Advertisement

ರಾತ್ರಿ ವೇಳೆ ರಸ್ತೆ ಮೇಲೆ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ : ಇಬ್ಬರ ಸಾವು

12:22 PM Nov 23, 2021 | Team Udayavani |

ವಿಜಯಪುರ : ರಾತ್ರಿ ವೇಳೆ ಪಾರ್ಕಿಂಗ್ ಲೈಟ್ ಇಲ್ಲದೇ ಕಬ್ಬು ತುಂಬಿದ ಟ್ರಾಕ್ಟರ್ ರಸ್ತೆ ಮೇಲೆ ನಿಂತಿದ್ದರಿಂದ ವೇಗವಾಗಿ ಬರುತ್ತಿದ್ದ ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟ ಘೋಷಣೆ ಕೊಲ್ಹಾರ ತಾಲೂಕಿನ ತೆಲಗಿ ಬಳಿ ಸಂಭವಿಸಿದೆ.

Advertisement

ಅಪಘಾತದಲ್ಲಿ ಮೃತರನ್ನು ಚೀರಲದಿನ್ನಿ ಗ್ರಾಮದ ಬೈಕ್ ಚಲಾಯಿಸುತ್ತಿದ್ದ ಈರಣ್ಣ ವಾಲಿಕಾರ (22) ಹಾಗೂ ಹಿಂಬದಿ ಸವಾರ ಸಿದ್ದಣ್ಣಗೌಡ ಜಮದರಕಾನೆ (22) ಎಂದು ಗುರುತಿಸಲಾಗಿದೆ.

ಸೋಮವಾರ ತಡ ರಾತ್ರಿ ಕೂಡಗಿ ಗ್ರಾಮದಿಂದ ಇಬ್ನರು ಯುವಕರು ಚೀರಲದಿನ್ನಿ ಗ್ರಾಮಕ್ಕೆ ಬೈಕನಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಕಬ್ಬು ತುಂಬಿದ್ದ ಟ್ರಾಕ್ಟರ್ ಪಾರ್ಕಿಂಗ್ ಲೈಟ್ ಸೇರಿದಂತೆ ಯಾವುದೇ ಸೂಚನೆ ನೀಡದೇ ನಿಲ್ಲಿಸಲಾಗಿತ್ತು. ಈ ವೇಳೆ ಕತ್ತಲಲ್ಲಿ ಟ್ರ್ಯಾಕ್ಟರ್ ನಿಂತಿರುವುದು ಕಾಣದೇ ಬೈಕ್ ಡಿಕ್ಕಿಯಾಗಿ, ಇಬ್ಬರು ಸಾವಿಗೀಡಾಗಿದ್ದಾರೆ.

ಘಟನಾಸ್ಥಳಕ್ಕೆ ಬಸವನಬಾಗೇವಾಡಿ ಡಿವೈಎಸ್ಪಿ, ಸಿಪಿಐ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಕುರಿತು ಕೂಡಗಿ ಎನ್.ಟಿ.ಪಿ.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ

Advertisement

Udayavani is now on Telegram. Click here to join our channel and stay updated with the latest news.

Next