ವಿಜಯಪುರ: ಕೋವಿಡ್-19 ರೋಗದ ಶಂಕಿತರ ಗಂಟಲು ಮಾದರಿ ಸಂಗ್ರಹಕ್ಕೆ ಎಂ.ಬಿ. ಪಾಟೀಲ ಫೌಂಡೇಷನ್‌ನಿಂದ್ ಜಿಲ್ಲಾಡಳಿತಕ್ಕೆ ಅತ್ಯಾಧುನಿಕ ಕ್ಯಾಬಿನ್‌ನನ್ನು ಹಸ್ತಾಂತರ ಮಾಡಲಾಯಿತು. ಗುರುವಾರ ನಗರದ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣಭದಲ್ಲಿ ಜಿಲ್ಲಾಡಳಿತ ಹಾಗೂ ಬಿಎಲ್‌ಡಿಇ ಸಂಸ್ಥೆಗೆ ಆಧುನಿಕ ಕ್ಯಾಬಿನ್‌ಗಳನ್ನು ಮಾಜಿ ಸಚಿವರಾದ ಎಂ.ಬಿ. ಪಾಟೀಲ ಅವರು ಜಿಲ್ಲಾಧಿಕಾರಿ ವೈ.ಎಸ್.
ಪಾಟೀಲ ಅವರಿಗೆ ಹಸ್ತಾಂತರಿಸಿದರು.
ಗಂಟಲು ದ್ರವ ಮಾದರಿ ಸಂಗ್ರಹಣೆಯ ವಿಶೇಷ ಕ್ಯಾಬೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಆರ್ ಡಿಇ (ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್) ರೂಪಿಸಿರುವ ನಿಯಮಾವಳಿ ಹಾಗೂ ವಿನ್ಯಾಸದ ಆಧರದಲ್ಲಿಯೇ ಬೆಳಗಾವಿಯ ವೆಗಾ ಕಂಪನಿಯವರು ಸಿದ್ಧಪಡಿಸಿದ ಕ್ಯಾಬಿನ್ ಲೋಕಾರ್ಪಣೆ ಮಾಡಲಾಯಿತು.
ಈ ವೇಳೆ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಕೋವಿಡ್-19 ಕೊರೊನಾ ಶಂಕಿತರ ಗಂಟಲು ದ್ರವ ಸಂಗ್ರಹ ಹಾಗೂ ಪರೀಕ್ಷೆ ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ದೊಡ್ಡ ಸವಾಲಿನ ಸಂಗತಿ. ಗಂಟಲು ದ್ರವ ಸಂಗ್ರಹಿಸುವವರ ಅಪಾಯದಿಂದ ತಪ್ಪಿಸುವ ಉದ್ದೇಶದಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ವಿಶೇಷ ಕ್ಯಾಬಿನ್ ಸಿದ್ಧಗೊಂಡಿದೆ ಎಂದರು.
ಸರ್ಕಾರಿ ಆಸ್ಪತ್ರೆ ಹಾಗೂ ಬಿಎಲ್‌ಡಿಇ ಸಂಸ್ಥೆಗೆ ನೀಡಿರುವ ಈ ಕ್ಯಾಬಿನ್‌ನ್ನು ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವ ನಗರದ ಕಂಟೈನ್ ಮೆಂಟ್ ಪ್ರದೇಶಕ್ಕೂ ಒಂದು ಕ್ಯಾಬೀನ್‌ಗೆ ಜಿಲ್ಲಾಡಳಿತ ಇರಿಸಿದ ಬೇಡಿಕೆಯನ್ನೂ ಪರಿಗಣಿಸುವುದಾಗಿ ಹೇಳಿದರು. ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವವರ ಆರೋಗ್ಯಕ್ಕೆ ಒತ್ತು ನೀಡುವ ರೀತಿಯಲ್ಲಿ ಈ ಕ್ಯಾಬಿನ್ ರೂಪಿಸಲಾಗಿದೆ. ಅತ್ಯಂತ ಸುರಕ್ಷಿತವಾಗಿ ಹಾಗೂ ಒಳಾವರಣದಲ್ಲಿ ಸ್ಯಾನಿಟೈಸರ್ ಸಿಂಪರಣೆ ಹಾಗೂ ರಕ್ಷಣಾತ್ಮಕ ಗ್ಲೌಸ್ ಇರುವ ಅತ್ಯಾಧುನಿಕ ಕ್ಯಾಬಿನ್ ಕುರಿತು ಎಂ.ಬಿ. ಪಾಟೀಲ ಫೌಂಡೇಶನ್ ಮುಖ್ಯಸ್ಥ ಶಾಸಕ ಸುನಿಲಗೌಡ ಪಾಟೀಲ ವಿವರಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್, ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ, ಸಿಇಒ ಗೋವಿಂದ ರೆಡ್ಡಿ, ಎಸ್ಪಿ ಅನುಪಮ್ ಅಗರವಾಲ್, ಡಾ| ಎಂ.ಬಿ. ಬಿರಾದಾರ, ಡಾ| ಮಹಾಂತೇಶ ಬಿರಾದಾರ ಇದ್ದರು.
ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವವರ ಆರೋಗ್ಯಕ್ಕೆ ಒತ್ತು ನೀಡುವ ರೀತಿಯಲ್ಲಿ ಈ ಕ್ಯಾಬಿನ್ ರೂಪಿಸಲಾಗಿದೆ. ಅತ್ಯಂತ ಸುರಕ್ಷಿತವಾಗಿ ಹಾಗೂ ಒಳಾವರಣದಲ್ಲಿ ಸ್ಯಾನಿಟೈಸರ್ ಸಿಂಪರಣೆ ಹಾಗೂ ರಕ್ಷಣಾತ್ಮಕ ಗ್ಲೌಸ್ ಇರುವ ಅತ್ಯಾಧುನಿಕ ವ್ಯವಸ್ಥೆ ಹೊಂದಿದೆ.
ಸುನಿಲಗೌಡ ಪಾಟೀಲ, ಶಾಸಕ ಹಾಗೂ
ಎಂ.ಬಿ.ಪಾಟೀಲ ಫೌಂಡೇಶನ್ ಮುಖ್ಯಸ್ಥ