Advertisement

ಪ್ರವಾಸೋದ್ಯಮ ಇಲಾಖೆಗೆ ಅಧಿಕಾರಿ ನೇಮಕ

01:12 PM Oct 27, 2019 | |

ಜಿ.ಎಸ್‌. ಕಮತರ
ವಿಜಯಪುರ: ಕಳೆದ 16 ವರ್ಷದಿಂದ ಇಲಾಖೆಯ ಮೂಲ ವಾರಸುದಾರ ಅಧಿಕಾರಿ ಇಲ್ಲದೇ ಪ್ರಭಾರಿಗಳ ಅಬ್ಬರದಲ್ಲಿ ನಲುಗಿದ್ದ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ಕೊನೆಗೂ ವಾರಸುದಾರ ನೇಮಕಗೊಂಡಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಮೂಲ ಇಲಾಖೆಯ ಧಾರವಾಡ ಜಿಲ್ಲೆಯ ಸಹಾಯಕ ನಿರ್ದೇಕರನ್ನು ವಿಜಯಪುರ ಜಿಲ್ಲೆಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.

Advertisement

ಪ್ರವಾಸೋದ್ಯಮ ಕಥೆ-ವ್ಯಥೆ ವಿಶೇಷ ಅಭಿಯಾನದಲ್ಲಿ “ಉದಯವಾಣಿ’ ಪತ್ರಿಕೆ ಆಗಸ್ಟ್‌ 15ರಂದು “ಪ್ರಭಾರಿಗಳ ಅಬ್ಬರ-ಪ್ರವಾಸೋದ್ಯಮ ಅಭಿವೃದ್ಧಿ ಮರೀಚಿಕೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಜಿಲ್ಲೆಯ ಪ್ರವಾಸೋದ್ಯಮ ವ್ಯವಸ್ಥೆ ಇಲಾಖೆಯ ಮೂಲ ವಾರಸುದಾರ ಇಲ್ಲದೇ ಪ್ರಭಾರಿಗಳಿಂದಾಗಿ ಹದಗೆಟ್ಟ ಪ್ರವಾಸೋದ್ಯಮದ ಕುರಿತು ನಿರಂತರ ಸರಣಿ ವಿಶೇಷ ವರದಿಯನ್ನೂ ಮಾಡಿತ್ತು.

ಇದರ ಬೆನ್ನಲ್ಲೇ ರಾಜ್ಯದ ಪ್ರವಾಸೋದ್ಯಮ ನೂತನ ಸಚಿವ ಸಿ.ಟಿ. ರವಿ ಜಿಲ್ಲೆಗೆ ಆಗಮಿಸಿದ್ದರು. ಅಕ್ಟೋಬರ್‌ 20ರಂದು ಜಿಲ್ಲೆಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವರಿಗೆ ಜಿಲ್ಲೆಯ ಪ್ರವಾಸೋದ್ಯಮ ಅನುಭವಿಸುತ್ತಿರುವ ಸಮಸ್ಯೆಗಳ ಸಮಗ್ರ ವರದಿಯನ್ನೂ ಉದಯವಾಣಿ ಪ್ರಕಟಿಸಿತ್ತು.

ಇದರ ಬೆನ್ನಲ್ಲೇ ಸರ್ಕಾರ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಇಲಾಖೆ ಅಧಿಕಾರಿಯನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಸಚಿವರು ಜಿಲ್ಲೆಯ ಪ್ರವಾಸ ಮುಗಿಸಿ ಬೆಂಗಳೂರಿಗೆ ತೆರಳಿದ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆಯ ಧಾರವಾಡ ಕಚೇರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅವರನ್ನು ವಿಜಯಪುರ ಜಿಲ್ಲೆಗೆ ವರ್ಗಾಯಿಸಿದೆ.

ಅಕ್ಟೋಬರ್‌ 28ರಂದು ಧಾರವಾಡದಿಂದ ಆಗಮಿಸಿ ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಸಹಾಯಕ ನಿರ್ದೇಶಕರ ದರ್ಜೆಯ ಹುದ್ದೆ ಇದ್ದು, ಉಪ ನಿರ್ದೇಶಕರ ಮೇಲ್ದರ್ಜೆಗೇರಿಸಿತ್ತು. ಇಷ್ಟಾದರೂ ಈ ಹುದ್ದೆಗೆ ಯಾವ ಅಧಿಕಾರಿಯನ್ನೂ ನೇಮಿಸದ ಕಾರಣ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಭಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.

Advertisement

ಇದೀಗ 16 ವರ್ಷಗಳ ಬಳಿಕ ಮೂಲಕ ಇಲಾಖೆ ಅಧಿಕಾರಿ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ಸಹಾಯಕ ನಿರ್ದೇಶಕರ ದರ್ಜೆಯ ಅಧಿಕಾರಿಯಾಗಿದ್ದರೂ ಮಲ್ಲಿಕಾರ್ಜುನ ಭಜಂತ್ರಿ ಅವರು ಉಪ ನಿರ್ದೇಶಕರ ಹುದ್ದೆಯ ಕರ್ತವ್ಯ ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next