Advertisement

ವಿಜಯಪುರ ವೀರಾಗ್ರಣಿ-ಬಾಗಲಕೋಟೆಗೆ ದ್ವೀತೀಯ ಸ್ಥಾನ

03:12 PM Nov 30, 2019 | Naveen |

ವಿಜಯಪುರ: ವಿಜಯಪುರ ನಗರದಲ್ಲಿ ಜರುಗಿದ ಪಪೂ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಆತಿಥೇಯ ವಿಜಯಪುರ ಜಿಲ್ಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡು ಸೈಕ್ಲಿಂಗ್‌ ತರವರಿಗೆ ಕಿರೀಟಕ್ಕೆ ಮತ್ತೂಂದು ಗರಿ ಸಿಕ್ಕಿಸಿದೆ. ನೆರೆಯ ಬಾಗಲಕೋಟೆ ಜಿಲ್ಲೆ ದ್ವಿತೀಯ ವೀರಾಗ್ರಣಿ ತನ್ನದಾಗಿಸಿಕೊಂಡಿದೆ.

Advertisement

ಶುಕ್ರವಾರ ಮಧ್ಯಾಹ್ನ ಸೊಲ್ಲಾಪುರ ರಸ್ತೆಯಲ್ಲಿರುವ ಎಎಸ್‌ಪಿ ಕಾಮರ್ಸ್‌ ಕಾಲೇಜ್‌ನಲ್ಲಿ ಆಯೋಜಿಸಲಾದ ಸಮಾರೋಪ ಸಮಾರಂಭದಲ್ಲಿ ಸೈಕ್ಲಿಂಗ್‌ ಸ್ಪರ್ಧೆ ವಿಜೇತರಿಗೆ ಪಾರಿತೋಷಕ ವಿತರಿಸಲಾಯಿತು. 46 ಅಂಕಗಳೊಂದಿಗೆ ವಿಜಯಪುರ ಜಿಲ್ಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡರೆ, 14 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯವಾದ ಕಾರಣ ಬಾಗಲಕೋಟೆ ತಂಡ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ವೈಯಕ್ತಿಕ ಸ್ಪರ್ಧೆಯಲ್ಲಿ ಬಾಲಕರ 20 ಕಿ.ಮೀ. ಟೈಂ ಟ್ರೈಲ್‌ ಸ್ಪರ್ಧೆಯಲ್ಲಿ ವಿಜಯಪುರದ ಎಸ್‌. ಕೆ.ವಿ.ಎಂ.ಎಸ್‌. ಪಿಯು ಕಾಲೇಜ್‌ನ ಶ್ರೀಶೈಲ ವೀರಾಪುರ ಪ್ರಥಮ, ಅಭಿಷೇಕ ಮಾರನೂರ ದ್ವಿತೀಯ ಸ್ಥಾನ ಹಾಗೂ ಬಾಗಲಕೋಟೆ ಜಮಖಂಡಿಯ ಕಾಮರ್ಸ್‌, ಬಿಎಚ್‌ಎಸ್‌, ಆರ್ಟ್ಸ್-ಟಿಜಿಪಿ ಸಾಯಿನ್ಸ್‌ ಪಿಯು ಕಾಲೇಜ್‌ನ ಮಧು ಕಡಾಪುರ ಅವರು ತೃತೀಯ ಸ್ಥಾನ ಪಡೆದುಕೊಂಡರು.

