Advertisement
ಮಂಗಳವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಜ್ಞಾನ, ಯೋಗ ಮತ್ತು ಸಮಾಜದಲ್ಲಿರುವ ಜನರ ಕುರಿತು ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಸಾರ್ವಕಾಲಿಕ ಆದರ್ಶ ಸಂದೇಶ ನೀಡಿದ್ದಾರೆ ಎಂದು ಬಣ್ಣಿಸಿದರು. ಸೊಲ್ಲಾಪುರದ ವರ್ತಕರು ವ್ಯಾಪಾರಕ್ಕೆಂದು ವಿಜಯಪುರಕ್ಕೆ ಬಂದಾಗ ಕರ್ಮಯೋಗಿ, ಶಿವಯೋಗಿ ಸಿದ್ಧರಾಮೇಶ್ವರ ಪ್ರತಿರೂಪವನ್ನು ನಗರದಲ್ಲಿ ಪ್ರತಿಷ್ಠಾಪಿಸಿ, ನಿತ್ಯ ಅವರಿಗೆ ಕೈ ಮುಗಿದು ವ್ಯಾಪಾರವನ್ನು ಆರಂಭಿಸಿದರು. ಅಂದಿನಿಂದ ಆರಂಭಗೊಂಡಿರುವ ಸಿದ್ಧೇಶ್ವರರ ದೇವಸ್ಥಾನದಲ್ಲಿನ ನಿತ್ಯ ಪೂಜೆ, ಹಬ್ಬಗಳಲ್ಲಿ ವಿಶೇಷ ಪೂಜೆ, ಸಂಕ್ರಾಂತಿ ಸಂದರ್ಭದಲ್ಲಿ ಜಾತ್ರೆ ಇಂದಿಗೂ ಮುಂದುವರಿದಿದೆ ಎಂದರು.
ವಚನಕಾರರಲ್ಲಿ ಪ್ರಮುಖರಾಗಿರುವ ಸಿದ್ಧರಾಮೇಶ್ವರ ಶರಣರು 68 ಸಾವಿರ ವಚನಗಳನ್ನು ರಚಿಸಿದ್ದು, ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣರ ವಚನಗಳ ಕಟ್ಟುಗಳನ್ನು ನಾಶ ಮಾಡಿದಾಗ ಸಿದ್ಧರಾಮೇಶ್ವರರ ವಚನಗಳೂ ನಾಶವಾಗಿದೆ. ಇದರ ಹೊರತಾಗಿಯೂ ಈವರೆಗೆ 1679 ವಚನಗಳು ಮಾತ್ರ ದೊರಕಿವೆ ಎಂದು ವಿವರಿಸಿದರು.
ಜಿಪಂ ಮುಖ್ಯ ಯೋಜನಾ ಧಿಕಾರಿ ನಿಂಗಪ್ಪ ಗೋಠೆ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್ .ಜಿ. ಪೂಜೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ, ರಾಮು ಹೊಸಪೇಟೆ, ನಾಗಪ್ಪ ವಡ್ಡರ, ಪರಶುರಾಮ ಗುಂಜಲಕರ್, ಜ್ಞಾನೇಶ್ವರ ಹಾಲಕುಂಠೆ, ವಿ.ಸಿ. ನಾಗಠಾಣ ಇದ್ದರು. ದೂರದರ್ಶನ-ಆಕಾಶವಾಣಿ ಕಲಾವಿದೆ ಅಶ್ವಿನಿ ಹಿರೇಮಠ ಸಿದ್ಧರಾಮೇಶ್ವರರ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾಕ್ಷಿ ಹಿರೇಮಠ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್.ಎ. ಮಮದಾಪುರ ನಿರೂಪಿಸಿದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ಉಪ ನಿರ್ದೇಶಕ ಎಸ್.ಜಿ. ಲೋಣಿ ವಂದಿಸಿದರು.