ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕ ಕೇಂದ್ರದಲ್ಲಿ ನಿಷೇಧಿತ ತಂಬಾಕು ಹಾಗೂ ಅಡಕೆ ಬಳಸಿ ಮಾವಾ ತಯಾರಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, ಲಕ್ಷಾಂತರ ರೂ. ಮೌಲ್ಯದ ಮಾವಾ ವಶಕ್ಕೆ ಪಡೆದ ಘಟನೆ ಜರುಗಿದೆ.
ದೇವರಹಿಪ್ಪರಗಿ ಪಟ್ಟಣದ ಜೇಡಿಮಠ ಪ್ರದೇಶದ ಮನೆಯಲ್ಲಿ ಮುಬಾರಕ ಮಕ್ಬೂಲ್ ಬಾಗವಾನ ಹಾಗೂ ಬಬಲು ಉರ್ಫ ದಸ್ತಗೀರ ಇಸ್ಮಾಯಿಲ್ ದಫೇದಾರ ಎಂಬ ಇಬ್ಬರು ಆರೋಪಿಗಳು ಲೈಸೆನ್ಸ ರಹಿತ, ಅಕ್ರಮವಾಗಿ ತಂಬಾಕು ಸುಣ್ಣ ಹಾಗೂ ಅಡಕೆ ಮಿಶ್ರಿತ ಮಾವಾ ತಯಾರಿಸುತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ಎಸ್ಪಿ ಅನುಪಮ ಅಗರವಾಲ್, ಎಎಸ್ಪಿ ರಾಮ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಅಪರಾಧ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 3.60 ಕ್ವಿಂಟಲ್ ಅಡಿಕೆ ಚೂರು, 40 ಕೆಜಿ ಅಡಿಕೆ-ತಂಬಾಕು ಮಿಶ್ರಣ,18 ಕೆಜಿ ಸುಣ್ಣ, 19 ಕೆಜಿ ಸಿದ್ಧಪಡಿಸಿದ ಮಾವಾ, ಮಾವಾ ತಯಾರಿಕೆಗೆ ಬಳಸುವ 1 ಮಿಕ್ಸರ್ ಸೇರಿದಂತೆ 1.61 ಲಕ್ಷ ರೂ. ಮೌಲ್ಯದ ಮಾವಾ ಹಾಗೂ ಮಾವಾ ತಯಾರಿಕೆ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ :ಏಳು ತಿಂಗಳ ಬಳಿಕ ಕೇವಲ ಓರ್ವ ಪ್ರವಾಸಿಗನಿಗಾಗಿ ಪ್ರಸಿದ್ಧ ಮಾಚು ಪೀಚು ಪ್ರವಾಸಿ ತಾಣ ಓಪನ್!
ಈ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.