Advertisement

Vijayapura; ಸಾಹಿಲ್ ಭಾಂಗಿ ಹತ್ಯೆ ಕೇಸ್: ನಾಲ್ವರು ಆರೋಪಿಗಳ ಬಂಧನ

10:48 PM Dec 15, 2023 | Team Udayavani |

ವಿಜಯಪುರ: ನಗರದ ಝಂಡಾ ಕಟ್ಟಿ ಪರಿಸರದಲ್ಲಿ ಡಿ.10 ರಂದು ನಡೆದಿದ್ದ ಸಾಹಿಲ್ ಭಾಂಗಿ ಹತ್ಯಾ ಪ್ರಕರಣ ಬೇಧಿಸಿರುವ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನಗರದ ಗೋಲಗುಂಬಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ10 ರಂದು ಸಾಹಿಲ್ ಭಾಂಗಿ ಎಂಬ ಯುವಕನನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ, ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಹತ್ಯೆ ಮಾಡಿ, ಆರೋಪಗಳು ತಲೆ ಕರೆಸಿಕೊಂಡಿದ್ದರು. ಮೃತ ಸಾಹಿಲ್ ನ ಮಾವ ತನ್ವೀರ ಇನಾಮದಾರ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ತಲೆ ಕರೆಸಿಕೊಂಡ ಆರೋಪಿಗಳ ಬಂಧನ ಸೇರಿದಂತೆ ಪ್ರಕರಣದ ಸಮಗ್ರ ತನಿಖೆಗೆ ಎಸ್ಪಿ ಋಷಿಕೇಶ ಭಗವಾನ್ ಸಿಪಿಐ ಪ್ರದೀಪ ತಳಕೇರಿ, ಎಸೈಗಳಾದ ರಾಜು ಪೂಜಾರಿ ಹಾಗೂ ಬಿ.ಎನ್. ಸುಷ್ಮಾ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.

ತನಿಖೆಯ ಜೊತೆಗೆ ಆರೋಪಿಗಳ ಬಂಧನಕ್ಕೆ ಮುಂದಾದ ಪೊಲೀಸರು ನಗರದ ಜಾಮಿಯಾ‌ ಮಸೀದಿ ಪ್ರದೇಶದ ನಿವಾಸಿಗಳಾದ ಸಮೀರ ಇನಾಮದಾರ (20), ಮೊಹಮದ್ ಖೈಫ್ ಮುಲ್ಲಾ (18.06), ಬಿಲಾಲ್ ಇನಾಮದಾರ(23) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ತಲೆಮರೆಸಿಕೊಂಡ ಮತ್ತೋರ್ವ ಆರೋಪಿ ತೌಫಿಕ್ ಇನಾಮದಾರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಸಾಹಿಲ್ ಹತ್ಯೆಗೆ ಪ್ರಮುಖವಾಗಿ ಬಂಧಿತ ಮೂವರು ಆರೋಪಿಗಳ ಜತೆ ಹೊಂದಿದ್ದ ಬೇರೆ ಬೇರೆ ಕಾರಣಗಳನ್ನು ಪೊಲೀಸರ ತನಿಖೆಯ ಸಂದರ್ಭದಲ್ಲಿ ಆರೋಪಗಳು ಬಾಯಿ ಬಿಟ್ಟಿದ್ದಾರೆ.

Advertisement

ಸಾಹಿಲ್ ಹಾಗೂ ಸಮೀರ ಇಬ್ಬರೂ ಜತೆಯಾಗಿ ಮನೆಗಳನ್ನು ಕಳ್ಳತನ ಮಾಡಿದಾಗ ಹಣ ಹಂಚಿಕೊಳ್ಳುವಲ್ಲಿ ವೈಮನಸ್ಸು ಉಂಟಾಗಿತ್ತು.ಮತ್ತೊಂದೆಡೆ ಸಾಹಿಲ್ ತನ್ನ ತಂಗಿಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಮೊಹಮದ್ ಖೈಫ್ ಕೂಡ ಹಗೆ ಸಾಧಿಸುತ್ತಿದ್ದ.

ಇದಲ್ಲದೇ ಸಾಹಿಲ್ ಮನೆ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಸೆರೆ ಸಿಕ್ಕಾಗ ಪ್ರಕರಣಗಳಲ್ಲಿ ಸಂಬಂಧವೇ ಇಲ್ಲದ ಬಿಲಾಲ್ ಕೂಡ ತನ್ನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಸುಳ್ಳು ಹೇಳಿದ್ದ.ಹೀಗೆ ಮೂವರೊಂದಿಗೆ ಬೇರೆಬೇರೆ ಕಾರಣಕ್ಕೆ ಹೊಂದಿದ್ದ ಧ್ವೇಷದಿಂದ ಮೂವರೂ ಆರೋಪಿಗಳು ಸಂಘಟಿತರಾಗಿ, ಮತ್ತಿಬ್ಬರ ಸಹಕಾರದಿಂದ ಸಾಹಿಲ್ ಇನಾಮದಾರ ವಿರುದ್ಧ ಸಂಚು ರೂಪಿಸಿ, ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಪ್ರಕರಣವನ್ನು ಬೇಧಿಸಿದ್ದಲ್ಲದೇ ತಲೆ ಕರೆಸಿಕೊಂಡಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ತನಿಖಾ ತಂಡಕ್ಕೆ ಎಸ್ಪಿ ಋಷಿಕೇಶ ಭಗವಾನ್ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next