ಬಾಲಕರ ಟೈಂ ಟ್ರೈಲ್‌ 30 ಕಿ.ಮೀ. ಸ್ಪರ್ಧೆಯಲ್ಲಿ ಜಮಖಂಡಿಯ ಕಾಮರ್ಸ್‌, ಬಿಎಚ್‌ಎಸ್‌, ಆರ್ಟ್ಸ್-ಟಿಜಿಪಿ ಸೈನ್ಸ್‌ ಪಪೂ ಕಾಲೇಜಿನ ಮಧು ಕಡಾಪುರ ಪ್ರಥಮ, ವಿಜಯಪುರದ ಎಸ್‌.ಕೆ.ವಿ.ಎಂ. ಎಸ್‌. ಪಿಯು ಕಾಲೇಜ್‌ನ ಮಹಾಂತೇಶ ದ್ವಿತೀಯ ಹಾಗೂ ಅನಿಲ ಕಲ್ಲಪ್ಪಗೊಂಡ ತೃತೀಯ ಸ್ಥಾನ ಪಡೆದುಕೊಂಡರು.

1000 ಮೀ. ಬಾಲಕರ ಟೈಂ ಟ್ರೈಲ್‌ ಫಾರ್‌ಟ್ರ್ಯಾಕ್‌ ಸ್ಪರ್ಧೆಯಲ್ಲಿ ವಿಜಯಪುರ ನಗರದ ಎಸ್‌.ಕೆ.ವಿ.ಎಂ.ಎಸ್‌. ಪಿಯು ಕಾಲೇಜ್‌ನ ಅನಿಲ ಕಲ್ಲಪ್ಪಗೊಂಡ ಪ್ರಥಮ ಸ್ಥಾನ ಪಡೆದರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಾಮರ್ಸ್‌, ಬಿಎಚ್‌ಎಸ್‌, ಆರ್ಟ್ಸ್ ಮತ್ತು ಟಿಜಿಪಿ ಸೈನ್ಸ್‌ ಪಿಯು ಕಾಲೇಜ್‌ನ ಮಧು ಕಡಾಪುರ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ವಿಜಯಪುರ ಎಸ್‌. ಕೆ.ವಿ.ಎಂ.ಎಸ್‌. ಪಿಯು ಕಾಲೇಜಿನ ಶ್ರೀಶೈಲ ವೀರಾಪುರ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

Advertisement

4 ಕಿ.ಮೀ. ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮಧು ಕಡಾಪುರ ಪ್ರಥಮ, ವಿಜಯಪುರ ಜಿಲ್ಲೆಯ ಅಭಿಷೇಕ ಮರನೂರ ದ್ವಿತೀಯ ಹಾಗೂ ಅನಿಲ ಕಲ್ಲಪ್ಪಗೊಂಡ ತೃತೀಯ ಸ್ಥಾನ ಪಡೆದಿದ್ದಾರೆ. 500 ಮೀ. ಬಾಲಕಿಯರ ವಿಭಾಗದ ಟೈಂ ಟ್ರೈಲ್‌ ಫಾರ್‌ ಟ್ರ್ಯಾಕ್‌ 500 ಮೀ. ಸ್ಪರ್ಧೆಯಲ್ಲಿ ವಿಜಯಪುರ ಎಸ್‌.ಕೆ.ವಿ.ಎಂ.ಎಸ್‌. ಪಿಯು ಕಾಲೇಜಿನ ಸೌಮ್ಯ ಅಂತಾಪುರ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರಿನ ಇವ್ನಿಂಗ್‌ ಪಿಯು ಕಾಲೇಜ್‌ನ ಕೀರ್ತಿ ರಂಗಸ್ವಾಮಿ ದ್ವಿತೀಯ ಹಾಗೂ ವಿಜಯಪುರ ಜಿಲ್ಲೆಯ ಕಾವೇರಿ ಮುರನಾಳ ತೃತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ 3 ಕಿ.ಮೀ. ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವೇರಿ ರಂಗಸ್ವಾಮಿ ಪ್ರಥಮ ಸ್ಥಾನ, ವಿಜಯಪುರ ಜಿಲ್ಲೆಯ ಸೌಮ್ಯ ಅಂತಾಪುರ ದ್ವಿತೀಯ ಸ್ಥಾನ ಹಾಗೂ ಕಾವೇರಿ ಮುರನಾಳ ತೃತೀಯ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next