Advertisement

2.55 ಲಕ್ಷ ಮಕ್ಕಳಿಗೆ ಸದ್ಯ ಹಳೆ ಬಟ್ಟೆ ಗತಿ

10:40 AM May 31, 2019 | Naveen |

ಜಿ.ಎಸ್‌.ಕಮತರ
ವಿಜಯಪುರ:
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದೆ. ಇದರ ಜತೆಗೆ ಮಕ್ಕಳ ದಾಖಲಾತಿಯೂ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1ರಿಂದ 10ನೇ ತರಗತಿ ಮಕ್ಕಳಿಗೆ 33 ಲಕ್ಷ ಪಠ್ಯ ಪುಸ್ತಕದ ಅಗತ್ಯವಿದ್ದರೆ, ಶೇ. 90ರಷ್ಟು ಪೂರೈಕೆ ಆಗಿದೆ. ಆದರೆ 2.55 ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ-ಸಾಕ್ಸ್‌ ಬೇಡಿಕೆ ಇದ್ದರೂ ಯಾವ ಮಕ್ಕಳಿಗೂ ಈ ಭಾಗ್ಯ ದಕ್ಕಿಲ್ಲ.

Advertisement

ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳು ಸೇರಿದಂತೆ ಉಚಿತವಾಗಿ ಸರ್ಕಾರ 25,34,517 ಪಠ್ಯ ಪುಸ್ತಕ ವಿತರಿಸಬೇಕಿದೆ. ಇದರಲ್ಲಿ ಈ ವರೆಗೆ 24,40,230 ಪಠ್ಯ ಮಾತ್ರ ಪೂರೈಕೆಯಾಗಿದ್ದು, 9,69,300 ಪಠ್ಯ ಪುಸ್ತಕ ಮಾತ್ರ ಈ ವರೆಗೆ ವಿತರಣೆ ಆಗಿದೆ.

ಇನ್ನು ಅನುದಾನ ರಹಿತ ಖಾಸಗಿ ಶಾಲೆಗಳು 8,06,575 ಪಠ್ಯ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿವೆ. ಆದರೆ ಈ ವರೆಗೆ 7,52,440 ಪಠ್ಯ ಪುಸ್ತಕ ಮಾತ್ರ ಪೂರ್ಯೆಕೆಯಾಗಿದೆ. ಈ ವರೆಗೆ 1200 ಪಠ್ಯ ಮಾತ್ರ ವಿತರಣೆ ಆಗಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪಠ್ಯ ಪುಸ್ತಕಕೊಳ್ಳಲು ಅಗತ್ಯ ಪ್ರಮಾಣದ ಶುಲ್ಕ ಭರಿಸಬೇಕಿದ್ದು, ಜೂ. 1ರ ನಂತರ ಈ ಪಠ್ಯ ವಿತರಣೆ ಆಗುವ ನಿರೀಕ್ಷೆ ಇದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರ ಪೂರೈಸುವ ಸಮವಸ್ತ್ರ ಈ ವರೆಗೂ ಬಂದಿಲ್ಲ. ಜಿಲ್ಲೆಯಲ್ಲಿ 2,55,631 ಮಕ್ಕಳಿಗೆ ಸಮವಸ್ತ್ರದ ಬೇಡಿಕೆ ಇದ್ದು, ಸರ್ಕಾರ ಪೂರೈಕೆ ಮಾಡಿಲ್ಲ. ಇಷ್ಟೇ ಸಂಖ್ಯೆ ಮಕ್ಕಳಿಗೆ ಸರ್ಕಾರ ಶೂ ಹಾಗೂ ಸಾಕ್ಸ್‌ ಪೂರೈಕೆ ಮಾಡಬೇಕಿದ್ದು, ಇದಕ್ಕೆ ಬೇಕಾದ ಅನುದಾನವನ್ನು ಅಯಾ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಹೆಸರಿನಲ್ಲಿರುವ ಬ್ಯಾಂಕ್‌ ಜಂಟಿ ಖಾತೆಗೆ ಜಮೆ ಮಾಡುತ್ತದೆ. ಈ ಅನುದಾನವನ್ನು ಸರ್ಕಾರ ಈ ವರೆಗೆ ಬಿಡುಗಡೆ ಮಾಡದ ಕಾರಣ ಈ ವರ್ಷ ಶಾಲೆಗೆ ತೆರಳುವ ಮಕ್ಕಳಿಗೆ ಶೂ-ಸಾಕ್ಸ್‌ ಹಾಕಿಕೊಳ್ಳಲು ಹಲವು ತಿಂಗಳು ಕಾಯಲೇಬೇಕು. ಸಮವಸ್ತ್ರ, ಶೂ-ಸಾಕ್ಸ್‌ ಮಾತ್ರವಲ್ಲ ಪ್ರಸಕ್ತ ಸಾಲಿನ ಸರ್ಕಾರಿ ಶಾಲೆ 28,741 ಮಕ್ಕಳಿಗೆ ಸರ್ಕಾರ ಉಚಿತವಾಗಿ ನೀಡಬೇಕಿರುವ ಸೈಕಲ್ ಕೂಡ ಬರಬೇಕಿದೆ. ಬಟ್ಟೆ, ಬೂಟುಗಳನ್ನೇ ಶೈಕ್ಷಣಿಕ ವರ್ಷದ ಆರಂಭದ ಹಂತದಲ್ಲಿ ಪೂರೈಕೆ ಮಾಡಲಾಗದ ಸಕಾರರ್ಕ್ಕೆ ಸೈಕಲ್ ಕೊಡಲು ಸಾಧ್ಯವೆ ಎಂಬ ಪ್ರಶ್ನೆ ಮಕ್ಕಳು ಹಾಗೂ ಪಾಲಕರನ್ನು ಕಾಡುತ್ತಿದೆ.

ಶಾಲೆಗಳು ಈಗಷ್ಟೇ ಆರಂಭವಾಗಿವೆ. ಪಠ್ಯ ಪುಸ್ತಕ ವಿತರಣೆ ನಡೆದಿದೆ. ಇದಲ್ಲದೇ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನೂ ಮಕ್ಕಳಿಗೆ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಸಮವಸ್ತ್ರ ಹಾಗೂ ಶೂ-ಸಾಕ್ಸ್‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಪೂರೈಸಲಾಗುತ್ತದೆ.
ಪ್ರಸನ್ನಕುಮಾರ ಡಿಡಿಪಿಐ,
ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next