ವಿಜಯಪುರ: ನಗರದ ವಿವಿಧ ಕಡೆಗಳಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ವಿಜಯಪುರ ಪೊಲೀಸರು, ಇಬ್ಬರನ್ನು ಬಂಧಿಸಿ 660 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಲಗುಂಬಜ ಸಿಪಿಐ ಮಲ್ಲಯ್ಯ ಮಠಪತಿ ನೇತೃತ್ವದ ಪೊಲೀಸ್ ತಂಡ ವಿಜಯಪುರ ನಗರದಲ್ಲಿ ಆದರ್ಶ ನಗರ, ಗಾಂಧಿಚೌಕ್ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದಿದ್ದ ಮನೆಗಳ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಲಾರಿ ಚಾಲಕರಾಗಿದ್ದ ಇಬ್ಬರು ಆರೊಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಂಡಿ ತಾಲೂಕಿನ ಸಾವಳಸಂಗ ಮೂಲದ ರಾಜು ಹೊಸಮನಿ (28) ಎಂಬ ಆರೋಪಿಯನ್ನು ಬಂಧಿಸಿದ್ದು, 608 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಳಿಕೋಟಿ ತಾಲೂಕಿನ ಕುಚಬಾಳ ಮೂಲದ ರವಿ ಬಸವರಾಜ ಬಾಕಲಿ (26) ಎಂಬ ಆರೋಪಿಯನ್ನು ಬಂಧಿಸಿ, 57 ಗ್ರಾಂ ಚಿನ್ನಾಭರಣ, 21 ಸಾವಿರ ರೂ. ನಗದು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಪಿಎಸ್ಐ ಗಳಾದ ಜ್ಯೋತಿ ವಾಲಿಕಾರ, ಸುರೇಶ ಮಂಟೂರು ಸೇರಿದಂತೆ ವಿವಿಧ ಠಾಣೆಗಳ ಪೊಲೀಸರು ಪಾಲ್ಗೊಂಡಿದ್ದರು. ವಿಜಯಪುರ ನಗರದಲ್ಲಿ ನಡೆದಿದ್ದ ಹಲವು ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಶ್ರಮಿಸಿದ ಪೊಲೀಸರು ಕಾರ್ಯಕ್ಕೆ ಎಸ್ಪಿ ಋಷಿಕೇಶ ಭಗವಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.