Advertisement

ಸ್ಮಾರಕಗಳ ಸಂಶೋಧನೆ ಅಗತ್ಯ

03:42 PM May 10, 2019 | Team Udayavani |

ವಿಜಯಪುರ: ನಮ್ಮಲ್ಲಿ ಸ್ಮಾರಕಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಕಡಿಮೆ ಇದೆ. ಅವರಿಗೆ ಸ್ಮಾರಕಗಳ ಸಾಂಸ್ಕೃತಿಕ ಸಂಪತ್ತಿನ ಮಹತ್ವ ಅರ್ಥೈಸಿ, ಅವುಗಳನ್ನು ಉಳಿಸಿ-ಬೆಳೆಸುವಂತೆ ಪ್ರೇರೇಪಿಸುವ ಜವಾಬ್ದಾರಿ ನಮ್ಮದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿಜಯಪುರ ಸಹಾಯಕ ಅಧೀಕ್ಷಕ ಪುರತತ್ವವಿದರಾದ ಡಾ| ಎ.ವಿ. ನಾಗನೂರ ಹೇಳಿದರು.

Advertisement

ಗುರುವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇತಿಹಾಸ ಅಧ್ಯಯನ ವಿಭಾಗದಲ್ಲಿ ಇತಿಹಾಸ ಕೂಟದ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಸವಾಲುಗಳು ಹಾಗೂ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದ ಅವರು, ಸಾಂಸ್ಕೃತಿಕ ಸಂಪತ್ತುಗಳಾದ ಸ್ಮಾರಕಗಳ ಕುರಿತು ಸಂಶೋಧನೆಗಳ ಅಗತ್ಯತೆ ಇದೆ ಎಂದರು.

ಸ್ಮಾರಕ ಅಧ್ಯಯನಕ್ಕೆ ಮುಂದಾಗಿ: ನಮ್ಮಲ್ಲಿ ಸ್ಮಾರಕ ವಿಭಾಗಗಳು, 50 ವಸ್ತು ಸಂಗ್ರಹಾಲಯಗಳಿವೆ. ಎಪಿಗ್ರಫಿ ಬ್ರ್ಯಾಂಚ್‌ಗಳಿವೆ. ಈ ಬ್ರ್ಯಾಂಚ್‌ಗಳು ಅರೇಬಿಕ್‌, ಪರ್ಷಿಯನ್‌, ಶಾಘನ್‌ ಭಾಷೆಯ ವಿಭಾಗಗಳನ್ನು ಹೊಂದಿದೆ. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳು ಇವೆ. ಈ ರೀತಿಯಾಗಿ ಸಂಶೋಧನೆಗೆ ಬೇಕಾದ ಮಾಹಿತಿ ಒದಗಿಸಲು ಸಾಕಷ್ಟು ಸೌಕರ್ಯಗಳಿವೆ. ಜನರು ಇವುಗಳ ಉದ್ದೇಶ ಅರಿತುಕೊಂಡು ಸ್ಮಾರಕಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ನಿಖಾಯದ ಡೀನ್‌ ಮತ್ತು ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ| ಓಂಕಾರ ಕಾಕಡೆ ಮಾತನಾಡಿ, ಇದು ಇತಿಹಾಸ ವಿಭಾಗದಲ್ಲಿಯೇ ಮೊಟ್ಟಮೊದಲು ಆರಂಭವಾಗಿರುವ ಇತಿಹಾಸ ಕೂಟದ ವತಿಯಿಂದ ಆಯೋಜಿಸಿರುವ ಮೊದಲ ಉಪನ್ಯಾಸ ಕಾರ್ಯಕ್ರಮ ಎಂಬುದು ಸಂತಸದ ಸಂಗತಿ. ಈ ಕಾರ್ಯಕ್ರಮಗಳ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಸ್ತುಸಂಗ್ರಹಾಲಯದ ಮುಖ್ಯಾಧಿಕಾರಿ ರಿಯಾಜ ಕರಜಗಿ, ಇತಿಹಾಸ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕಿ ಸುಮಂಗಲಾ ಕೋಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೀಣಾ ಕುಂಟೋಜಿ ಪ್ರಾರ್ಥಿಸಿದರು. ನಿರ್ಮಲಾ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಆನಂದ ಕುಲಕರ್ಣಿ ನಿರೂಪಿಸಿದರು. ಕಾವೇರಿ ಶಹಾಪುರ ವಂದಿಸಿದರು.

Advertisement

ಸ್ಮಾರಕವನ್ನು ಪುನರ್‌ ನಿರ್ಮಾಣ ಮಾಡಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅವು ನಾಶವಾಗದಂತೆ ಕಾಯ್ದುಕೊಳ್ಳುವ ಕರ್ತವ್ಯ ನಮ್ಮೆಲ್ಲರದು. ಮುಖ್ಯವಾಗಿ ನಮ್ಮ ಸ್ಮಾರಕಗಳ, ಕೋಟೆ-ಕೊತ್ತಲಗಳ ಮೇಲೆ ಎಣ್ಣೆ ಅಥವಾ ಜಿಡ್ಡುಗಟ್ಟುವ ಪದಾರ್ಥ ಬಳಸಿ ಅವುಗಳನ್ನು ಹಾಳು ಮಾಡಬಾರದು.
ಡಾ| ಎ.ವಿ. ನಾಗನೂರ

Advertisement

Udayavani is now on Telegram. Click here to join our channel and stay updated with the latest news.

Next