Advertisement

ಬಸವಣ್ಣ ನಿಗೂ ಆಯುರ್ವೇದದ ಅರಿವಿತ್ತು: ಡಾ|ಬನ್ನಿ ಗೋಳ

06:12 PM Feb 07, 2020 | Naveen |

ವಿಜಯಪುರ: ವಚನ ಚಳವಳಿ ರೂವಾರಿ ವಿಶ್ವಗುರು ಬಸವೇಶ್ವರರು ಆಯುರ್ವೇದ ಶಾಸ್ತ್ರದ ವೈಶಿಷ್ಟತೆಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನೂ ಮಾಡಿದ್ದರು. ಅದರಂತೆ ಆಧುನಿಕ ಯುಗದಲ್ಲಿ ಆಯುರ್ವೇದ ಶಾಸ್ತ್ರದ ಕುರಿತು ಪ್ರತಿಯೊಬ್ಬರಿಗೆ ತಲುಪಿಸುವ ಕಾರ್ಯವನ್ನು ದೇಶದ ಸಂತ ಮಹಾಂತರು ಮಾಡಬೇಕಿದೆ ಎಂದು ನವದೆಹಲಿಯ ಭಾರತೀಯ ವೈದ್ಯ ಪದ್ಧತಿ ಪರಿಷತ್‌ ಸದಸ್ಯ ಡಾ| ಶ್ರೀನಿವಾಸ ಬನ್ನಿಗೋಳ ತಿಳಿಸಿದರು.

Advertisement

ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್‌ ಆಯುರ್ವೇದ ಕಾಲೇಜಿನಲ್ಲಿ ರಾಜೀವ ಗಾಂಧಿ  ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ವೈಜ್ಞಾನಿಕ ಲೇಖನ ಮತ್ತು ಪ್ರಬಂಧ ಪ್ರಕಟಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಯುರ್ವೇದ ಕಾಲೇಜು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಆಯುರ್ವೇದ ಪದ್ಧತಿಗಳ ವಿಶೇಷತೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಜೊತೆಗೆ ಮುಂದಿನ ಪೀಳೆಗೆಗೂ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವದ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು.

ಸಿಸಿಐಎಂ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಆನಂದ ಕಿರಿಶಾಳ ಮಾತನಾಡಿ, “ಕೊರೊನಾ’ ಮಹಾಮಾರಿ ಇಂದು ಕಾಲಿರಿಸಿದ್ದು, ಈ ವೈರಸ್‌ ಜೊತೆ ಹೋರಾಡುವ ಅಸ್ತ್ರ ಆಯುರ್ವೇದ ಶಾಸ್ತ್ರಕ್ಕೆ ಇದೆ ಎಂಬುದನ್ನು ಅರಿತು ಆಯುಷ ಇಲಾಖೆ ಆಯುರ್ವೇದಲ್ಲಿರುವ ವಿಶೇಷ ಔಷಧಿ ಗಳನ್ನು ಅಳವಡಿಕೆ ಬಗ್ಗೆ ಲೇಖನ ರೂಪದಲ್ಲಿ ಜನ ಸಮುದಾಯಕ್ಕೆ ನೀಡಬೇಕಿದೆ ಎಂದರು.

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನಾ ಧಿಕಾರಿ ಡಾ| ಆನಂದ ಕಟ್ಟಿ ಮಾತನಾಡಿ, ಪ್ರಸಕ್ತ
ದಿನಮಾನದಲ್ಲಿ ಎಲ್ಲರೂ ಒಪ್ಪುವಂತ ದೃಷ್ಠಿಕೋನ ಒಳಗೊಂಡ ಲೇಖನಗಳನ್ನು ಹೊರತರುವಂತಹ ಕಾರ್ಯದಲ್ಲಿ ಪ್ರವೃತ್ತರಾಗಬೇಕು ಎಂದರು.

ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಡಾ| ಆರ್‌.ವಿ.ಕುಲಕರ್ಣಿ, ಪ್ರಾಚಾರ್ಯ ಡಾ| ಸಂಜಯ ಕಡ್ಲಿಮಟ್ಟಿ, ಡಾ| ಮಹಾಂತೇಶ ಬಿರಾದಾರ ಇದ್ದರು. ಮೈಸೂರು ಸರಕಾರಿ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಡಾ| ವಿ.ರಾಜೇಂದ್ರ, ಡಾ| ಶ್ರೀವತ್ಸ, ಹಾಸನದ ಎಸ್‌. ಡಿ.ಎಂ. ಕಾಲೇಜಿನ ಡಾ| ಕೆ.ಜೆ.ಗಿರೀಶ ಸೇರಿದಂತೆ ಉತ್ತರ ಕರ್ನಾಟಕದ ಆಯುಷ ವಿಭಾಗದ 20 ಆಯುರ್ವೇದ ಮಹಾವಿದ್ಯಾಲಯಗಳಿಂದ 100ಕ್ಕೂ ಹೆಚ್ಚು ಸಹಾಯಕ ಅಧ್ಯಾಪಕರು ಆಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next