Advertisement

ಅಭಿವೃದ್ಧಿಗೆ ಪ್ರಥಮ ಆದ್ಯತೆಯ ಭರವಸೆ

11:32 AM Jul 04, 2020 | Naveen |

ವಿಜಯಪುರ: ಸಮಾನತೆ ಹರಿಕಾರರಾದ ಬುದ್ಧ-ಬಸವ-ಅಂಬೇಡ್ಕರ್‌ ಅವರಿಗೆ ಗೌರವ ನಮನ ಸಲ್ಲಿಸುವ ಮೂಲಕ ಜಿಲ್ಲಾ ಪಂಚಾಯತ್‌ ನೂತನ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಶುಕ್ರವಾರ ಅಧಿಕಾರದ ಪದಗ್ರಹಣ ಮಾಡಿದರು.

Advertisement

ಜಿಪಂ ಅಧ್ಯಕ್ಷರ ಕಚೇರಿಯಲ್ಲಿ ಏರ್ಪಡಿಸಿದ್ದ ಅಧಿಕಾರ ಸ್ವೀಕಾರ ಸಮಾರಂಭ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಜಾತಾ, ಜಿಲ್ಲೆಯ ಜನತೆಯ ಆಶೀರ್ವಾದ, ಕಾಂಗ್ರೆಸ್‌ ಪಕ್ಷದ ಎಲ್ಲ ಮುಖಂಡರ ಪ್ರಯತ್ನ, ಜಿಪಂ ಸದಸ್ಯರ ಬೆಂಬಲದಿಂದ ನನಗೆ ಅಧಿಕಾರ ಸಿಕ್ಕಿದೆ. ಆಡಳಿತದ ಅವಧಿ ಕಡಿಮೆ ಇದ್ದರೂ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಸಾಮಾಜಿಕ ನ್ಯಾಯದ ಅಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಭಂತೆ ವರಜ್ಯೋತಿ, ಅಧಿಕಾರ ಶಾಶ್ವತವಲ್ಲ, ಆದರೆ ನಾವು ಮಾಡುವ ಒಳ್ಳೆ ಕೆಲಸಗಳು ಶಾಶ್ವತವಾಗಿರುತ್ತವೆ. ಅಧಿಕಾರ ಬಂದಾಗ ಸಮಾಜದ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಏಳ್ಗೆಗೆ ಶ್ರಮಿಸುವುದು ಅಗತ್ಯ ಎಂದು ಸಲಹೆ ನೀಡಿದರು. ಹಿಂದುಳಿದ ವರ್ಗದಿಂದ ಬಂದಿರುವ ಸುಜಾತಾ ಕಳ್ಳಿಮನಿಗೆ ಕೆಳ ವರ್ಗಗಳ ಸಮಸ್ಯೆ ಅರಿವಿದೆ. ಅಹಿಂದ ಹೋರಾಟದ ಹಿನ್ನೆಲೆಯ ಸುಜಾತಾ, ಜಿಪಂ ಅಧ್ಯಕ್ಷ ಪದವಿಗೆ ಏರಿದ್ದು ಸಂತಸ ಮೂಡಿಸಿದೆ. ಅ ಧಿಕಾರ ಸಿಕ್ಕಿರುವ ಈ ಹಂತದಲ್ಲಿ ತಾವು ಪ್ರತಿನಿಧಿಸುವ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಜೊತೆಗೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ತಮ್ಮ ಅಧಿಕಾರ ಅವಧಿ ಯಲ್ಲಿ ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿ ಹೆಸರು ಉಳಿಯುವಂತೆ ಮಾಡಬೇಕು ಎಂದರು.

ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸದಸ್ಯರಾದ ಅಪ್ಪಣ್ಣ ಐಹೊಳ್ಳಿ, ಕಲ್ಲಪ್ಪ ಮಟ್ಟಿ, ಬಸವರಾಜ ಅಸ್ಕಿ, ರಾಮು ರಾಠೊಡ, ಮಹಾದೇವ ಪೂಜಾರಿ ಗಡ್ಡದ, ಅಣ್ಣಾಸಾಹೇಬ ಪಾಟೀಲ, ಸಂತೋಷ ಚವ್ಹಾಣ, ಪ್ರಸಾದ ಚವ್ಹಾಣ, ಹನುಮಂತ ಖಂಡೇಕರ, ಮೋಹನ ಮೇಟಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ನಾಗರಾಜ ಲಂಬು, ಅನಿಲ ಹೊಸಮನಿ, ವೆಂಕಟೇಶ ವಗ್ಯಾನವರ, ಸಂತೋಷ ಶಹಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next