Advertisement

41 ಕೇಂದ್ರದಲ್ಲಿ ನಾಳೆ ಪರೀಕ್ಷೆ

11:51 AM Jun 17, 2020 | Naveen |

ವಿಜಯಪುರ: ದ್ವಿತೀಯ ಪಿಯು ಇಂಗ್ಲಿಷ್‌ ವಿಷಯದ ವಾರ್ಷಿಕ ಪರೀಕ್ಷೆ ಜೂ. 18ರಂದು ನಡೆಯಲಿದ್ದು 23,556 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದು ಜಿಲ್ಲೆಯಲ್ಲಿ 41 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

Advertisement

ಪರೀಕ್ಷಾ ಕೇಂದ್ರದ ಸುತ್ತ 200 ಮೀ. ಅಂತರದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಈ ಪರಿಮಿತಿಯಲ್ಲಿ ಝರಾಕ್ಸ್‌, ಸೈಬರ್‌ಕೆಫೆ, ಕೋಚಿಂಗ್‌ ಕ್ಲಾಸ್‌ ಬಂದ್‌ ಮಾಡಲಾಗುತ್ತದೆ. ಕೋವಿಡ್‌-19 ಕೋವಿಡ್ ವೈರಸ್‌ ಹರಡಿರುವ ಪ್ರಯುಕ್ತ ಪರೀಕ್ಷೆಗೆ ಬರುವ ಪ್ರತಿ ವಿದ್ಯಾರ್ಥಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌, ಕುಡಿಯಲು ನೀರಿನ ಬಾಟಲ್‌ ಎರಡು ಪೆನ್‌ ಮಾತ್ರ ತರಬೇಕು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾನರ್‌ ತಪಾಸಣೆ ಮಾಡುವ ಜೊತೆಗೆ ಸಾಮಾಜಿಕ ಅಂತರ ಪಾಲನೆಗೆ ಸೂಚಿಸಲಾಗಿದೆ. ಪರೀಕ್ಷಾರ್ಥಿಗಳು ಜೂ. 18ರಂದು ಬೆಳಗ್ಗೆ 8ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ನಿಗದಿತ ಸಮಯ ಮೀರಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಎಂದರು.

ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಇಲಾಖೆ ನಿಯಮಾನುಸಾರ ಈ ಕಚೇರಿಯಿಂದ ಪ್ರಾಚಾರ್ಯರು-ಉಪನ್ಯಾಸಕರನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ನೋಡಲ್‌ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್‌ ನಿಂದ ಸ್ವತ್ಛ ಮಾಡಿದ ಬಗ್ಗೆ ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ನಿರ್ವಹಣೆ, ಪರೀಕ್ಷಾರ್ಥಿಗಳಿಗೆ ಆಸನ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌ ಪರೀಕ್ಷೆಯಂತ ವ್ಯವಸ್ಥೆ ಕುರಿತು ನಿಗಾ ವಹಿಸಲಿದ್ದಾರೆ ಎಂದರು.

ಕಂಟೈನ್ಮೆಂಟ್‌ ಝೋನ್‌ ಪ್ರದೇಶ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗೆ ಹೊರ ರಾಜ್ಯಗಳಿಂದ ನಾಲ್ವರು ವಿದ್ಯಾರ್ಥಿಗಳು (ಮುಂಬೈನ ಠಾಣೆ, ಪುಣೆ, ಸೊಲ್ಲಾಪುರ) ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 917 ಪರೀಕ್ಷಾರ್ಥಿಗಳು ವಿಜಯಪುರ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರಗಳು
ವಿಜಯಪುರ ನಗರ 12, ಬಬಲೇಶ್ವರ 1, ತಿಕೋಟಾ 1, ಚಡಚಣ ತಾಲೂಕು 3, ಇಂಡಿ ತಾಲೂಕು 4, ಸಿಂದಗಿ ನಗರ 3, ದೇವರಹಿಪ್ಪರಗಿ ತಾಲೂಕು 1, ತಾಳಿಕೋಟೆ ತಾಲೂಕು 4, ಬಸವನಬಾಗೇವಾಡಿ ತಾಲೂಕು 4, ನಿಡಗುಂದಿ ತಾಲೂಕು 2, ಮುದ್ದೇಬಿಹಾಳ ತಾಲೂಕು 4 ಹಾಗೂ ಆಲಮೇಲ ತಾಲೂಕಲ್ಲಿ 2 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ವಿಜಯಪುರ ನಗರದ ಬಾಲಕರ ಸ.ಪ.ಪೂ ಕಾಲೇಜು 1370 ಪರೀಕ್ಷಾರ್ಥಿಗಳಿದ್ದಾರೆ. ಹೀಗಾಗಿ 734343ರಿಂದ 734930 ಸಂಖ್ಯೆವರೆಗೆ ಸಿಕ್ಯಾಬ್‌ ತಾಂತ್ರಿಕ ಕಾಲೇಜಿನಲ್ಲಿ ಹೆಚ್ಚುವರಿ ಬ್ಲಾಕ್‌ ಮಾಡಿ 504 ಪರೀಕ್ಷಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಪರೀಕ್ಷಾ ಕೇಂದ್ರದ ಸುತ್ತ 200 ಮೀ. ಅಂತರದಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಪರಿಮಿತಿಯಲ್ಲಿ ಝರಾಕ್ಸ್‌, ಸೈಬರ್‌ಕೆಫೆ, ಕೋಚಿಂಗ್‌ ಕ್ಲಾಸ್‌ ಬಂದ್‌ ಮಾಡಲಾಗುತ್ತದೆ.
ವೈ.ಎಸ್‌. ಪಾಟೀಲ,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next