಿಎಂಗೂ ಹೈಕಮಾಂಡ್ ಇದೆ. ಪಕ್ಷದ ಕೋರ್ ಕಮಿಟಿ ಇದೆ. ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ನಾಗರಾಜು ಪರಿಷತ್ ಸದಸ್ಯರಾಗಲು ಯಾರೂ ಅಡ್ಡಗಾಲು ಹಾಕುವುದಿಲ್ಲ ಎಂದು ಹೇಳಿದರು.