Advertisement
ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ವೈರಿಗಳನ್ನು ಸ್ವಾಗತಿಸಿ, ಗೌರವಿಸುವ ಗುಣಧರ್ಮವಿದೆ. ಹೀಗಾಗಿ ಸೋನಿಯಾ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ಶ್ರೀರಾಮಮಂದಿರ ಟ್ರಸ್ಟ್ ಪ್ರಮುಖರು ಅ ಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ. ಬರೋದು, ಬಿಡೋದು ಅವರಿಗೆ ಸೇರಿದ್ದು ಎಂದರು.
Related Articles
Advertisement
ಹಿಂದೂಗಳ ಭಾವನೆಯಂತೆ ಕಾಶಿ ಮತ್ತು ಮಥುರಾದಲ್ಲಿ ಸಮೀûಾ ಕಾರ್ಯದಲ್ಲಿ ಹಿಂದೂ ದೇವಾಲಯಗಳು ಅಸ್ತಿತ್ವದಲ್ಲಿದ್ದ ಚಿಹ್ನೆ-ಕುರುಹುಗಳು ಸಿಕ್ಕಿವೆ. ಈ ಸಾಕ್ಷಿಗಳ ಅಧಾರದಲ್ಲಿ ಭವಿಷ್ಯದ ದಿನಗಳಲ್ಲಿ ಕಾಶಿ-ಮಥುರಾ ದೇವಸ್ಥಾನಗಳೂ ಹಿಂದೂಗಳ ಸ್ವಾಧೀನಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಹಿಂದೂಗಳ ಸಂಕಲ್ಪದಂತೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ. 370ನೇ ವಿ ಧಿಯಂತೆ ವಿಶೇಷ ಸ್ಥಾನಮಾನ ರದ್ದಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಕಾಶಿ ಮತ್ತು ಮಥುರಾ ದೇವಸ್ಥಾನಗಳು ಭವಿಷ್ಯದ ದಿನಗಳಲ್ಲಿ ಹಿಂದೂಗಳಿಗೆ ಮುಕ್ತವಾಗಲಿವೆ ಎಂದರು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದ ಪರಿಣಾಮ ಭಾರತ ಈಗ ವಿಶ್ವದ ಐದನೇ ಬಲಿಷ್ಠ ಆರ್ಥಿಕ ಶಕ್ತಿಯ ರಾಷ್ಟ್ರವಾಗಿ ರೂಪುಗೊಂಡಿದೆ. ದೇಶದಲ್ಲಿ ಗುಲಾಮಿ ಸಂಕೇತವಿರುವ ಸುಮಾರು ಮೂರುವರೆ ಲಕ್ಷ ದೇವಸ್ಥಾನಗಳನ್ನ ಹಿಂದೂಗಳಿಗೆ ಮುಕ್ತ ಮಾಡುವ ಆರ್‌ಎಸ್‌ಎಸ್-ವಿಎಚ್‌ಪಿ ಸಂಕಲ್ಪಕ್ಕೆ ದೇಶದ ಜನತೆಯ ಬೆಂಬಲವಿದೆ ಎಂದರು.
ವಿಜಯೇಂದ್ರ ವಿರುದ್ಧ ಮತ್ತೆ ಕಿಡಿ: ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದ ನಾನು, ಕೆಲ ಸಚಿವರು-ಸಂಸದರನ್ನು ಭೇಟಿ ಮಾಡಿದ್ದೇನೆ. ಆದರೂ ಈ ಭೇಟಿ ವೇಳೆ ಅಪಮಾನಿತವಾಗಿ ಬಂದಿದ್ದೇನೆ ಎಂದು ಬಿಂಬಿಸಿ ಮಾಧ್ಯಮಗಳು ವರದಿ ಮಾಡಿವೆ ಎಂದು ಯತ್ನಾಳ ಕಿಡಿಕಾರಿದರು.
