Advertisement
ಬುಧವಾರ ನಗರದ ಕಂದಗಲ್ಲ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಾಜಿ ಮಹಾರಾಜ ವಿಭಿನ್ನ ಮತ್ತು ವಿಶೇಷ ಸಾಮರ್ಥ್ಯ ಹೊಂದಿದ್ದ ಅಪ್ರತಿಮ ಧೈರ್ಯ, ಶೌರ್ಯ, ಸಾಹಸ ಪರಾಕ್ರಮಿ ವೀರನಾಗಿದ್ದ. ರಾಣಾ ಪ್ರತಾಪರ ರೌದ್ರತೆ ಜೊತೆಗೆ ಚಾಣಕ್ಯನ ನೀತಿಯನ್ನೂ ಹೊಂದಿದ್ದರು ಎಂದರು.
Related Articles
Advertisement
ಉಪನ್ಯಾಸಕ ಮಂಜುನಾಥ ಜುನಗೊಂಡ ಮಾಯನಾಡಿ, ಭಾರತೀಯರ ಪಾಲಿಗೆ ಶಿವಾಜಿ ಹೃದಯ ಸಾಮ್ರಾಟನಾಗಿದ್ದರೂ ಇಸ್ಲಾಂ ಮತವನ್ನು ದ್ವೇಷಿಸಲಿಲ್ಲ. ಹೋರಾಟದ ಹಾದಿಯಲ್ಲಿ ಸಿಕ್ಕ ಕುರಾನ್ ಧರ್ಮ ಗ್ರಂಥಕ್ಕೆ ಗೌರವ ಸಲ್ಲಿಸಿದ್ದಲ್ಲದೇ ಹಾಗೂ ಇಸ್ಲಾಂ ಮಹಿಳೆಯರಿಗೆ ಗೌರವ ತೋರಿದ್ದಾರೆ. ಮತೀಯ ಸಹಿಷ್ಣುಗಳಾಗಿದ್ದ ಶಿವಾಜಿ ಮಹಾರಾಜರು ಇಂದಿನ ಆಡಳಿತಗಾರರಿಗೆ ಪ್ರೇರಣೆಯಾಗಲಿ ಎಂದರು.
ಬಡವರ, ರೈತರ, ಸ್ತ್ರೀ ಮತ್ತು ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತಿದ್ದರು. ಸಾಮ್ರಾಜ್ಯದ ವಿಸ್ತಾರದ ನೀತಿ ಹೊಂದಿರದೆ ಅತ್ಯುತ್ತಮ ಆಡಳಿತ ನಡೆಸಿದ್ದ ಶಿವಾಜಿ ಮಹಾರಾಜರ ಆದರ್ಶ ಪ್ರತಿಯೊಬ್ಬರಿಗೆ ಮಾದರಿಯಾಗಿ ಅಳವಡಿಸಿಕೊಂಡರೆ ಭಾರತ ವಿಶ್ವಗುರು ಆಗುವ ಕನಸು ನನಸಾಗುತ್ತದೆ ಎಂದರು.
ರಂಗಕರ್ಮಿ ಡಿ.ಎಚ್. ಕೋಲಾರ, ಮುತ್ತುರಾಜ, ಹನುಮಂತ ಕುಲಕರ್ಣಿ, ಮಂಜುಳಾ ಹಿಪ್ಪರಗಿ ಸಂಗಡಿಗರು ಮಾತೃ ವಾತ್ಸಲ್ಯದ ಪ್ರತೀಕ ನಾಟಕ ಪ್ರಸ್ತುತ ಪಡಿಸಿದರು. ರಾಮನಗೌಡ ಪಾಟೀಲ ಯತ್ನಾಳ, ವಿಜಯಕುಮಾರ ಚವ್ಹಾಣ, ಅರುಣ ಕದಂ, ರಾಜು ಜಾಧವ, ಪರಶುರಾಮ ರಜಪೂತ, ಶಂಕರ ಕನ್ಸೆ, ಶಿವಾಜಿ ಗಾಯಕವಾಡ, ಆನಂದ ಮಾಳೆ, ಜ್ಯೋತಿಬಾ ಸಿಂಧೆ ಇದ್ದರು.
ನಿರ್ಮಲಾ ಥೀಟೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್.ಎ. ಮಮದಾಪುರ ನಿರೂಪಿಸಿದರು.