ಆಲಮೇಲ: ಕೋವಿಡ್ ಸಂಕಸ್ಟದಲ್ಲಿರುವ ಜನರಿಗೆ 1480 ಕೋಟಿ ಸಹಾಯಧನ ನೀಡಿದ ದೇಶದಲ್ಲಿಯೆ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಯಡಿಯೂರಪ್ಪನವರ ಯೋಜನೆಗಳು ಮುಂದುವರಿಸಿಕೊಂಡು ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಕ್ಕೆ ಸಿಂದಗಿ ಕ್ಷೇತ್ರದ ಜನ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ಸಿಂದಗಿ ಉಪ ಚುನಾವಣೆ ನಿಮಿತ್ತ ಶುಕ್ರವಾರ ಆಲಮೇಲ ಪಟ್ಟಣದಲ್ಲಿ ಬಿಜೆಪಿ ಅಭ್ಯಾರ್ಥಿ ರಮೇಶ ಭೂಸನೂರ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕೋವಿಡ್ ಸಂಕಸ್ಟದ ಸಮಯದಲ್ಲಿ ದೇಶದ ಯಾವ ರಾಜ್ಯದ ಮುಖ್ಯಮಂತ್ರಿಗಳು ನೀಡದ ಸಹಾಯಧನ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ. ಕೋವಿಡ್ ಸಂಕಸ್ಟದಲ್ಲಿರುವ ಎಲ್ಲ ಸಮುಧಾಯಕ್ಕೂ ಸಮಾನ ಅವಕಾಶ ನೀಡಿದ್ದಾರೆ. ಅವರ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.
ರೈತರ ಅಭಿವೃದ್ಧಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿದ ದೇಶದಲ್ಲಿಯೆ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಭಾಗ್ಯಲಕ್ಷ್ಮೀ ಯೋಜನೆ, ಆರೋಗ್ಯಕ್ಕೆ ತುರ್ತು ಸೇವೆ ನೀಡಲು ಆಂಬುಲೆನ್ಸ್ ವ್ಯವಸ್ಥೆ ಹೀಗೆ ಅನೇಕ ಅಭಿವೃದ್ಧಿ ಮಾಡಿದ್ದಾರೆ. ದೇಶದ ಚಿತ್ರಣವೆ ಬದಲಿಸಿ ಜಗತ್ತಿನಲ್ಲಿ ಬಲಿಷ್ಠ ದೇಶ ಮಾಡಲು ಹೊರಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನರೇಂದ್ರ ಮೋದಿ, ಯಡಿಯೂರಪ್ಪ ನೇತೃತ್ವದಲ್ಲಿ ದೇಶದ ಎಲ್ಲೆಡೆ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವವಿಲ್ಲ ಎಂದರು.
ಚಿಂಚೋಳಿ ಶಾಸಕ ಶರಣು ಸಲಗರ, ಜೇವರ್ಗಿ ಮಾಜಿ ಶಾಸಕ ದೊಡ್ಡಪಗೌಡ ಪಾಟೀಲ, ಶಂಭುಲಿಂಗ ಕಕ್ಕಳಮೇಲಿ, ಬಸವರಾಜ ಹೂಗಾರ, ಅಶೋಕ ವಾರದ, ವೀರಭದ್ರ ಕತ್ತಿ, ಸಿದ್ದರಾಮ ಪಾಟೀಲ, ವಿಶ್ವನಾಥ ಹಿರೇಮಠ, ವಿಶ್ವನಾಥ ಅಮರಗೊಂಡ, ಶ್ರೀಶೈಲ ಭೋವಿ, ಕಮಲಾಕರ ಪತ್ತಾರ, ಅಪ್ಪು ಶೆಟ್ಟಿ, ರಾಹುಲ್ ಎಂಟಮಾನ, ಅಂಬರಿಶ ಸಾಲಕ್ಕಿ, ಶರಣು ಗುರಕಾರ, ಮಾಣಿಕ ಕಲಕುಟಗೇರ, ಮಂಗಲಾಗುಡಿಮಠ, ಗಂಗುಬಾಯಿ ಅಮಲಝರಿ, ಸಾವಿತ್ರಿ ಹಿಕ್ಕನಗುತ್ತಿ, ಮಹಾದೇವಿ ವಡ್ಡರ, ಶೈಲಾ ಹೊಸಮನಿ ಇದ್ದರು.