ನಾನು ಯಾರ ಭೇಟಿಗಾಗಿಯೂ ದೆಹಲಿಗೆ ಹೋಗಿರಲಿಲ್ಲ. ಯಾರ ಭೇಟಿಗೂ ಸಮಯ ಕೇಳಿರಲಿಲ್ಲ, ಯಾರ ಸಮಯ ಕೇಳಿ ಹೋಗುವ ಅವಶ್ಯಕತೆಯೂ ನನಗಿಲ್ಲ. ಅತ್ಯಂತ ಅಪಮಾನಕಾರಿಯಾಗಿ, ದೈನ್ಯನಾಗಿಯೂ ಹಿಂದಿರುಗಿಲ್ಲ. ಕಾರ್ಖಾನೆ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದೆ. ಆಗ ಕರ್ನಾಟಕದವರಾದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಕೆಲ ಸಂಸದರನ್ನು ಭೇಟಿ ಮಾಡಿದ್ದೆ ಎಂದು ವಿವರಿಸಿದರು.
ಕೆಲವು ಮಾಧ್ಯಮಗಳು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹೊಗಳುವ ಕೆಲಸ ಮಾಡುತ್ತಿವೆ. ಅವರು ರಾಜ್ಯಾಧ್ಯಕ್ಷರಾದ ಕಾರಣ ಲೋಕಸಭೆಯ 28 ಸ್ಥಾನಗಳಿರುವ ಕರ್ನಾಟಕದಲ್ಲಿ 35 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬೇಕಾದರೂ ಹೇಳಲಿ ಎಂದು ಗೇಲಿ ಮಾಡಿದರು.
ಕರ್ನಾಟಕ ಸೇರಿದಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಲಂಬಿಸಿಯೇ ಲೋಕಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ಯಾರ ಅಪ್ಪನದೂ ಏನೂ ಇಲ್ಲ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಹೊರತಾಗಿ ಇತರೆ ಯಾರ ಮುಖ ನೋಡಿಯೂ ಮತದಾರರು ಬಿಜೆಪಿ ಪಕ್ಷ ಬೆಂಬಲಿಸಲ್ಲ ಎಂದರು.
ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ ಹಾಗೂ ವಂಶ ಪಾರಂಪರ್ಯ ರಾಜಕಾರಣ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಆದರೆ ಈ ವಿಷಯದಲ್ಲಿ ನನ್ನನ್ನು ಪಕ್ಷದ ಯಾವ ನಾಯಕರೂ ಬೈದಿಲ್ಲ, ಗಂಭೀರ ಎಚ್ಚರಿಕೆ ನೀಡಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.
ಹಾದಿ ಬೀದಿಯಲ್ಲಿರುವವರ ಹೇಳಿಕೆಗೆ ಉತ್ತರಿಸುವಷ್ಟು ಕೆಳಹಂತದ ರಾಜಕೀಯ ನಾಯಕ ನಾನಲ್ಲ. ಘನತೆ ಹೊಂದಿರುವ ನಾಯಕರ ಬಗ್ಗೆ ಮಾತ್ರ ಕೇಳಿ. ಇಂಥವರ ಬಗ್ಗೆ ಹೇಳುವುದನ್ನು ಈಗಾಗಲೇ ಹೇಳಿದ್ದೇನೆ. ಪದೇ ಪದೇ ಅಂಥವರ ಹೆಸರನ್ನು ನನ್ನೆದುರು ತೆಗೆಯಬೇಡಿ ಎಂದರು.
ಯಾವನೋ ಒಬ್ಬ ನನ್ನನ್ನು ಹುಚ್ಚ ಎನ್ನುತ್ತಾನೆ, ಮತ್ತೊಬ್ಬ ಉತ್ತರ ಕುಮಾರ ಎನ್ನುತ್ತಾನೆ. ಮತ್ತೆ ಅದೇ ವ್ಯಕ್ತಿ ಯತ್ನಾಳ ನಮ್ಮ ಪಕ್ಷದ ಆಸ್ತಿ ಎನ್ನುತ್ತಾನೆ. ಇಂಥವರ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.