ವಿಜಯಪುರ: ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಈ ಬಾರಿ ಭಾರತ ಆತಿಥ್ಯ ವಹಿಸಿದ್ದು, ಸೆ.27ರಂದು ನಡೆಯುವ “ಸರ್ವರಿಗೂ ಉಜ್ವಲ ಭವಿಷ್ಯ’ ಟ್ಯಾಗ್ ಲೈನ್‌ನೊಂದಿಗೆ “ಪ್ರವಾಸೋದ್ಯಮ ಹಾಗೂ ಉಜ್ವಲ ಭವಿಷ್ಯ’ ಘೋಷವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.
Advertisement
ಮತ್ತೂಂದೆಡೆ ದೇಶದ ಜನತೆಗೆ ಪ್ರಧಾನಿ ಮೋದಿ ವಿಶ್ವ ಸುತ್ತುವ ಮೊದಲು ಪ್ರತಿ ಭಾರತೀಯ ತನ್ನದೇ ದೇಶದೊಳಗಿನ ಪಾರಂಪರಿಕ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವುದು ಅಗತ್ಯ ಎಂದು ಕರೆ ನೀಡಿದ್ದಾರೆ. ಪ್ರಧಾನಿ ಕರೆಯಂತೆ ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪಟ್ಟಿ ಮಾಡಿರುವ 20 ತಾಣಗಳಲ್ಲಿ ವಿಜಯಪುರ ಜಿಲ್ಲೆಯ ಗೋಲಗುಮ್ಮಟಕ್ಕೂ ಸ್ಥಾನ ಸಿಕ್ಕಿದೆ.
Related Articles
Advertisement
ಇಂದು ವಿವಿಧ ಕಾರ್ಯಕ್ರಮ: ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಅಪರ ಜಿಲ್ಲಾಧಿಕಾರಿ ಪ್ರಸನ್ನ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸೋಮಲಿಂಗ್ ಗೆಣ್ಣೂರು ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನವಾದ ಸೆ.27ರಂದು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಲಪಡಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆಯುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ. ಪಾಟೀಲ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ಪ್ರತ್ಯೇಕ www.vijayapuratourism.in ವೆಬ್‌ಸೈಟ್, ರಾಜ್ಯದಲ್ಲೇ ಮೊದಲ ಬಾರಿಗೆ ಅಂಧರಿಗಾಗಿ ಪ್ರವಾಸಿ ಧ್ವನಿ ಮಾರ್ಗದರ್ಶಿ ಆ್ಯಪ್, ದೈಹಿಕ ವಿಕಲಚೇತನರಿಗೆ 360 ಡಿಗ್ರಿ ವಚ್ಯೂವಲ್ ರಿಯಾಲಿಟಿ ಟೂರ್ ವಿಡಿಯೋ ಆ್ಯಪ್, ಗುಮ್ಮಟ ಏರಲಾಗದ ವಿಕಲಚೇತನರಿಗೆ ವಿಜಯಪುರ ದರ್ಶನ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ವಿ.ಆರ್, ಪ್ರವಾಸಿ ಧ್ವನಿ ಮಾರ್ಗದರ್ಶಿಗಳಂಥ ಆಧುನಿಕ ತಾಂತ್ರಿಕ ಸೌಲಭ್ಯಗಳು ಬಿಡುಗಡೆ ಪಡೆಯಲಿವೆ. 8 ಜನರಿಗೆ ಮಾರ್ಗದರ್ಶಿಗಳಿಗೆ ಸಮವಸ್ತ್ರ ವಿತರಣೆ ನಡೆಯಲಿದೆ.
ಇದಲ್ಲದೇ ಬೇಗಂ ತಾಲಾಬ್‌ನಲ್ಲಿ ಬೋಟಿಂಗ್, ಭೂತನಾಳ ಕೆರೆಯ ಜಲಾಭಿಮುಖ ಕೆರೆ ಅಭಿವೃದ್ಧಿಗೆ ವೂಡಾ ಯೋಜನೆಯಡಿ 10 ಕೋಟಿ ರೂ. ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆಯಂತ ಹಲವು ಯೋಜನೆಗಳಿಗೆ ಚಾಲನೆ ದೊರೆಯಲಿದೆ.